ಸಚಿವ ಸಂಪುಟ ರಚನೆ ಬೆನ್ನಲ್ಲೇ ಅಧಿಕಾರಿಗಳ ವರ್ಗಾವಣೆ: ಹಣಕಾಸು ಇಲಾಖೆ ಭದ್ರತೆಗೂ ಕಸರತ್ತು

By Sathish Kumar KHFirst Published Jun 1, 2023, 10:59 PM IST
Highlights

ರಾಜ್ಯದಲ್ಲಿ ತೀವ್ರ ಕಸರತ್ತು ನಡೆಸಿ ಸಚಿವ ಸಂಪುಟ ರಚನೆ ಮಾಡಿದ ಕಾಂಗ್ರೆಸ್‌ ಸರ್ಕಾರ ಪ್ರಮುಖ ಇಲಾಖೆಗಳ ಹಿರಿಯ ಐಎಎಸ್‌ ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಿದೆ.

ಬೆಂಗಳೂರು (ಜೂ 01): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೀವ್ರ ಕಸರತ್ತು ನಡೆಸಿ ಸಚಿವ ಸಂಪುಟ ರಚಿಸಿ ಖಾತೆಗಳನ್ನು ಹಂಚಿಕೆ ಮಾಡಿದೆ. ಈಗ ಆಯಾ ಸಚಿವರಿಗೆ ಆಪ್ತರು ಎನಿಸಿಕೊಂಡ ಹಿರಿಯ ಅಧಿಕಾರಿಗಳನ್ನು ವರ್ಗಾವಣೆ ಕೂಡ ಮಾಡಲಾಗಿದೆ. 

ರಾಜ್ಯದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುತ್ತಿದ್ದಂತೆ ಮುಖ್ಯಮಂತ್ರಿ ಖುರ್ಚಿ, ಸಚಿವಗಿರಿ ಖುರ್ಚಿ ನಂತರ ಖಾತೆಗಳ ಹಂಚಿಕೆ ವಿಚಾರದಲ್ಲಿ ತೀವ್ರ ಪೈಪೋಟಿ ನಡೆಸಿದ ಕಾಂಗ್ರೆಸ್‌ ನಾಯಕರು ಈಗ ಸರ್ಕಾರವನ್ನು ಮುನ್ನಡೆಸಲು ರಥವನ್ನು ಆರಂಭಿಸಿದ್ದಾರೆ. ಆದರೆ, ಆಯಾ ಸಚಿವಾಲಯಕ್ಕೆ ಸಂಬಂಧಿಸಿದಂತೆ ಮಂತ್ರಿಗಳಿಗೆ ಸೂಕ್ತ ಸಾರಥಿಗಳು (ಸಚಿವಾಲಯದ ಹಿರಿಯ ಅಧಿಕಾರಿಗಳು) ಕೂಡ ಅಗತ್ಯವಾಗಿರತ್ತಾರೆ. ಆದ್ದರಿಂದ ಸಚಿವ ಸಂಪುಟದ ರಚನೆಯ ಬೆನ್ನಲ್ಲೇ ಈಗ ರಾಜ್ಯದ ಬಹುತೇಕ ಇಲಾಖೆಗಳ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ನಡೆದಾಡುವ ದೇವರನ್ನೇ ವಿಧಾನಸೌಧದಿಂದ ಹೊರಹಾಕಿದ ಕಾಂಗ್ರೆಸ್‌! ಕೇಸರಿ ಮೇಲಿನ ದ್ವೇಷವೆಂದ ಬಿಜೆಪಿ

  • ಹಿರಿಯ ಅಧಿಕಾರಿಗಳ ವರ್ಗಾವಣೆ:
  • ರಾಜೇಂದ್ರ ಕುಮಾರ್ ಕಟಾರಿಯಾ - ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ
  • ಪಂಕಜ್ ಕುಮಾರ್ ಪಾಂಡೆ - ವ್ಯವಸ್ಥಾಪಕ ನಿರ್ದೇಶಕರು, ಕೆಪಿಟಿಸಿಎಲ್.
  • ಡಾ.ಮಂಜುಳಾ - ಕಾರ್ಯದರ್ಶಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ. 
  • ಶರತ್. ಬಿ - ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿಗಮ. 
  • ಜಯರಾಮ್ - ವಾರ್ತಾ ಇಲಾಖೆ ಕಾರ್ಯದರ್ಶಿ ಹೊಣೆಗಾರಿಕೆ

ಹಣಕಾಸು ಇಲಾಖೆಗೆ ಅತೀಕ್‌ಗೆ ಮಣೆ ಹಾಕಿದ ಸರ್ಕಾರ: ರಾಜ್ಯದಲ್ಲಿ ಆರ್ಥಿಕತೆ ಸುಭದ್ರವಾಗಿಡುವ ನಿಟ್ಟಿನಲ್ಲಿ ಹಣಕಾಸು ಇಲಾಖೆಗೆ ಸೂಕ್ತ ಅಧಿಕಾರಿಗಳನ್ನು ನೇಮಕ ಮಾಡುವುದು ಸರ್ಕಾರದ ಪ್ರಮುಖ ಕಾರ್ಯವಾಗಿರುತ್ತದೆ. ಇಲ್ಲವಾದಲ್ಲಿ ಹಿರಿಯ ಅಧಿಕಾರಿಗಳು ಅಥವಾ ಸಚಿವರ ಒತ್ತಡದ ಮೇರೆಗೆ ಸರ್ಕಾರದ ವಾರ್ಷಿಕ ಆದಾಯಕ್ಕಿಂತ ಹೆಚ್ಚುವರಿಯಾಗಿ ಬೇಕಾಬಿಟ್ಟು ಹಣವನ್ನು ಹಂಚಿಕೆ ಮಾಡಿದರೆ ದಿವಾಳಿ ಆಗುವುದು ಕೂಡ ಖಚಿತ. ಈ ಹಿನ್ನೆಲೆಯಲ್ಲಿ ಹಿರಿಯ ಐಎಎಸ್‌ ಅಧಿಕಾರಿ ಐಎಸ್ಎನ್‌ ಪ್ರಸಾದ್‌ ಅವರ ಹಲವು ವರ್ಷಗಳಿಂದ ಹಣಕಾಸು ಇಲಾಖೆಯಲ್ಲಿಯೇ ಇದ್ದು ಸಮರ್ಥವಾಗಿ ಹುದ್ದೆಯನ್ನು ನಿಭಾಯಿಸಿದ್ದಾರೆ. ಆದರೆ, ಪ್ರಸಾದ್‌ ಅವರು ಜೂ.30ಕ್ಕೆ ನಿವೃತ್ತಿ ಹೊಂದಲಿದ್ದು, ಅವರ ಜಾಗಕ್ಕೆ ಮತ್ತೊಮ್ಮ ದಕ್ಷ ಮತ್ತು ಸೂಕ್ತ ಅಧಿಕಾರಿಯನ್ನು ನೇಮಕ ಮಾಡುವ ಉದ್ದೇಶದಿಂದ ಐಎಎಸ್‌ ಅಧಿಕಾರಿ ಎಲ್.ಕೆ.ಅತೀಖ್ ಅವರನ್ನು ಹಣಕಾಸು ಇಲಾಖೆ ವಿಶೇಷಾಧಿಕಾರಿಯಾಗಿ ನೇಮಕ ಮಾಡಲಾಗಿದೆ. ಈಗ ಅತೀಕ್‌ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಆಗಿರುವ ಎಲ್ ಕೆ ಅತೀಖ್ ಗೆ ಹಣಕಾಸು ಇಲಾಖೆ ವಿಶೇಷಾಧಿಕಾರಿ ಜವಾಬ್ದಾರಿ ನೀಡಲಾಗಿದೆ. 

ನಮ್ಮನ್ನ ಬಳಸ್ಕೊಂಡು ಅಕ್ರಮವಾಗಿ ಹಣ ಗಳಿಸಿರೋ ಜನಾರ್ಧರೆಡ್ಡಿ, ನಮಗೇ ರಣಹೇಡಿಗಳು ಅಂತಾನೆ!

ಸಿಎಂ ರಾಜಕೀಯ ಕಾರ್ಯದರ್ಶಿಗಳ ನೇಮಕ: ವಿಧಾನಪರಿಷತ್ ಸದಸ್ಯ ಗೋವಿಂದ ರಾಜ್ - ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಜೊತೆಗೆ, ಇವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ ಆದೇಶ ಹೊರಡಿಸಲಾಗಿದೆ. ಮತ್ತೊಬ್ಬ ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಅವರನ್ನೂ ಕೂಡ ಮುಖ್ಯಮಂತ್ರಿ ಗಳ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಳ್ಳಲಾಗಿದ್ದು, ಇವರಿಗೂ ಸಂಪುಟ ದರ್ಜೆ ಸ್ಥಾನಮಾನ ಕೊಡಲಾಗಿದೆ. ಜೊತೆಗೆ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ನೇಮಕ ಮಾಡಲಾಗಿದೆ.

click me!