ಸಾಲು ಮರದ ತಿಮ್ಮಕ್ಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌

By Suvarna NewsFirst Published Dec 31, 2020, 7:10 AM IST
Highlights

ಆಸ್ಪತ್ರೆಗೆ ದಾಖಲಾಗಿದ್ದ ಸಾಲುಮರದ ತಿಮ್ಮಕ್ಕ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿದ್ದು, 24 ದಿನಗಳ ನಂತರ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಬೆಂಗಳೂರು(ಡಿ.31): ಸೊಂಟದ ಮೂಳೆ ಮುರಿತದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಾಲುಮರದ ತಿಮ್ಮಕ್ಕ ಅವರು ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಗುಣಮುಖರಾಗಿದ್ದು, 24 ದಿನಗಳ ನಂತರ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸಾಲು ಮರದ ತಿಮ್ಮಕ್ಕ ಅವರು ಡಿ.6ರಂದು ಮನೆಯಲ್ಲೇ ಕುಸಿದು ಬಿದ್ದಿದ್ದರಿಂದ ಸೊಂಟದ ಮೂಳೆ ಮುರಿದಿತ್ತು. ಹಾಸನ ಜಿಲ್ಲೆಯ ಬೇಳೂರಿನ ತಮ್ಮ ನಿವಾಸದಲ್ಲಿ ತಿಮ್ಮಕ್ಕ ಬಿದ್ದಿದ್ದರು.

ಮೂಳೆ ಪೆಟ್ಟು: ಸಾಲುಮರದ ತಿಮ್ಮಕ್ಕಗೆ ಇಂದು ಶಸ್ತ್ರಚಿಕಿತ್ಸೆ

ಅವರನ್ನು ಹಾಸನದ ಮಣಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಸೋಮವಾರ ಆ್ಯಂಬುಲೆನ್ಸ್‌ ಮೂಲಕ ಬೆಂಗಳೂರಿಗೆ ಕರೆ ತರಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು, ತಿಮ್ಮಕ್ಕ ಅವರು ಆಸ್ಪತ್ರೆಗೆ ದಾಖಲಾದ ಕೂಡಲೇ ಸ್ಕಾ್ಯನಿಂಗ್‌ ನಡೆಸಿದ್ದು ಸೊಂಟದ ಮೂಳೆ ಕ್ರ್ಯಾಕ್‌ ಆಗಿರುವುದು ಕಂಡು ಬಂದಿತ್ತು. ಹೀಗಾಗಿ ಸಣ್ಣ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದೀಗ ಸಂಪೂರ್ಣ ಗುಣಮುಖರಾಗಿರುವುದರಿಂದ ಬಿಡುಗಡೆ ಮಾಡಿದ್ದೇವೆ ಎಂದರು.

click me!