
ಬನ್ನೂರು (ಸೆ.25): ಹಳ್ಳಿಕಾರ್ ರಾಸುಗಳು ದೇಶೀಯ ತಳಿಗಳಾಗಿದ್ದು, ಇವುಗಳನ್ನು ಉಳಿಸಿ ಬೆಳೆಸಬೇಕು. ನಾವು ಎಲ್ಲೇ ಹೋದರು ಹಳ್ಳಿಕಾರ್ ತಳಿಗಳನ್ನು ನಮ್ಮ ಭಾರತದ ತಳಿಗಳೆಂದು ಹೇಳಿಕೊಳ್ಳಲು ಬಹಳಷ್ಟು ಹೆಮ್ಮಯಾಗುತ್ತದೆ ಎಂದು ಚಲನಚಿತ್ರ ನಟ ದರ್ಶನ್ ತಿಳಿಸಿದರು. ಪಟ್ಟಣದಲ್ಲಿ ಗಂಗಸೇನೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಅಶ್ವಿನಿ ಚಾರಿಟಬಲ್ ಟ್ರಸ್ಟ್‌ನ ಡಾ. ರಾಹುಲ್ ಗೌಡ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ನೈಸರ್ಗಿಕ ಕೃಷಿಕರಿಗೆ 100 ಹಳ್ಳಿಕಾರ್ ತಳಿಗಳ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ರಾಸುಗಳನ್ನು ಪಡೆದುಕೊಳ್ಳುವುದು ಮುಖ್ಯವಲ್ಲ. ಪಡೆದವರು ಆ ತಳಿಗಳನ್ನು ಅಭಿವೃದ್ಧಿಪಡಿಸಬೇಕೆಂದು, ಸೂಕ್ತ ರೀತಿಯಲ್ಲಿ ರಾಸುಗಳನ್ನು ಪಾಲನೆ ಮಾಡಬೇಕೆಂದು ಕಿವಿಮಾತು ಹೇಳಿದರು.
ತಮಿಳುನಾಡಿಗೆ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ಕ್ರಮ ಖಂಡನೀಯ. ಚಿತ್ರರಂಗದಲ್ಲಿ ಕೇವಲ ದರ್ಶನ್, ಸುದೀಪ್, ಶಿವಣ್ಣ ಮಾತ್ರವೇ ಇಂತಹ ಸಂದರ್ಭದಲ್ಲಿ ನೆನಪಿಗೆ ಬರುತ್ತಾರ ಎಂದ ಅವರು ಮೊದಲು ರಾಜ್ಯದ ಜನರ ರಕ್ಷಣೆಗೆ ಮುಂದಾಗಿ. ಇಲ್ಲಿನ ರೈತಾಪಿ ವರ್ಗಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆಲಸವಾಗಲಿ ಎಂದು ತಿಳಿಸಿದರು. ಈ ಹಿಂದೆ ಬನ್ನೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಹೇಂದ್ರಸಿಂಗ್ ಕಾಳಪ್ಪ ಅವರಿಗೆ ಹೊಡೆದೆ ಎನ್ನುವ ಸುದ್ದಿಯೂ ಪ್ರಚಲಿತವಾಗಿತ್ತು. ಆತನಿಗೆ ತಾವು ಪ್ರೀತಿಯಿಂದ ಮಾತನಾಡಿಸಿದ್ದಾಗಿ ಸಮಜಾಯಿಸಿಯನ್ನು ನೀಡಿದರು.
ಭತ್ತದ ಬೆಳೆಗೆ ಭದ್ರಾ ನೀರಿಗಾಗಿ ರೈತರ ಆಗ್ರಹ: ಇಂದು ದಾವಣಗೆರೆ ಜಿಲ್ಲೆ ಬಂದ್!
ಚಿತ್ರನಟ ಅಭಿಷೇಕ್ ಅಂಬರೀಶ್ ಮಾತನಾಡಿ, ರಾಸುಗಳನ್ನು ನೀಡುವ ಕಾರ್ಯ ಬಹಳಷ್ಟು ಸಂತಸವನ್ನುಂಟು ಮಾಡಿದೆ. ಇಂದಿನ ನೂರು ರಾಸುಗಳ ವಿತರಣೆ ಮುಂದಿನ ದಿನಗಳಲ್ಲಿ ಸಾವಿರಾರು ಆಗಲಿ ಎಂದು ಅವರು ಶುಭ ಕೋರಿದರು. ಕಾರ್ಯಕ್ರಮದಲ್ಲಿ ಅಶ್ವಿನಿ ಚಾರಿಟಬಲ್ ಟ್ರಸ್ಟ್‌ಅಧ್ಯಕ್ಷ ಡಾ.ರಾಹುಲ್‌ಗೌಡ, ಶಾಸಕ ದರ್ಶನ್ ಪುಟ್ಟಣಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಮಾಜಿ ಶಾಸಕಿ ಜೆ. ಸುನೀತಾ ವೀರಪ್ಪಗೌಡ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಬನ್ನೂರು ಕೃಷ್ಣಪ್ಪ, ಚಿತ್ರನಟ ಸೂರ್ಯ ಚೇತನ್, ಸಚ್ಚಿದಾನಂದ, ರಾಜಾನಂದ, ಪದ್ಮನಾಭ, ಎಸಿಸಿ ರಮೇಶ್, ಸಮಾಜ ಸೇವಕ ಮಹೇಂದ್ರ ಸಿಂಗ್ ಕಾಳಪ್ಪ, ಚಾಮರಸಮಾಲೀ ಪಾಟೀಲ್, ಜೆ.ಎಂ. ವೀರಸಂಗಯ್ಯ, ಕೆ. ಮಲ್ಲಯ್ಯ ಸೇರಿದಂತೆ ದರ್ಶನ್ ಅಭಿಮಾನಿಗಳು, ಮುಖಂಡರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ