2100ಕ್ಕೂ ಇದೇ ಕ್ಯಾಲೆಂಡರ್‌! ಇನ್ನು 6 ವರ್ಷಕ್ಕೆ ಇದೇ ಪಂಚಾಂಗ

Kannadaprabha News   | Asianet News
Published : Jan 03, 2021, 11:43 AM IST
2100ಕ್ಕೂ ಇದೇ ಕ್ಯಾಲೆಂಡರ್‌! ಇನ್ನು 6 ವರ್ಷಕ್ಕೆ ಇದೇ ಪಂಚಾಂಗ

ಸಾರಾಂಶ

2100ಕ್ಕೂ ಇದೇ ಕ್ಯಾಲೆಂಡರ್‌! ಇನ್ನು 6 ವರ್ಷಕ್ಕೆ ಇದೇ ಪಂಚಾಂಗ | ಗಣಿತಶಾಸ್ತ್ರ ವಿಶ್ಲೇಷಿಸಿ ನಾರಾಯಣ ಮಾಹಿತಿ

ಬೆಂಗಳೂರು(ಜ.03): ಈ ಶತಮಾನದ ಕೊನೆಯ ವರ್ಷವಾದ 2100ನೇ ಇಸವಿಯ ಕ್ಯಾಲೆಂಡರ್‌ ಮತ್ತು ಈ ವರ್ಷದ ಕ್ಯಾಲೆಂಡರ್‌ ಒಂದೇ ಆಗಿದೆ! ಹಾಗೆಯೇ ನೀವು ಇನ್ನೂ ಹೊಸ ಕ್ಯಾಲೆಂಡರ್‌ ಕೊಂಡು ಕೊಂಡಿಲ್ಲ ಎಂದಾದರೆ 2010ರ ಕ್ಯಾಲೆಂಡರ್‌ ನಿಮ್ಮಲ್ಲಿದ್ದರೆ ಅದನ್ನು ಬಳಸುವ ಅವಕಾಶವೂ ಇದೆ!

ಏಕೆಂದರೆ, ಈ ಸಾಲಿನ ಕ್ಯಾಲೆಂಡರ್‌ ಹಾಗೂ 2010 ವರ್ಷದ ಕ್ಯಾಲೆಂಡರ್‌ ಒಂದೇ ರೀತಿಯಿವೆ. ಗಣಿತ ಶಾಸ್ತ್ರದ ನಿವೃತ್ತ ಪ್ರೊಫೆಸರ್‌ ಡಾ.ಕೆ.ವಿ.ನಾರಾಯಣ 2021ರ ವಿಶೇಷತೆಯನ್ನು ಗಣಿತ ಶಾಸ್ತ್ರದ ನೆಲೆಯಲ್ಲಿ ವಿಶ್ಲೇಷಿಸಿ ಈ ಮಾಹಿತಿಯನ್ನು ನೀಡಿದ್ದಾರೆ.

ಅಹಮದಾಬಾದ್‌ನಲ್ಲಿ ಏಕಶಿಲಾ ಪ್ರತಿಮೆಗಳು ಕಂಡು ಮಾಯ..ಅನ್ಯಗ್ರಹ ಜೀವಿಗಳ ಆಟವೇ?

2010ನೇ ಕ್ಯಾಲೆಂಡರ್‌ ಮತ್ತು 2021ನೇ ಕ್ಯಾಲೆಂಡರ್‌ ಒಂದೇ ರೀತಿ ಇದೆ. ಇದು 2027 ಮತ್ತು ಈ ಶತಮಾನದ ಕೊನೆಯ ವರ್ಷವಾಗಿರುವ 2100ಕ್ಕೆ ಪುನಾರವರ್ತನೆ ಆಗಲಿದೆ. ಹಾಗೆಯೇ ಈ ವರ್ಷದ ಆರಂಭ ಮತ್ತು ವರ್ಷಾಂತ್ಯ ಎರಡೂ ಶುಕ್ರವಾರವೇ ಇರಲಿದೆ ಎಂದು ತಿಳಿಸಿದ್ದಾರೆ.

ಸತತವಾಗಿ ಬರುವ ಎರಡು ಅವಿಭಾಜ್ಯ ಸಂಖ್ಯೆಗಳಾದ 43 ಮತ್ತು 47ನ್ನು ಗುಣಿಸಿದಾಗ 2021 ಬರುತ್ತದೆ. 2021 ನ್ನು 1, 43,47 ಮತ್ತು 2021 ರಿಂದ ಮಾತ್ರ ವಿಭಜಿಸಬಹುದಾಗಿದೆ. ಈ ನಾಲ್ಕು ವಿಭಾಜಕಗಳ ಒಟ್ಟು ಮೊತ್ತ 2112 ಆಗಿದೆ. 2112 ಎಂಬುದು ಎಡಗಡೆಯಿಂದ ಬರೆದರೂ, ಬಲಗಡೆಯಿಂದ ಬರೆದರೂ ಒಂದೇ ರೀತಿ ಇರುವ ಸಂಖ್ಯೆಯಾಗಿದೆ ಎಂದು ನಾರಾಯಣ್‌ ವಿವರಿಸಿದ್ದಾರೆ. 2021ನೇ ಇಸವಿಯೂ 21ನೇ ಶತಮಾನದ 21ನೇ ವರ್ಷವಾಗಿದೆ ಎಂದು ಅವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!