ಗಣೇಶ ಮಂಟಪದಲ್ಲಿ ಅಂಬೇಡ್ಕರ್‌, ಬಸವಣ್ಣನ ಚಿತ್ರ: ಸತೀಶ್‌ ಜಾರಕಿಹೊಳಿ

By Govindaraj S  |  First Published Aug 24, 2022, 9:47 AM IST

ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಬಿಜೆಪಿಯವರು ಸಾವರ್ಕರ ಭಾವಚಿತ್ರ ಇಡಲಿ, ನಾವು ಅಂಬೇಡ್ಕರ್‌, ಬಸವಣ್ಣನ ಭಾವಚಿತ್ರ ಇಡುತ್ತೇವೆ. ರಾಯಣ್ಣನ ಅಭಿಮಾನಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಇಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.


ಬೆಳಗಾವಿ (ಆ.24): ಸಾರ್ವಜನಿಕ ಗಣೇಶ ಮಂಟಪಗಳಲ್ಲಿ ಬಿಜೆಪಿಯವರು ಸಾವರ್ಕರ ಭಾವಚಿತ್ರ ಇಡಲಿ, ನಾವು ಅಂಬೇಡ್ಕರ್‌, ಬಸವಣ್ಣನ ಭಾವಚಿತ್ರ ಇಡುತ್ತೇವೆ. ರಾಯಣ್ಣನ ಅಭಿಮಾನಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರ ಇಡುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಗಣೇಶೋತ್ಸವ ಆಚರಿಸಲು ಎಲ್ಲರೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವುದು ಸಾಮಾನ್ಯ ಎಂದರು. ಬಿಜೆಪಿಗರ ಪ್ರಚಾರ ವೈಯಕ್ತಿಕವಾಗಿ ತಿಳಿದುಕೊಳ್ಳುವ ಅವಶ್ಯಕತೆ ನನಗಿಲ್ಲ. ಈ ರಾಜಕೀಯ ಆಟದಲ್ಲಿ ಒಬ್ಬರೂ ಗೆಲ್ಲಬಹುದು, ಸೋಲುಬಹುದು. 

ಪಕ್ಷ ಅಂದ ಮೇಲೆ ಎಲ್ಲರೂ ಗೆಲ್ಲಲು ಹೋರಾಟ ಮಾಡುತ್ತಾರೆ ಹೊರತು ಸೋಲಲು ಅಲ್ಲ. ಇದು ಒಂದು ರಾಜಕೀಯ ಆಟವಾಗಿದೆ ಎಂದು ಹೇಳಿದರು. ಜಿಲ್ಲಾದ್ಯಂತ ಕಾಂಗ್ರೆಸ್‌ ಗೆಲುವು ಸಾಧಿಸಲು ನಾವು ಪೈಟ್‌ ಮಾಡುತ್ತಿದ್ದೆವೆ. ಚುನಾವಣೆಗೆ ಸ್ಪರ್ಧಿಸಲು ಇನ್ನೂ 7 ತಿಂಗಳು ಬಾಕಿ ಇದೆ. ನಮ್ಮ ಕಾರ್ಯಕರ್ತರ ಬೆಂಬಲದೊಂದಿಗೆ ಚುನಾವಣೆ ಎದುರಿಸುತ್ತೆವೆ ಎಂದು ಹೇಳಿದರು. ಜಿಲ್ಲೆಗೆ ಚಿರತೆ ಕಾಲಿಟ್ಟು 20 ದಿನ ಕಳೆದಿವೆ. ಜನರು ಜೀವಭಯದಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಅರಣ್ಯ ಸಚಿವರು 20 ದಿನಗಳ ನಂತರ ಚಿರತೆ ಹಿಡಿಯುವುದಾಗಿ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದರಲ್ಲಿ ಸಚಿವರ ಎಷ್ಟುಚುರುಕ್ಕಾಗಿದ್ದಾರೆ ಎಂಬುವುದು ಅವರ ಕಾರ್ಯವೈಖರಿ ತೋರಿಸುತ್ತಿದ್ದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Tap to resize

Latest Videos

ಜಾರಕಿಹೊಳಿ ಸಹೋದರರಿಗೆ ಸರ್ಕಾರ ಬದಲಿಸುವ ಶಕ್ತಿ ಇದೆ, ಆದ್ರೆ ಸರ್ಕಾರಿ ಶಾಲೆ ಕಟ್ಟುವ ಶಕ್ತಿ ಇಲ್ಲ

ಸಿದ್ದರಾಮೋತ್ಸವದಿಂದ ಯಡಿಯೂರಪ್ಪಗೆ ಬೋನಸ್‌: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದ ಯಶಸ್ಸು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪ್ಲಸ್‌ ಬೋನಸ್‌ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೆ ಬಿಜೆಪಿಯಲ್ಲಿ ಉನ್ನತ ಹುದ್ದೆ ಸಿಕ್ಕಿದೆ. ಸಿದ್ದರಾಮೋತ್ಸವ ಬಹುಶಃ ಯಶಸ್ವಿಯಾಗದಿದ್ದರೆ ಯಡಿಯೂರಪ್ಪ ಅವರನ್ನು ಬಿಜೆಪಿ ದೂರ ತಳ್ಳುತ್ತಿತ್ತು. ಇದೊಂದು ಚುನಾವಣೆಗೆ ಅವರನ್ನು ಬಳಸಿಕೊಳ್ಳುತ್ತಾರೆ ಎಂದರು.

ಮುಂದೆ ಇತಿಹಾಸದಲ್ಲಿ ಯಡಿಯೂರಪ್ಪ: ಯಡಿಯೂರಪ್ಪ ಅವರ ಕೊನೆಯ ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ಬಳಸಿಕೊಳ್ಳಲಾಗುತ್ತಿದೆ. ಅದು ಅವರ ಪಕ್ಷದ ಆಂತರಿಕ ವಿಚಾರವಾಗಿದೆ. ಆದರೆ, ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮದ ಯಶಸ್ಸಿನಿಂದ ಯಡಿಯೂರಪ್ಪ ಅವರಿಗೆ ಎರಡು ಸ್ಥಾನ ಕೊಟ್ಟಿದ್ದಾರೆ. ಚುನಾವಣೆ ಮುಗಿದ ಬಳಿಕ ನೂರಕ್ಕೆ ನೂರು ಅವರಿಗೇನೂ ಅವಕಾಶ ಇಲ್ಲ. ಅವರಿಗೂ ವಯಸ್ಸಾಗಿದೆ. ಅವರ ಪಕ್ಷದಲ್ಲಿ 75 ವಯಸ್ಸಿನ ಮಾನದಂಡವಿದೆ. ಯಡಿಯೂರಪ್ಪಗೆ ಹೆಚ್ಚು ಕಡಿಮೆ 80 ವರ್ಷ ವಯಸ್ಸಾಗಿದೆ. ಇದೊಂದು ಚುನಾವಣೆಯಲ್ಲಿ ಅವರನ್ನು ಬಳಸಿಕೊಳ್ಳುತ್ತಾರೆ. ಮುಂದೆ ಬಹುಶಃ ಇತಿಹಾಸದಲ್ಲಿ ಯಡಿಯೂರಪ್ಪ ಇರುತ್ತಾರೆ ಅಷ್ಟೇ ಎಂದರು.

ಸ್ವಪಕ್ಷದಲ್ಲಾದ ಪಿತೂರಿ ಗುಟ್ಟು ಬಿಚ್ಚಿಟ್ಟ ಜಾರಕಿಹೊಳಿ ಸಂದೇಶ ರವಾನಿಸಿದ್ದು ಯಾರಿಗೆ?

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಅಳವಡಿಸಿರುವ ಫ್ಲೆಕ್ಸ್‌ನಲ್ಲಿ ಜವಾಹರಲಾಲ್‌ ನೆಹರು ಅವರ ಭಾವಚಿತ್ರ ಕೈಬಿಟ್ಟು, ಗೋಡ್ಸೆ ಅವರ ಭಾವಚಿತ್ರ ಹಾಕಿದ್ದಾರೆ. ಅವರ ಅಜೆಂಡಾ ಅದೇ ಆಗಿದೆ. ಹಂತ ಹಂತವಾಗಿ ಜಾರಿ ತರುತ್ತಿದ್ದಾರೆ. ಅವಕಾಶ ಸಿಕ್ಕಾಗ ಇದನ್ನು ಅವರು ಬಳಸಿಕೊಳ್ಳುತ್ತಾರೆ. ಜನ ತಿಳಿದುಕೊಳ್ಳಬೇಕು ಅಷ್ಟೇ ಎಂದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈಗಾಗಲೇ ಮಂತ್ರಿಗಳೇ ಮ್ಯಾನೇಜಮೆಂಟ್‌ ಸರ್ಕಾರವೆಂದು ಹೇಳಿದ್ದಾರೆ. ಮಂತ್ರಿಗಳೇ ಈ ರೀತಿ ಹೇಳಿಕೆ ನೀಡಿರುವಾಗ ಅದಕ್ಕಿಂತ ಹೆಚ್ಚಿನ ಶಬ್ದ ಹೇಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

click me!