ಸೌಜನ್ಯ ಹತ್ಯೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ಕೊರಗಜ್ಜನ ಕ್ಷೇತ್ರಕ್ಕೆ ನಡಿಗೆ

By Kannadaprabha News  |  First Published Aug 13, 2023, 10:51 PM IST

ಕೊರಗಜ್ಜ ಫಲ ಕೊಡುತ್ತಾನೆಂಬ ವಿಶ್ವಾಸವಿದೆ. ಕಾರಣಿಕ ದೈವದ ಮುಂದೆ ಸಲ್ಲಿಸುವ ಪ್ರಾರ್ಥನೆಯಿಂದ ಸೌಜನ್ಯ ಕುಟುಂಬದ ಕಣ್ಣೀರು ಕೊನೆಯಾಗಬೇಕಿದೆ. ಈ ಪ್ರಕರಣದಲ್ಲಿ ಧರ್ಮಕ್ಷೇತ್ರ, ವ್ಯಕ್ತಿಯನ್ನು ಹೊಣೆಯನ್ನಾಗಿಸುವುದು ಸರಿಯಾದ ಮಾರ್ಗವಲ್ಲ. 


ಉಳ್ಳಾಲ (ಆ.13): ಕೊರಗಜ್ಜ ಫಲ ಕೊಡುತ್ತಾನೆಂಬ ವಿಶ್ವಾಸವಿದೆ. ಕಾರಣಿಕ ದೈವದ ಮುಂದೆ ಸಲ್ಲಿಸುವ ಪ್ರಾರ್ಥನೆಯಿಂದ ಸೌಜನ್ಯ ಕುಟುಂಬದ ಕಣ್ಣೀರು ಕೊನೆಯಾಗಬೇಕಿದೆ. ಈ ಪ್ರಕರಣದಲ್ಲಿ ಧರ್ಮಕ್ಷೇತ್ರ, ವ್ಯಕ್ತಿಯನ್ನು ಹೊಣೆಯನ್ನಾಗಿಸುವುದು ಸರಿಯಾದ ಮಾರ್ಗವಲ್ಲ. ಏಳು ಕಲ್ಲಿನಲ್ಲಿ ನೆಲೆಯಾಗಿರುವ ಕೊರಗಜ್ಜನ ಕಾರಣಿಕ ಶಕ್ತಿಯೇ ಪ್ರಧಾನವಾಗಿದ್ದು, ಇಲ್ಲಿ ಮಾಡಿರುವ ಪ್ರಾರ್ಥನೆ ಆರೋಪಿಗಳನ್ನು ಸಮ್ಮನೆ ಇರಲು ಬಿಡುವುದಿಲ್ಲ. 

ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಗಳ ಬಂಧನ ಶೀಘ್ರವೇ ಆಗಲಿದೆ ಎಂದು ಧಾರ್ಮಿಕ ಮುಖಂಡ ರೋಹಿತ್‌ ಉಳ್ಳಾಲ್‌ ಹೇಳಿದ್ದಾರೆ. ಸೌಜನ್ಯ ಪ್ರಕರಣದಲ್ಲಿ ಆಗಿರುವ ಅನ್ಯಾಯದ ವಿರುದ್ಧ ಸ್ಥಳೀಯ ದಿವ್ಯಜ್ಯೋತಿ ಕ್ರಿಕೆಟರ್ಸ್‌ ನೇತೃತ್ವದಲ್ಲಿ ಪಂಡಿತ್‌ ಹೌಸ್‌ ದಿವ್ಯಜ್ಯೋತಿ ಕ್ರಿಕೆಟರ್ಸ್‌ ಕಟ್ಟೆಯಿಂದ ಕುತ್ತಾರು ಕೊರಗಜ್ಜನ ಮೂಲಸ್ಥಾನದ ವರೆಗಿನ ಪಾದಯಾತ್ರೆ ಹಾಗೂ ಕೊರಗಜ್ಜನ ಕಟ್ಟೆಯಲ್ಲಿ ಹಮ್ಮಿಕೊಳ್ಳಲಾದ ಸಾಮೂಹಿಕ ಪ್ರಾರ್ಥನೆಗೆ ಚಾಲನೆ ನೀಡಿ ಅವರು ಮಾತನಾಡಿದರು. 

Tap to resize

Latest Videos

ಇಂದು ನನ್ನ ವಿರುದ್ಧ ಮಾತನಾಡುತ್ತಿರುವ ಹಲವರು ಅಂದು ಹುಟ್ಟೇ ಇರಲಿಲ್ಲ: ನಟ ಉಪೇಂದ್ರ ಹೀಗಂದಿದ್ದೇಕೆ?

ಬಜರಂಗದಳ ಮುಖಂಡ ಪ್ರವೀಣ್‌ ಕುತ್ತಾರ್‌ ಮಾತನಾಡಿ, ಅನ್ಯಾಯಕ್ಕೊಳಗಾದ ಸೌಜನ್ಯ ಕುಟುಂಬ ಪರ ಎಲ್ಲರೂ ಇದ್ದೇವೆ. ಮುಂದೆಂದೂ ಇಂತಹ ಘೋರ ಕೃತ್ಯಗಳು ನಡೆಯದಿರಲಿ. ಧರ್ಮಸ್ಥಳ ಕ್ಷೇತ್ರದ ಹೆಸರು ಹಾಳುಮಾಡಬಾರದು. ನ್ಯಾಯ ಸಿಗುವವರೆಗೂ ಹೋರಾಟ ನಿರಂತರ ಎಂದರು. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್‌ ಕುಂಪಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಧನಲಕ್ಷ್ಮೀ ಗಟ್ಟಿ, ವಿಶ್ವ ಹಿಂದೂ ಪರಿಷತ್‌ ಮುಖಂಡ ಗೋಪಾಲ್‌ ಕುತ್ತಾರ್‌, ದಿವ್ಯಜ್ಯೋತಿ ಕ್ರಿಕೆಟರ್ಸ್‌ ಅಧ್ಯಕ್ಷ ಗಣೇಶ ನಾಯ್ಕ್‌, ಸತೀಶ್‌ ಪೂಜಾರಿ ಉಪಸ್ಥಿತರಿದ್ದರು.

ಉದ್ದೇಶಿತ ಪ್ರತಿಭಟನೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಉಜಿರೆಯ ವಿದ್ಯಾರ್ಥಿನಿ ಸೌಜನ್ಯಳಿಗೆ ನ್ಯಾಯ ಕೇಳಲು ನಡೆಸುವ ಹೋರಾಟಕ್ಕೂ ಅಡ್ಡಿಪಡಿಸುತ್ತಿರುವುದನ್ನು ಮಾಧ್ಯಮದ ಮೂಲಕ ಗಮನಕ್ಕೆ ಬಂದಿದ್ದು , ಇದನ್ನು ಪುತ್ತಿಲ ಪರಿವಾರ ಖಂಡಿಸಿದೆ. ಪುತ್ತೂರಿನ ವ್ಯಾಪಾರಸ್ಥರು ಯಾವತ್ತೂ ನ್ಯಾಯದ ಪರವಾಗಿದ್ದು ಅವರು ಸೌಜನ್ಯಳ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಆ.14ರಂದು ಪುತ್ತಿನ ಪರಿವಾರದ ನೇತೃತ್ವದಲ್ಲಿ ನಡೆಯಲಿರುವ ಪಾದಯಾತ್ರೆ, ರಸ್ತೆತಡೆ ಹಾಗೂ ಪ್ರತಿಭಟನಾ ಸಭೆ ಕಾರ್ಯಕ್ರಮದಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಪುತ್ತಿಲ ಪರಿವಾರ ಸ್ಪಷ್ಟನೆ ನೀಡಿದೆ.

ಗುತ್ತಿಗೆದಾರರ ಆರೋಪದ ವಿಚಾರದಲ್ಲಿ ಸಿದ್ದು ಸುಳ್ಳು ಹೇಳುತ್ತಿದ್ದಾರೆ: ಬೊಮ್ಮಾಯಿ

ಈ ಹೋರಾಟ ಯಾವುದೇ ರಾಜಕೀಯ ಹೋರಾಟವಲ್ಲ ಮತ್ತು ಸರ್ಕಾರದ ವಿರುದ್ಧ ನಡೆಯುವ ಹೋರಾಟವೂ ಅಲ್ಲ. ಸೌಜನ್ಯಳಿಗೆ ನ್ಯಾಯ ಸಿಗಬೇಕೆಂಬ ಈ ಹೋರಾಟಕ್ಕೆ ಪೊಲೀಸ್‌ ಇಲಾಖೆಯೂ ಸ್ಪಂದಿಸಬೇಕು. ಆ.14 ರ ಪುತ್ತಿಲ ಪರಿವಾರದ ಹೋರಾಟ ಪೂರ್ವನಿಗದಿಯಂತೆ ನಡೆಯುತ್ತದೆ. ಹೋರಾಟದಲ್ಲಿ ಯಾವೂದೇ ಬದಲಾವಣೆ ಇಲ್ಲ. ದರ್ಬೆಯಿಂದ ಹೊರಟು ಬಸ್‌ ನಿಲ್ದಾಣದವರೆಗೆ ಜಾಥಾ ನಡೆಯಲಿದೆ ಎಂದು ಪುತ್ತಿಲ ಪರಿವಾರದ ಅರುಣ್‌ ಕುಮಾರ್‌ ಪುತ್ತಿಲ, ಅಧ್ಯಕ್ಷರಾದ ಪ್ರಸನ್ನ ಕುಮಾರ್‌, ಪ್ರಧಾನ ಕಾರ್ಯದರ್ಶಿ ಉಮೇಶ್‌ ವೀರಮಂಗಲ, ನಗರ ಅಧ್ಯಕ್ಷ ಅನಿಲ್‌ ತೆಂಕಿಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

click me!