ಟೌನ್ ಬಳಿ ಸಿಎಎ ಪರ ಭಾಷಣ ಮಾಡಿದ್ದ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಮಾಸ್ಟರ್ ಮೈಂಡ್ ಅಜರ್ ನನ್ನು ನಾಲ್ಕು ವರ್ಷಗಳ ನಂತರ ಬಂಧಿಸಲಾಗಿದೆ.
ಬೆಂಗಳೂರು (ಮಾ.5): ಟೌನ್ ಬಳಿ ಸಿಎಎ ಪರ ಭಾಷಣ ಮಾಡಿದ್ದ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಮಾಸ್ಟರ್ ಮೈಂಡ್ ಅಜರ್ ನನ್ನು ನಾಲ್ಕು ವರ್ಷಗಳ ನಂತರ ಬಂಧಿಸಲಾಗಿದೆ. ಬೆಂಗಳೂರಿನ ಕಲಾಸಿಪಾಳ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕಳೆದ ನಾಲ್ಕು ವರ್ಷಗಳಿಂದ ಆರೋಪಿ ಅಜರ್ ತಲೆಮರೆಸಿಕೊಂಡಿದ್ದ
2019 ರಲ್ಲಿ ಸಿಎಎ ವಿಚಾರವಾಗಿ ಟೌನ್ ಹಾಲ್ ಬಳಿ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿಸೂರ್ಯ, ಚಕ್ರವರ್ತಿ ಸೂಲಿಬೆಲೆ ಸಿಎಎ ಪರ ಭಾಷಣ ಮಾಡಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆರಳುತ್ತಿದ್ದ ವರುಣ್ ಎಂಬಾತನ ಮೇಲೆ ಹಲ್ಲೆಯಾಗಿತ್ತು. ಮುಖಂಡರ ಹತ್ಯೆ ಮಿಸ್ಸಾಗಿ ವರುಣ್ ಮೇಲೆ ಹಲ್ಲೆಯಾಗಿತ್ತು. ಘಟನೆಯ ನಂತರ 6 ಮಂದಿ ಆರೋಪಿಗಳನ್ನ ಬಂಧಿಸಲಾಗಿತ್ತು. ಘಟನೆ ಸಂಬಂಧ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Rameshwaram Cafe Blast ದೇಶದಾದ್ಯಂತ 17 ಕಡೆ ಎನ್‌ಐಎ ದಿಢೀರ್ ದಾಳಿ, ಐವರು ಅರೆಸ್ಟ್
ಕಳೆದ ನಾಲ್ಕು ವರ್ಷಗಳಿಂದ ಆ ಪ್ರಕರಣದ ಪ್ರಮುಖ ಆರೋಪಿ ಅಜರ್ ಎಸ್ಕೇಪ್ ಆಗಿದ್ದ. ಘಟನೆಯ ಬಳಿಕ ಸೌದಿಗೆ ಎಸ್ಕೇಪ್ ಆಗಿದ್ದ. ತನ್ನ ಪತ್ನಿಯ ಸಹೋದರರು ಸೌದಿಯಲ್ಲಿ ಇದ್ದ ಹಿನ್ನೆಲೆ ಅಲ್ಲಿಗೆ ಎಸ್ಕೇಪ್ ಆಗಿದ್ದ. ಐದು ತಿಂಗಳು ಸೌದಿಯಲ್ಲಿ ತಲೆಮರೆಸಿಕೊಂಡಿದ್ದ ಅಜರ್ ಬಳಿಕ ಅಲ್ಲಿಂದ ತನ್ನ ಪತ್ನಿಯ ಮನೆಗೆ ಬಂದಿದ್ದ. ಅಲ್ಲಿಂದ ಬಂದ ಬಳಿಕ ಕೋಲಾರದ ಬಂಗಾರಪೇಟೆಯಲ್ಲಿರುವ ಪತ್ನಿಯ ಮನೆಯಲ್ಲಿ ವಾಸವಿದ್ದ.
ಕಳೆದ ನಾಲ್ಕು ವರ್ಷಗಳಿಂದ ಪತ್ನಿಯ ಮನೆಯಲ್ಲಿ ಇದ್ದುಕೊಂಡು ಕಾರು ಡಿಲಿಂಗ್ ಮಾಡಿಕೊಂಡಿದ್ದ. ಅಜರ್ ಗಾಗಿ ಎನ್ ಐ ಎ ಅಧಿಕಾರಿಗಳು ಕೂಡ ಸಾಕಷ್ಟು ಹುಡುಕಾಟ ನಡೆಸಿದ್ದರು. ಸದ್ಯ ಅಜರ್ ಬಗ್ಗೆ ಮಾಹಿತಿ ಕಲೆ ಹಾಕಿ ಬಂಗಾರ ಪೇಟೆ ಹೆಂಡತಿ ಮನೆಯಲ್ಲಿದ್ದಾಗ ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಚುನಾವಣಾ ಬಾಂಡ್ ಮಾಹಿತಿ ಬಹಿರಂಗ: ಜೂ.30ರವರೆಗೆ ಸಮಯ ಕೇಳಿದ ಎಸ್‌ಬಿಐ
ಇಂಟರೆಸ್ಟಿಂಗ್ ಅಂದ್ರೆ ಅಜರ್ ಬಗ್ಗೆ ಆ ಒಂದು ನಂಬರ್ ನಿಂದ ಮಾಹಿತಿ ಲಭ್ಯವಾಗಿತ್ತು. ಆ ನಂಬರ್ ನ ಕಾಲ್ ಡಿಟೇಲ್ ತೆಗೆದು ಕಲಾಸಿಪಾಳ್ಯ ಪೊಲೀಸರು ಮಾಹಿತಿ ಕಲೆ ಹಾಕಿದರು. ಈ ವೇಳೆ ಬಂಗಾರಪೇಟೆಯಲ್ಲಿ ಕಾರ್ ಡಿಲಿಂಗ್ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಆರೋಪಿಯ ಪೋಟೊ ತೋರಿಸಿ ಮನೆಗೆ ಹೋಗಿ ಬಂಧನ ಮಾಡಲಾಗಿದೆ.
ಆರೋಪಿಯನ್ನ ಬಂಧಿಸಿ ವಶಕ್ಕೆ ಪಡೆದ ಪೊಲೀಸರು ನ್ಯಾಯಾಲಯದ ಸೂಚನೆಯಂತೆ 14 ದಿನ ತಮ್ಮ ವಶದಲ್ಲಿ ಇರಿಸಿಕೊಳ್ಳಲಿದ್ದಾರೆ. ವರುಣ್ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಈತ ಮಾಸ್ಟರ್ ಮೈಂಡ್ ಅಗಿದ್ದ. ಘಟನೆಯ ಬಳಿಕ ಪೂರ್ವ ನಿಯೋಜಿತ ಪ್ಲಾನ್ ನಂತೆಯೇ ಸೌದಿಗೆ ಎಸ್ಕೇಪ್ ಆಗಿದ್ದ. ಎಸ್ ಡಿ ಪಿ ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಆರೋಪಿ ಅಜರ್.