ರಾಮಮಂದಿರಕ್ಕೆ ಮೂಹೂರ್ತ ನೀಡಿದ್ದ ವಿದ್ವಾಂಸಗೆ ಬೆದರಿಕೆ!

Published : Aug 04, 2020, 08:00 AM ISTUpdated : Aug 04, 2020, 09:45 AM IST
ರಾಮಮಂದಿರಕ್ಕೆ ಮೂಹೂರ್ತ ನೀಡಿದ್ದ ವಿದ್ವಾಂಸಗೆ ಬೆದರಿಕೆ!

ಸಾರಾಂಶ

ರಾಮಮಂದಿರಕ್ಕೆ ಮೂಹೂರ್ತ ನೀಡಿದ್ದ ವಿದ್ವಾಂಸಗೆ ಬೆದರಿಕೆ| ಹಲ​ವ​ರಿಂದ ಬೆದ​ರಿಕೆ| ವಿಜ​ಯೇಂದ್ರ ಶರ್ಮಾಗೆ ಪೊಲೀಸ್‌ ಭದ್ರತೆ

ಬೆಳಗಾವಿ(ಆ.04): ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಡ ನಿರ್ಮಾಣ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮುಹೂರ್ತ ನೀಡಿದ್ದ ಬೆಳಗಾವಿಯ ವಿದ್ವಾಂಸ ಎನ್‌.ಆರ್‌.ವಿಜಯೇಂದ್ರ ಶರ್ಮಾ ಅವರಿಗೆ ದೇಶದ ನಾನಾ ಭಾಗಗಳಿಂದ ಅನಾಮಿಕ ಜೀವ ಬೆದರಿಕೆ ಕರೆಗಳು ಬಂದಿವೆ.

"

ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ಏಕೆ ಕೊಟ್ಟಿದ್ದೀರಿ? ಎಂದು ನನಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ವಿಜಯೇಂದ್ರ ಶರ್ಮಾ ಟಿಳಕವಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸ್ತ್ರೀನಗರದಲ್ಲಿರುವ ವಿದ್ಯಾ ವಿಹಾರ ವಿದ್ಯಾಲಯಕ್ಕೆ ಒಬ್ಬ ಪೊಲೀಸ್‌ ಪೇದೆಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಅಯೋಧ್ಯೆ ಜಗಮಗ: ಭೂಮಿಪೂಜೆಯ ಧಾರ್ಮಿಕ ವಿಧಿವಿಧಾನ ಆರಂಭ!

ವಿದ್ಯಾವಿಹಾರ ವಿದ್ಯಾಲಯದ ಕುಲಪತಿ ಆಗಿರುವ ವಿಜಯೇಂದ್ರ ಶರ್ಮಾ ಅವರು ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಸಮಾರಂಭಕ್ಕೆ ನಾಲ್ಕು ಮೂಹೂರ್ತಗಳನ್ನು ನೀಡಿದ್ದರು. ಈ ಪೈಕಿ ಆ.5ರ ಮುಹೂರ್ತವನ್ನು ಆಯ್ಕೆ ಮಾಡಲಾಳ್ಳಲಾಗಿದೆ ಎನ್ನ​ಲಾ​ಗು​ತ್ತಿ​ದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!
ರಾಜ್ಯದಲ್ಲಿ ಕೈ ಮೀರಿದ ಕಳ್ಳರ ಹಾವಳಿ, ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲ? ಪೊಲೀಸರ ಮನೆಗಳನ್ನೇ ಬಿಡುತ್ತಿಲ್ಲ ಖದೀಮರು!