ಜ್ವರಕ್ಕೆ ಕಾರಣ ಪತ್ತೆ ಹಚ್ಚುವ ಉಪಕರಣ ಕಂಡು ಹಿಡಿದ ಯುವ ವಿಜ್ಞಾನಿ ಕೋಮಲ್‌!

By Kannadaprabha News  |  First Published Oct 9, 2023, 7:43 AM IST

ಜ್ವರಕ್ಕೆ ಕಾರಣವನ್ನು ಖಚಿತವಾಗಿ ಪತ್ತೆ ಹಚ್ಚು ಉಪಕರಣ ಕಂಡು ಹಿಡಿದ ಕೋಮಲ್‌ ಮನುಷ್ಯರಿಗೆ ಬರುವ ಜ್ವರದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚುವ ಸೆಲ್‌ ಫೇಸ್‌ (cell Face) ಎಂಬ ಆಧುನಿಕ ತಂತ್ರಜ್ಞಾನದ ಸಲಕರಣೆಯೊಂದನ್ನು ಅರಕಲಗೂಡು ಮೂಲದ ಯುವ ವಿಜ್ಞಾನಿ ಡಾ. ಕೋಮಲ್ ಕುಮಾರ್‌ ಸಂಶೋಧಿಸಿದ್ದಾರೆ. 


ಅರಕಲಗೂಡು (ಅ.09): ಜ್ವರಕ್ಕೆ ಕಾರಣವನ್ನು ಖಚಿತವಾಗಿ ಪತ್ತೆ ಹಚ್ಚು ಉಪಕರಣ ಕಂಡು ಹಿಡಿದ ಕೋಮಲ್‌ ಮನುಷ್ಯರಿಗೆ ಬರುವ ಜ್ವರದ ಕಾರಣವನ್ನು ನಿಖರವಾಗಿ ಪತ್ತೆ ಹಚ್ಚುವ ಸೆಲ್‌ ಫೇಸ್‌ (cell Face) ಎಂಬ ಆಧುನಿಕ ತಂತ್ರಜ್ಞಾನದ ಸಲಕರಣೆಯೊಂದನ್ನು ಅರಕಲಗೂಡು ಮೂಲದ ಯುವ ವಿಜ್ಞಾನಿ ಡಾ. ಕೋಮಲ್ ಕುಮಾರ್‌ ಸಂಶೋಧಿಸಿದ್ದಾರೆ. ಈ ಕುರಿತು ಇವರು ಮಂಡಿಸಿರುವ ಪ್ರಬಂಧವು ಇಂಗ್ಲೆಂಡ್ ದೇಶದ ಪ್ರತಿಷ್ಠಿತ ವಿಜ್ಞಾನ ಮಾಧ್ಯಮ ಸೆಲೆಕ್ಟ್ ಸೈನ್ಸ್ ( SELECTSEIENCE)ನಲ್ಲಿ ಪ್ರಕಟವಾಗಿದೆ.

ಕೋಮಲ್‌ ಕುಮಾರ್‌ ಜರ್ಮನಿ ದೇಶದ ಟುಮ್‌ (TUM) ಸಂಸ್ಥೆಯ ಪ್ರೊ. ಅಲಿವರ್‌ ಹೈಡನ್‌ ಮತ್ತು ಪ್ರೊ. ಪರ್ಸಿನೊಲ್ಲೆ ಮಾರ್ಗದರ್ಶನದಲ್ಲಿ ಸಂಶೋಧಿಸಿರುವ ಈ ಉಪಕರಣದಿಂದ ಮನುಷ್ಯರಿಗೆ ಬರುವ ಜ್ವರವು ವೈರಸ್‌ನಿಂದ ಬಂದಿದೆಯೆ ಅಥವಾ ಬ್ಯಾಕ್ಟೀರಿಯಾದಿಂದ ಬಂದಿದೆಯೆ ಎಂಬುದನ್ನು ಖಚಿತವಾಗಿ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಾಯಕವಾಗಿದೆ. ಇದುವರೆಗಿನ ವೈದ್ಯಕೀಯ ತಂತ್ರಜ್ಞಾನದ ಸಲಕರಣೆಗಳಲ್ಲಿ ಜ್ವರದ ಕಾರಣದ ಪತ್ತೆ ಕಾರ್ಯ ಶೇ.50ರಷ್ಟು ಮಾತ್ರ ಸಾಧ್ಯತೆ ಇತ್ತು. 

Latest Videos

undefined

ಆನೇಕಲ್ ಪಟಾಕಿ ದುರಂತ, ಮಾಲೀಕನ ಮೇಲೆ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ: ಸಿದ್ದರಾಮಯ್ಯ

ಹೊಸ ಆವಿಷ್ಕಾರದ ತಂತ್ರಜ್ಞಾನದ ಸಲಕರಣೆ ಮೂಲಕ ಶೇ.100 ರಷ್ಟು ಖಚಿತವಾಗಿ ಕಾರಣವನ್ನು ಪತ್ತೆ ಮಾಡಿ ಅಗತ್ಯ ಚಿಕಿತ್ಸೆ ನೀಡಲು ಸಹಕಾರಿಯಾಗಿದೆ ಎಂದು ಕೋಮಲ್‌ ಕುಮಾರ್‌ ತಿಳಿಸಿದ್ದಾರೆ. ಪಟ್ಟಣದ ರತ್ನಮ್ಮ ಹಾಗೂ ದಿ ಜವರಪ್ಪ ಅವರ ಪುತ್ರರಾದ ಡಾ. ಜೆ. ಕೋಮಲ್ ಕುಮಾರ್‌ ಸಿಂಗಪೂರ್ ನ ಪ್ರತಿಷ್ಠಿತ ಸಂಶೋಧನಾ ಕೇಂದ್ರ ಟುಮ್ ಕ್ರಿಯೇಟ್ (TUMCREATE) ವಿಜ್ಞಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

click me!