Latest Videos

ಧ್ವನಿ ಬಳಿಕ ಪ್ರಜ್ವಲ್ ರೇವಣ್ಣಗೆ ಅಂಗಾಂಗ ಪರೀಕ್ಷೆ ಸಂಕಷ್ಟ?: ಕಾರಣವೇನು!

By Kannadaprabha NewsFirst Published Jun 14, 2024, 10:05 AM IST
Highlights

ಲೈಂಗಿಕ ದೌರ್ಜನ್ಯ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಧ್ವನಿ ಪರೀಕ್ಷೆ ಬಳಿಕ ಈಗ ಅಂಗಾಂಗ ಪರೀಕ್ಷೆಯ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. 

ಗಿರೀಶ್ ಮಾದೇನಹಳ್ಳಿ

ಬೆಂಗಳೂರು (ಜೂ.14): ಲೈಂಗಿಕ ದೌರ್ಜನ್ಯ ಆರೋಪಗಳ ಸುಳಿಯಲ್ಲಿ ಸಿಲುಕಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಧ್ವನಿ ಪರೀಕ್ಷೆ ಬಳಿಕ ಈಗ ಅಂಗಾಂಗ ಪರೀಕ್ಷೆಯ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಲೋಕಸಭಾ ಚುನಾವಣಾ ಹೊತ್ತಿನಲ್ಲಿ ಪ್ರಜ್ವಲ್‌ಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವಿಡಿಯೋಗಳು ತುಂಬಿದ್ದ ಪೆನ್‌ಡ್ರೈವ್ ಬಹಿರಂಗವಾಗಿದ್ದವು. ಈ ವಿಡಿಯೋಗಳಲ್ಲಿ ಧ್ವನಿ ಮಾತ್ರವಲ್ಲದೆ ಪುರುಷನೊಬ್ಬನಕೈ ಹಾಗೂಸೊಂಟದ ಕೆಳಗಿನ ಅಂಗಗಳು ಗೋಚರಿಸುತ್ತವೆ. 

ಹೀಗಾಗಿ ಆ ವಿಡಿಯೋಗಳಲ್ಲಿ ಕಾಣುವ ಪುರುಷನ ಪತ್ತೆಗೆ ಎಸ್‌ಐಟಿ ಮುಂದಾಗಿದೆ ಎಂದು ಗೊತ್ತಾಗಿದೆ. ಈ ಕಾರಣಕ್ಕೆ ಅಶ್ಲೀಲ ವಿಡಿಯೋಗಳಲ್ಲಿನ ಅಪರಿಚಿತ ವ್ಯಕ್ತಿಯ ಅಂಗಗಳಿಗೂ ಮಾಜಿ ಸಂಸದಪ್ರಜ್ವಲ್‌ ಅವರಅಂಗಗಳಿಗೂಹೋಲಿಕೆ ಮಾಡಲು ತನಿಖಾ ತಂಡ ಚಿಂತನೆ ನಡೆಸಿದೆ. ಈ ಪರೀಕ್ಷೆಗೆ ಗುಜರಾತ್ ರಾಜ್ಯದಅಹಮದಾಬಾದ್‌ನವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ ಎಸ್ಎಲ್) ಹಾಗೂವಿದೇಶಿ ತಜ್ಞರ ನೆರವನ್ನು ಎಸ್‌ಐಟಿ ಪಡೆಯಲಿದೆ ಎನ್ನಲಾಗಿದೆ. 

ನಟ ದರ್ಶನ್‌ ಪಾರು ಮಾಡಲು ಯತ್ನಿಸಿದ್ದ ಪಟ್ಟಣಗೆರೆ ವಿನಯ್‌!

ಈಗಾಗಲೇ ಪೆನ್‌ಡ್ರೈವ್‌ವಿಡಿಯೋಗಳನ್ನು ಆಧರಿಸಿ ಪ್ರಜ್ವಲ್ ಅವರಧ್ವನಿಪರೀಕ್ಷೆನಡೆಸಲು ಧ್ವನಿಮಾದರಿಯನ್ನು ಪಡೆದು ಎಫ್‌ಎಸ್‌ಎಲ್ ಗೆ ಎಸ್‌ಐಟಿ ರವಾನಿಸಿದೆ.  ಅಂತೆಯೇ ಅಶ್ಲೀಲ ವಿಡಿಯೋಗಳಲ್ಲಿನ ಮುಖ ಮಾಚಿಕೊಂಡಿರುವ ವ್ಯಕ್ತಿ ಪತ್ತೆಗೆ ಎಸ್‌ಐಟಿ ಅಂಗಾಂಗ ಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬಂದಿದೆ. ಈ ಅಂಗಾಂಗಗಳ ಪರೀಕ್ಷೆ ಸಹ ಪ್ರಜ್ವಲ್ ಅವರ ವಿಡಿಯೋವನ್ನು ವೈದ್ಯಕೀಯ ತಪಾಸಣೆ ವೇಳೆ ಮಾಡಲಾಗಿದ್ದು, ಅದನ್ನು ಎಫ್‌ಎಸ್‌ಎಲ್ ಸಲ್ಲಿಸಲಿದೆ ಎಂದು ತಿಳಿದು ಬಂದಿದೆ. 

ಯಾಕೆ ಪರೀಕ್ಷೆ?: ಪತ್ರ ಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಹಂತಕನ ಪತ್ತೆಗೆ 'ಗೇಟ್ ಅನಾಲಿಸಿಸ್' ಎಂಬ ವೈಜ್ಞಾನಿಕ ಪರೀಕ್ಷೆಯನ್ನು ಅಂದು ಎಸ್‌ಐಟಿ ನಡೆಸಿತ್ತು. ಗೌರಿ ಲಂಕೇಶ್ ಗುಂಡು ಹಾರಿಸಲು ಬಂದ ಆರೋಪಿ ಪರಶುರಾಮ್ ವಾಗೋರೆಯ ಅಸ್ಪಷ್ಟ ಮುಖಚಹರೆ ಮೃತರ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. ಅಲ್ಲದೆ ಗೇಟ್ ತೆರೆದು ಆತ ಒಳ ಬರುವ ದೃಶ್ಯ ಸಿಕ್ಕಿತು. ಆರೋಪಿ ಬಂಧನವಾದಬಳಿಕ ಆತನನ್ನು ಮತ್ತೆ ಗೌರಿ ಲಂಕೇಶ್ ಅವರ ಮನೆಗೆ ಕರೆದೊಯ್ದು ಹತ್ಯೆ ಕೃತ್ಯ ಮರುಸೃಷ್ಟಿಸಿ ಚಿತ್ರೀಕರಣ ಮಾಡಲಾಯಿತು. ಆನಂತರ ಸಿಸಿಟಿವಿ ಹಾಗೂ ಮರು ಸೃಷ್ಟಿಯ ವಿಡಿಯೋಗಳನ್ನು ಆಧರಿಸಿ ಗುಜರಾತ್ ರಾಜ್ಯದ ಅಹಮದಾಬಾದ್‌ನ ಎಫ್‌ಎಸ್‌ಎಲ್‌ತಜ್ಞರಿಂದಗೇಟ್ ಅನಾಲಿಸಿಸ್ ಅನ್ನು ಎಸ್‌ಐಟಿ ಅಧಿಕಾರಿಗಳು ನಡೆಸಿದ್ದರು.

ಆಗಗೇಟ್‌ ತೆರೆದುಗೌರಿ ಅವರಿಗೆ ಗುಂಡಿಟ್ಟಿದ್ದು ಪರಶುರಾಮ್ ವಾಗೋರೆ ಎಂದು ಎಫ್‌ಎಸ್ ಐಲ್ ತಜ್ಞರು ವರದಿ ನೀಡಿದ್ದರು. ಅದೇ ಗೇಟ್ ಅನಾಲಿಸಿಸ್ ಮಾದರಿಯನ್ನು ಪ್ರಜ್ವಲ್ ವಿರುದ್ಧ ಪ್ರಕರಣಕ್ಕೂ ಅತ್ಯಾಚಾರ ಅನುಸರಿಸಲು ಮುಂದಾಗಿದೆ ಎಂದು ವಿಶ್ವಸನೀಯ ಎಸ್‌ಐಟಿ ಮೂಲಗಳು 'ಕನ್ನಡಪ್ರಭ' ಕ್ಕೆ ಮಾಹಿತಿನೀಡಿವೆ. ಇನ್ನು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಗೆ ರಚಿತವಾಗಿದ್ದ ಎಸ್ ಐಟಿಗೂ ಎಡಿಜಿಪಿ ಬಿ.ಕೆ.ಸಿಂಗ್ ಅವರೇ ಮುಖ್ಯಸ್ಥರಾಗಿದ್ದರು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಮುಂದುವರಿದ ವಿಚಾರಣೆ, ದರ್ಶನ್‌ ಮೌನ: ಆದರೆ ಕೃತ್ಯಗಳ ಬಗ್ಗೆ ಬಾಯಿ ಬಿಡುತ್ತಿರುವ ನಟನ ಆಪ್ತರು

ಆಧುನಿಕ ತಂತ್ರಜ್ಞಾನ ಬಳಕೆ: ಗೇಟ್ ಅನಾಲಿಸಿಸ್ ಬಳಿಕ ವಿಡಿಯೋಗಳ ವಿಶ್ಲೇಷಣೆ ಸಂಬಂಧ ವೈಜ್ಞಾನಿಕವಾಗಿ ಬಹಳಷ್ಟು ಅವಿಷ್ಕಾರಗಳು ನಡೆದಿವೆ. ಮುಂದುವರಿದ ತಂತ್ರಜ್ಞಾನ ಬಳಸಿಕೊಂಡು ಈ ಅಶ್ಲೀಲ ವಿಡಿಯೋಗಳ ವಿಶ್ಲೇಷಣೆ ನಡೆಯಲಿದೆ. ಇದರಲ್ಲಿ ಮನುಷ್ಯ ದೇಹದ ಪ್ರತಿ ಅಂಗವನ್ನು ಅತ್ಯಂತ ಸೂಕ್ಷ್ಮವಾಗಿ ಅಷ್ಟೇ ನಿಖರವಾಗಿ ವಿಶ್ಲೇಷಣೆ ನಡೆಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ಕೊಲೆ ಪ್ರಕರಣಗಳಲ್ಲಿ ಗೇಟ್ ಅನಾಲಿಸಿಸ್ ವೈಜ್ಞಾನಿಕ ಪದ್ಧತಿಯನ್ನು ಬಳಸಲಾಗಿತ್ತು. ಆವಿಚಾರವನ್ನು ತಿಳಿದುಕೊಂಡೇ ಗೌರಿ ಲಂಕೇಶ್ ಹತ್ಯೆಗೆ ವೈಜ್ಞಾನಿಕತೆ ಬಳಸಲಾಯಿತು. ಈ ಕೃತ್ಯದ ನಡೆದ ಆರು ವರ್ಷಗಳು ಕಳೆದಿವೆ. ಹೀಗಾಗಿ ವೈಜ್ಞಾನಿಕವಾಗಿ ಸಾಕಷ್ಟು ಉತ್ಕೃಷ್ಟತೆ ಹೊಂದಿದ ಆ್ಯಪ್‌ಗಳುಸಹಬಂದಿವೆ. ಅವುಗಳನ್ನು ಅಶ್ಲೀಲ ವಿಡಿಯೋಗಳ ವಿಶ್ಲೇಷಣೆಗೆ ಬಳಸಲಾಗುತ್ತದೆ ಎಂದು ಮೂಲಗಳು ವಿವರಿಸಿವೆ.

click me!