ನಾವೇನು ಬೋರ್ಡ್ ಹಾಕಿಕೊಂಡು ಹುಬ್ಬಳ್ಳಿಯಲ್ಲಿ ಗಲಾಟೆ ಮಾಡಿ ಅಂತ ಹೇಳಿದ್ವಾ?

By Suvarna News  |  First Published Apr 21, 2022, 5:21 PM IST

ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯ ಹಿಂದೆ ಕಾಂಗ್ರೆಸ್ ಪಕ್ಷದ ಕುಮ್ಮಕ್ಕು ಕೆಲಸ ಮಾಡಿದೆ ಎನ್ನುವ ಬಿಜೆಪಿ ನಾಯಕರ ಹೇಳಿಕೆಗೆ ಕೆಪಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಿಡಕಾರಿದ್ದಾರೆ. ನಾವೇನ್ ಬೋರ್ಡ್ ಹಾಕಿಕೊಂಡು ಗಲಾಟೆ ಮಾಡಿ ಎಂದು ಹೇಳಿದ್ದೇವೆಯೇ ಎಂದು ಅವರು ಹೇಳಿದ್ದಾರೆ.


ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ

ಹಾವೇರಿ( ಏ 21): ಹುಬ್ಬಳ್ಳಿ ಗಲಭೆಯ ಹಿಂದೆ ಕಾಂಗ್ರೆಸ್ (Congress) ಕುಮ್ಮಕ್ಕು ಎಂಬ ಬಿಜೆಪಿ ನಾಯಕರ (BJP Leaders)ಆರೋಪ ವಿಚಾರಕ್ಕೆ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ (satish jarkiholi) ಕಿಡಿ ಕಾರಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಇಂದು ಹಾವೇರಿ ನಗರಕ್ಕೆ ಆಗಮಿಸಿದ್ದ ಅವರು ಹುಬ್ಬಳ್ಳಿ ಗಲಾಟೆ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು. ನಾವೇನು ಬೋರ್ಡ್ ಹಚ್ಚಿಕೊಂಡು ಗಲಾಟೆ ಮಾಡೋಕೆ ಅವರಿಗೆ ಹೇಳಿದ್ವಾ? ಎಂದು ಪ್ರಶ್ನೆ ಮಾಡಿದ್ದಾರೆ.

Tap to resize

Latest Videos

ಕಠಿಣ ಕ್ರಮ ಕೈಗೊಳ್ಳಿ ಎಂದು ಎಲ್ಲಾ ನಮ್ಮ ಕಾಂಗ್ರೆಸ್ ನಾಯಕರೂ ಹೇಳಿದ್ದಾರೆ , ನಾನು ಹೇಳಿದ್ದೇನೆ. ಈ ತರ ಎಲ್ಲಾ ಗಲಾಟೆಗಳಿಗೆ ಬಿಜೆಪಿಯೇ ಸ್ಪಾನ್ಸರ್.ಮತಗಳನ್ನು ವಿಭಜನೆ ಮಾಡೋಕೆ ಈತರ ಮಾಡ್ತಿದ್ದಾರೆ.ಚುನಾವಣೆ ಆಗೋವರೆಗೆ ಈತರ ಎಲ್ಲಾ ಸ್ವಾಭಾವಿಕ ಎಂದರು.         

ಶಿಗ್ಗಾವಿಯಲ್ಲಿ ಯುವಕನ ಮೇಲೆ ಶೂಟೌಟ್ ನಡೆದ ವಿಚಾರಕ್ಕೂ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಉತ್ತರ ಪ್ರದೇಶ ಮಾಡೆಲ್ ಫಾಲೋ ಮಾಡ್ತಾರೆ. ಯು‌.ಪಿಯಲ್ಲಿ ಹೆಂಗಿದೆ ಅದೇ ತರ ಎಲ್ಲಾ ಕಡೆ ಮಾಡ್ತಿದ್ದಾರೆ. ಬಿಜೆಪಿಯವರಿಗೆ ಅಭಿವೃದ್ಧಿ ಮುಖ್ಯ ಅಲ್ಲ, ದ್ವೇಷ ಮುಖ್ಯ. ಹುಬ್ಬಳ್ಳಿಯ ಗಲಭೆಯಲ್ಲಿ ಯಾರು ಭಾಗಿಯಾಗಿದ್ದಾರೋ ಅವರನ್ನು ಬ್ಯಾನ್ ಮಾಡಿ ಎಂದು ನಮ್ ಪಕ್ಷದವರೂ ಹೇಳಿದ್ದಾರೆ, ನಾನೂ ಕೂಡ ಅದನ್ನೇ ಹೇಳಿದ್ದೇನೆ ಎಂದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವಂಥ ಎಲ್ಲಾ ಕೋಮುಗಲಭೆಗಳಲ್ಲಿ (Communal Riots) ಕಾಂಗ್ರೆಸ್ ಪಕ್ಷದ (Congress Party) ಕೈವಾಡವಿದೆ ಎಂದು ಹಿರಿಯ ಸಚಿವ ಆರ್.ಅಶೋಕ್ (R Ashok) ಆರೋಪಿಸಿದ್ದರು. ಹುಬ್ಬಳ್ಳಿಯಲ್ಲಿ (Hubballi) ನಡೆದ ಗಲಭೆ, ಅದಕ್ಕೂ ಮುನ್ನ ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಗಲಭೆಯಲ್ಲಿ ಕಾಂಗ್ರೆಸ್ ಪಕ್ಷದ ನೇರ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಗಲಭೆಯ ಹಿಂದೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ್ ಪ್ರಮುಖ ಆರೋಪಿ. ಬೇಕಿದ್ದಲ್ಲಿ ನಾವು ಇದನ್ನು ಸಾಬೀತು ಮಾಡುತ್ತೇವೆ. ರಾಜ್ಯದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಹುನ್ನಾರ ನಡೆದಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದರು.

ಹುಬ್ಬಳ್ಳಿ ಗಲಭೆಗೆ ಬಿಜೆಪಿ-ಕಾಂಗ್ರೆಸ್‌ ಇಬ್ಬರೂ ಕಾರಣ: ದೇವೇಗೌಡ

ಹಿಂದೆ ಬಹಳಷ್ಟು ಚಳುವಳಿಗಳು, ಕಾವೇರಿ ಗಲಾಟೆ ಆದಾಗಲೂ ಚೆನ್ನಪಟ್ಟಣ, ರಾಮನಗರ ಬಳಿ ಗಲಾಟೆ ಮಾಡಿದವರು ಇದೇ ಕಾಂಗ್ರೆಸ್ ಪಕ್ಷದವರು. ಕೆಜೆ ಹಳ್ಳಿ-ಡಿಜೆ ಹಳ್ಳಿ ಗಲಭೆ ಆದಾಗಲೂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತಮಗೇನೂ ಗೊತ್ತಿಲ್ಲ ಎಂದು ಹೇಳುತ್ತಿದ್ದರು. ಕೊನೆಗೆ ಇಡೀ ಗಲಭೆಯಲ್ಲಿ ಯಾರ ಪಾತ್ರವಿದೆ ಎನ್ನುವುದು ಇಡೀ ರಾಜ್ಯದ ಜನತೆಗೆ ಗೊತ್ತಾಗಿತ್ತು ಎಂದು ಆಶೋಕ್ ಹೇಳಿದ್ದಾರೆ.

ಗಲಭೆ ಹಿಂದೆ ಕಾಂಗ್ರೆಸ್ ಕೈವಾಡ ಎಂದ ಅಶೋಕ್‌ ವಿರುದ್ಧ ಡಿಕೆಶಿ ಕೆಂಡಾಮಂಡಲ

ಇನ್ನೊಂದೆಡೆ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಕೂಡ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷದವರು ಕಾರಣ ಎಂದು ಆರೋಪಿಸಿದ್ದರು.ಹುಬ್ಬಳ್ಳಿ ಗಲಭೆ(Hubballi Riots) ಬಗ್ಗೆ ನಾನು ಸಾಕಷ್ಟು ಮಾತನಾಡಬಲ್ಲೆ. ನಾನು ಈದ್ಗಾ ಮೈದಾನದ ವಿಚಾರ ಬಗೆಹರಿಸುವ ವೇಳೆಯೂ ಹೀಗೆ ಮಾಡಿದ್ದರು. ಒಬ್ಬ ಮಾಜಿ ಮಂತ್ರಿ ಹುಬ್ಬಳ್ಳಿಯವರೇ(Hubballi) ವಿರೋಧ ಮಾಡಿದ್ದರು. ಆ ಸಮಯದಲ್ಲಿ ನಮ್ಮ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ಅವರನ್ನು ಹೊರಗೆ ಹಾಕಿದೆ. ಆಗ ಯಡಿಯೂರಪ್ಪ ಹೇಗೆ ಮಾಡ್ತೀರಿ ನೋಡುತ್ತೇನೆ ಎಂದು ಸವಾಲು ಹಾಕಿದ್ದದರು. ಆಗ ನಾನು ನನ್ನ ಸರ್ಕಾರಕ್ಕೆ ಶಕ್ತಿ ಇದೆ. ಏನು ಮಾಡಬೇಕು ಎಂದು ಗೊತ್ತಿದೆ. ನೀವು ಎಷ್ಟು ಕೂಗಿದರೂ ನಾನು ಹೆದರುವುದಿಲ್ಲ ಎಂದು ಹೇಳಿ ಎಲ್ಲೆಲ್ಲಿ ಯಾರಾರ‍ಯರನ್ನು ಬಂಧಿಸಬೇಕೋ ಬಂಧಿಸಿದೆ ಎಂದು ಮಂಡ್ಯದಲ್ಲಿ ಸುದ್ದಿಗಾರರಿಗೆ ಹೇಳಿದ್ದರು.

click me!