Breaking: ಕರ್ನಾಟಕದ ಈ 9 ಜಿಲ್ಲೆಗಳು ಲಾಕ್‌ಡೌನ್‌ಗೆ ರಾಜ್ಯ ಸರ್ಕಾರ ಆದೇಶ

By Suvarna NewsFirst Published Mar 22, 2020, 3:03 PM IST
Highlights

ರಾಜ್ಯದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮಗೊಳ್ಳುತ್ತಿದ್ದು, ಒಂದರ ಮೇಲೊಂದು ಮಹತ್ವದ ನಿರ್ಧಾರಗಳನ್ನ ಕೈಗೊಳ್ಳುತ್ತಿದೆ.

ಬೆಂಗಳೂರು,(ಮಾ.22):  ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜ್ಯದ ಒಟ್ಟು 9 ಜಿಲ್ಲೆಗಳನ್ನ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

"

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ (ಮಂಗಳೂರು), ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬೆಳಗಾವಿ  ಜಿಲ್ಲೆಗಳನ್ನ ಮಾರ್ಚ್ 31ರ ವರಗೆ ಸಂಪೂರ್ಣ ಬಂದ್ ಮಾಡುವಂತೆ ರಾಜ್ಯ ಸರ್ಕಾರ ಸೂಚಿಸಿದೆ.

ಒಂದೇ ಒಂದು ಫೋನ್ ಕಾಲ್: ತಾವೇ ಕಾರು ಸ್ಟಾರ್ಟ್ ಮಾಡ್ಕೊಂಡು ಹೋದ ಗೃಹ ಸಚಿವ

 ಮುಂಜಾಗ್ರತಾ ಕ್ರಮವಾಗಿ ಕೊರೋನಾ ವೈರಸ್ ಕೇಸ್ ಪತ್ತೆಯಾದ ಈ 9 ಜಿಲ್ಲೆಗಳನ್ನ ಲಾಕ್‌ಡೌನ್ ಮಾಡಲು ಸರ್ಕಾರ ಆದೇಶಿಸಿದೆ. ಜನರು ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ದಿನ ನಿತ್ಯದ ವಸ್ತುಗಳು ದೊರೆಯಲಿವೆ ಎಂದು ಸರ್ಕಾರ ತಿಳಿಸಿದೆ. ತುರ್ತು ಸೇವೆಗಳನ್ನ ಹೊರತುಪಡಿಸಿ ಉಳಿದೆಲ್ಲಾ ಸೌಲಭ್ಯಗಳು ಸಿಗುವುದಿಲ್ಲ.

ಬಹುಮುಖ್ಯವಾಗಿ ಸೋಮವಾರ ನಡೆಯಲಿರುವ ಕೊನೆ ಪರೀಕ್ಷೆ ನಡೆಯಲಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೇ ಸರ್ಕಾರಿ ಕಚೇರಿಗಳು ಕಾರ್ಯಚರಣೆ ಇರಲಿವೆ ಎಂದು ತಿಳಿಸಿದರು.

ಇನ್ನು ಬೆಂಗಳೂರಿನಲ್ಲಿ ಮೆಟ್ರೋ ಸೇವೆ ಇರುವುದಿಲ್ಲ. ಹಾಗೂ ರಾಜ್ಯಾದ್ಯಂತ ಸರ್ಕಾರಿ ಬಸ್ ಸಂಚಾರ ಇರುವುದಿಲ್ಲ. ಆಟೋ, ಕ್ಯಾಬ್‌ಗಳು ಇರುತ್ತವೆ ಎಂದು ಬೊಮ್ಮಾಯಿ ಹೇಳಿದರು. ಆದ್ದರಿಂದ ಈ ಆರು ಜಿಲ್ಲೆಯ ಜನರು ಆದಷ್ಟೂ ಎಲ್ಲೂ ಹೋಗದೇ ಮನೆಯಲ್ಲಿಯೇ ಇರುವುದು ಸೂಕ್ತ.

ಈ ಜಿಲ್ಲೆಗಳಲ್ಲಿ ಏನು ಸಿಗಲ್ಲ
* ಜಿಲ್ಲೆಯಿಂದ ಬೇರೆ ಊರುಗಳಿಗೆ ತೆರಳು ಬಸ್ ಇರಲ್ಲ.
*ಗುಂಪು-ಗುಂಪಾಗಿ ಸೇರುವಂತಿಲ್ಲ.
* ಸರಕು ಸಾಗಣಿಕೆಗೆ ಅನುಮತಿ ಇಲ್ಲ.
* ಬಸ್, ಆಟೋ, ಕ್ಯಾಬ್ ಇರಲ್ಲ.
* ಬಾರ್, ರೆಸ್ಟೋರೆಂಟ್ ಬಂದ್
* ಗೂಡ್ಸ್ ವಾಹನ ಮಾಲ್, ಚಿತ್ರಮಂದಿರಗಳು ಇರಲ್ಲ.

ಏನು ಸಿಗುತ್ತೇ 
*ಆಸ್ಪತ್ರೆ
* ಮೆಡಿಕಲ್ ಶಾಪ್
* ನೀರು ಸರಬರಾಜು ಇರುತ್ತೆ.
* ತುರ್ತು ಸೇವೆಗಳು ಲಭ್ಯ.
* ಆಂಬ್ಯುಲೆನ್ಸ್
ಮಾರ್ಚ್ 22ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!