
ಬೆಳಗಾವಿ (ಅ.22): ವಾಲ್ಮೀಕಿ ಸಮಾಜದ ಕುರಿತು ಮಾಜಿ ಸಂಸದ ರಮೇಶ ಕತ್ತಿ ಆಕ್ಷೇಪಾರ್ಹ ಹೇಳಿಕೆಯು ಸಮುದಾಯಕ್ಕೆ ಸಂಬಂಧಿಸಿದ ವಿಷಯವಾಗಿದ್ದು, ಸಮಾಜದ ಮುಖಂಡರು ನೋಡಿಕೊಳ್ಳುತ್ತಾರೆ. ಈಗಾಗಲೇ ವಿವಿಧೆಡೆ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇಲಾಖೆ ತೀರ್ಮಾನ ಮಾಡುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಡಿಸಿಸಿ ಚುನಾವಣೆ ಹಿನ್ನೆಲೆಯಲ್ಲಿ ವೈಯಕ್ತಿಕ ಟೀಕೆಗೆ ರಮೇಶ ಕತ್ತಿ ವಿರುದ್ಧ ಕಾನೂನಾತ್ಮಕ ಹೋರಾಟ ವಿಚಾರವಾಗಿ ಮಂಗಳವಾರ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ ಸಚಿವರು, ಕತ್ತಿ ಹೇಳಿಕೆಗೆ ಸಮುದಾಯದ ಜನರು ಉತ್ತರಿಸುತ್ತಾರೆ. ಡಿಸಿಸಿ ಚುನಾವಣೆ ಮುಗಿದಿದ್ದು, ಬ್ಯಾಂಕ್ ಅಧ್ಯಕ್ಷರ ಆಯ್ಕೆಗೆ ಇನ್ನೂ ಸಮಯವಿದೆ. ಅಧ್ಯಕ್ಷ ಸ್ಥಾನಕ್ಕೆ ಇನ್ನೂ ಯಾರ ಹೆಸರೂ ಚರ್ಚೆಗೆ ಬಂದಿಲ್ಲ. ಹುಕ್ಕೇರಿಯಲ್ಲಿ ಎಂದಿನಂತೆ ನಮ್ಮ ಸಂಘಟನೆ ನಡೆಯುತ್ತದೆ ಎಂದರು.
ಡಿಸಿಸಿ ಬ್ಯಾಂಕ್ ನಾಮನಿರ್ದೇಶನ ನಿರ್ದೇಶಕರನ್ನ ಹಾಲುಮತ ಸಮಾಜಕ್ಕೆ ನೀಡುವಂತೆ ಸಲಹೆ ಮಾಡಿದ್ದೇವೆ. ಸಾಮಾನ್ಯ ಕ್ಷೇತ್ರದಲ್ಲಿ ಯಾರಿಗೆ ಶಕ್ತಿ ಇದೆಯೋ ಅವರು ಮಾಡುತ್ತಾರೆ. ನಮ್ಮದು ಹಕ್ಕಿದ್ದು, ವೋಟ್ ಬ್ಯಾಂಕ್ ಇದೆ. ನಮಗೂ ಶಕ್ತಿ ಇದೆ ಎಂದು ರಮೇಶ ಕತ್ತಿಗೆ ತಿರುಗೇಟು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ