2028ರ ಚುನಾವಣೆಗೆ ಸಿಎಂ ಸ್ಥಾನ ಕೇಳುವೆ: ಸತೀಶ್‌ ಜಾರಕಿಹೊಳಿ

By Kannadaprabha News  |  First Published Nov 8, 2023, 3:18 AM IST

ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಾನು\B 2028ರ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ಮುಖ್ಯಮಂತ್ರಿ ಸ್ಥಾನವನ್ನು ಕ್ಲೇಮ್‌ ಮಾಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.


ಬೆಂಗಳೂರು (ನ.8) :  ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನಾನು\B 2028ರ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ವೇಳೆಗೆ ಮುಖ್ಯಮಂತ್ರಿ ಸ್ಥಾನವನ್ನು ಕ್ಲೇಮ್‌ ಮಾಡುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಎದ್ದಿರುವ ದಲಿತ ಮುಖ್ಯಮಂತ್ರಿ ಕೂಗು ಹಾಗೂ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರು ತಾವು ಮುಂದೆ ಮುಖ್ಯಮಂತ್ರಿ ಆಗುವುದಾಗಿ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು.

Latest Videos

undefined

ದಲಿತ ಸಿಎಂ ವಿಚಾರ ನಮ್ಮ ಕೈಯಲ್ಲಿ ಇಲ್ಲ. ಎಐಸಿಸಿ ಅಧ್ಯಕ್ಷರಿದ್ದಾರೆ, ಹೈಕಮಾಂಡ್‌ ಇದೆ. ಜೊತೆಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಇದ್ದಾರೆ. ಎರಡು ವರ್ಷದ ನಂತರ ಏನಾಗುತ್ತೆ ಎಂದು ಅವರೇ ತೀರ್ಮಾನ ಮಾಡುತ್ತಾರೆ. ಸ್ವಾಮೀಜಿಗಳು ನಮ್ಮ ಸಮುದಾಯದ ಪರವಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಈಗ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲವಲ್ಲ. ನಾನು ಮುಂದಿನ 2028ರ ಚುನಾವಣೆ ವೇಳೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಲೈಂ ಮಾಡ್ತೇನೆ ಎಂದರು.

ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಹೊಸದೇನಲ್ಲ 2013ರಿಂದಲೂ ಓಡುತ್ತಲೇ ಇದೆ. ಆಗ 5‌ ವರ್ಷ ಅದೇ ಓಡಿತು. ಆದರೆ, ಸಿನೆಮಾ ಬಿಡುಗಡೆ ಆಗಲಿಲ್ಲ. ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯದಲ್ಲಿದ್ದಾಗಲೂ ಅವಕಾಶ ಆಗಲಿಲ್ಲ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು 8 ವರ್ಷ ಅಧ್ಯಕ್ಷರಾಗಿದ್ದರು. ಅವರಿಗೂ ಸಾಧ್ಯವಾಗಲಿಲ್ಲ. ಈಗ ಮತ್ತೆ ದಲಿತ ಸಿಎಂ ವಿಚಾರ ಎದ್ದಿದೆ. ಸಿನೆಮಾ ಯಾವಾಗ ಬಿಡುಗಡೆಯಾಗುತ್ತೆ ಎಂದು ಕಾದು ನೋಡಬೇಕು. ಅಲ್ಲದೆ, ಕಾಂಗ್ರೆಸ್‌ನಲ್ಲಿ ನಾನು ಯಾವುದೇ ಪವರ್ ಸೆಂಟರ್ ಅಲ್ಲ. ಮೂರನೇ ಪವರ್ ಸೆಂಟರ್ ಅಲ್ಲ. ನಮ್ಮದು ಒಂದೇ ಪವರ್ ಸೆಂಟರ್, ಅದು ಹೈ ಕಮಾಂಡ್ ಎಂದು ಸ್ಪಷ್ಟಪಡಿಸಿದರು.

ಶನಿವಾರ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಭೆಗೆ ಗೈರು ವಿಚಾರವಾಗಿ, ಅನಾರೋಗ್ಯದ ಕಾರಣ ನಾನು ಸಭೆಗೆ ಬಂದಿರಲಿಲ್ಲ. ಅದನ್ನು ಅವರ ಗಮನಕ್ಕೆ ತಂದಿದ್ದೆ. ಬರಲಿಲ್ಲ ಅಂದಕೂಡಲೆ ಬೇರೆ ಅರ್ಥ ಕಲ್ಪಿಸುವುದು ಬೇಡ. ನಾನು ಇಲ್ಲದಿದ್ದರೂ ಅಲ್ಲಿಯ ತೀರ್ಮಾನ ನನ್ನನ್ನೂ ಒಳಗೊಂಡು ಎಲ್ಲರಿಗೂ ಅನ್ವಯವಾಗುತ್ತೆ ಎಂದರು.

ಜಾತಿ ಗಣತಿ ವರದಿ ಸಾರ್ವಜನಿಕ ಚರ್ಚೆಯಾಗಲಿ:

ಕಾಂತರಾಜ್‌ ಆಯೋಗದ ಜಾತಿ ಗಣತಿ ವರದಿಗೆ ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದವರಿಂದ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಆ ಸಮುದಾಯದವರಿಗೆ ತಮ್ಮ ಒಳಪಂಗಡಗಳನ್ನು ಬಿಟ್ಟಿದ್ದಾರೆ ಎಂಬ ಆತಂಕ ‌ಇರಬಹುದು. ಇದನ್ನೆಲ್ಲಾ ವರದಿಯಲ್ಲಿ ‌ಸೇರಿಸಬಹುದು. ಆದರೆ, ಜಾತಿಗಣತಿ ವರದಿ ಇನ್ನೂ ಸರ್ಕಾರಕ್ಕೆ ಬರಬೇಕು. ಕ್ಯಾಬಿನೆಟ್ ನಲ್ಲಿ ಒಪ್ಪಿಗೆಯಾಗಬೇಕು. ಬಳಿಕ ಎರಡು ಸದನದಲ್ಲಿ ಪರ ವಿರೋಧ ಚರ್ಚೆಯಾಗಬೇಕು. ವರದಿ ಬಗೆಗೆ ಸಾರ್ವಜನಿಕ ಚರ್ಚೆ ಆಗಲಿ. ತಪ್ಪಿದ್ದರೆ ಮತ್ತೊಮ್ಮೆ ಮಾಡಲಿ ಎಂದರು.

click me!