'ಕೇಸರಿ ಶಾಲು ಧಾರ್ಮಿಕ ಅಲ್ಲ' ಶಾಲೆಗಳಲ್ಲಿ ಹಿಜಾಬ್‌ಗೆ ಅವಕಾಶ, ಸರ್ಕಾರದ ನಿರ್ಧಾರದ ಬಗ್ಗೆ ಪೊನ್ನಣ್ಣ ಸಮರ್ಥನೆ

Kannadaprabha News   | Kannada Prabha
Published : May 17, 2026, 07:02 AM IST
Saffron Shawl Not Religious Ponnanna Defends Govt Decision on Hijab Allowance in Schools

ಸಾರಾಂಶ

ಶಾಸಕ ಎ.ಎಸ್ ಪೊನ್ನಣ್ಣ ಅವರು, ರಾಜ್ಯ ಸರ್ಕಾರ ಶಾಲೆಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಿದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಹಿಜಾಬ್ ಸಾಂವಿಧಾನಿಕ ಹಕ್ಕಾಗಿದ್ದು, ಕೇಸರಿ ಶಾಲನ್ನು ಧಾರ್ಮಿಕ ಸಂಕೇತವಾಗಿ ಹೋಲಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ನಾಪೋಕ್ಲು (ಮೇ.17): ರಾಜ್ಯ ಸರ್ಕಾರ ಶಾಲೆಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ನೀಡಿದ ವಿಚಾರದ ಬಗ್ಗೆ ಪರ ವಿರೋಧಿಗಳು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಕೇಸರಿ ಶಾಲು ಯಾವುದೇ ಧಾರ್ಮಿಕ ಮೌಲ್ಯಗಳ ಸಂಕೇತವಾಗಿ ಯಾವತ್ತು ಬಳಸಲಿಲ್ಲ ಎಂದು ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೇಳಿದ್ದಾರೆ.

ನಾಪೋಕ್ಲಿನಲ್ಲಿ ಶನಿವಾರ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಸಾಂವಿಧಾನಿಕ ಹಕ್ಕನ್ನು ನೀಡಿ ಆದೇಶಿಸಿದೆ. ಕೇಂದ್ರೀಯ ಶಾಲೆಗಳಲ್ಲಿ ಈಗಾಗಲೇ ಇಂತಹ ಕ್ರಮ ಜಾರಿಯಲ್ಲಿದೆ. ರಾಜ್ಯ ಸರ್ಕಾರವು ಪರಂಪರಾನುಗತವಾಗಿ ಹಿಂದಿನಿಂದಲೇ ಆಚರಿಸಿಕೊಂಡು ಬಂದಂತಹ ಆಚರಣೆಯನ್ನು ಮುಂದುವರಿಸಲು ಅವಕಾಶ ಕಲ್ಪಿಸಿದೆ ಎಂದರು. ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಹೊಸ ಪರಂಪರೆಗಳನ್ನ ಪ್ರಾರಂಭಿಸಲು ಅವಕಾಶ ಇರಬಾರದು ಎಂಬುದಿಲ್ಲ. ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಯ ಭದ್ರತೆಯನ್ನು ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರ ತೀರ್ಮಾನ ಮಾಡಿದೆ ಎಂದು ಸಮರ್ಥಿಸಿದರು.

ಮೊನ್ನೆ ಪರೀಕ್ಷೆ ಬರೆಯಲು ಹೋದ ಸಂದರ್ಭದಲ್ಲಿ ಜನಿವಾರದ ವಿಚಾರದಲ್ಲಿ ಗಲಾಟೆ ಆಯ್ತು ಜನಿವಾರ ಹಾಕಿಕೊಂಡು ಹೋಗುವವರನ್ನ ಬಿಡಬೇಕಾ ಬೇಡ್ವಾ? ಜನಿವಾರಕ್ಕೂ ಶಿಕ್ಷಣ ಭದ್ರತೆಗೂ ಯಾವುದೇ ಸಂಬಂಧ ಇಲ್ಲ. ಜನಿವಾರಕ್ಕೂ ಅವಕಾಶ ನೀಡಬೇಕು ಎಂದು ಆದೇಶ ಮಾಡಿದ್ದೇವೆ. ರುದ್ರಾಕ್ಷಿ ಮಾಲೆ ಹಾಕಿಕೊಂಡು ಬಂದವರನ್ನು ತಡೆಯಬಾರದು ಎಂದು ಆದೇಶ ಮಾಡಿದ್ದೇವೆ. ಹೀಗಿರುವಾಗ ಹಿಜಾಬ್ ಮಾತ್ರ ಬಿಡಬೇಕಾ? ಎಂದು ಪ್ರಶ್ನಿಸಿದರು.ಯಾವುದು ಅವರಿಗೆ ಸೂಕ್ತ ಅದನ್ನು ಮಾತ್ರ ತೆಗೆದುಕೊಂಡು ಧರ್ಮಗಳ ಮಧ್ಯೆ ಒಡಕು ತರುವ ಪ್ರಯತ್ನ ನಡೆಸುತ್ತಿದ್ದಾರೆ.

ಬಿಜೆಪಿಯವರು ಬೆಲೆ ಏರಿಕೆ ಬಗ್ಗೆ ಮಾತನಾಡೋಲ್ಲ:

ದೇಶದಲ್ಲಿ ಬೆಲೆ ಏರಿಕೆ ಆಗಿದೆ. ಎಷ್ಟು ಆಗಿದೆ? ಇಂದು ತೈಲ ಬೆಲೆ, ಡಾಲರ್ ಬೆಲೆ, ಚಿನ್ನದ ಬೆಲೆ, ಎಲ್‌ಪಿಜಿ ಬೆಲೆ ಮತ್ತು ಡಾಂಬರ್ ಬೆಲೆ ಮೂರರಷ್ಟಾಗಿದೆ. ಅದಕ್ಕೆ ಮಾತಾನಾಡಿ, ಅಂದ್ರೆ ಇದಕ್ಕೆ ಮಾತ್ರ ಮಾತನಾಡುತ್ತಾರೆ. ಕೇಸರಿ ಶಾಲು ಯಾವುದೇ ಧಾರ್ಮಿಕ ಮೌಲ್ಯಗಳ ಸಂಕೇತವಾಗಿ ಹಿಂದೂಗಳು ಯಾವತ್ತು ಬಳಸಿಲ್ಲ. ಕೆಲವು ಸಂದರ್ಭಗಳಲ್ಲಿ ಮಾತ್ರ ಕೇಸರಿ ಶಾಲುಗಳನ್ನು ಬಳಸುತ್ತಾರೆ. ಕಾರ್ಯಕ್ರಮಗಳಲ್ಲಿ ದೇವಾಲಯ ಮತ್ತು ಇತರ ಧಾರ್ಮಿಕ ಆಚರಣೆಗಳಲ್ಲಿ ಬಳಸುತ್ತಾರೆ. ಆದ್ದರಿಂದ ಕೇಸರಿ ಶಾಲು ಮತ್ತು ಹಿಜಾಬ್ ಹೋಲಿಕೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಸರ್ಕಾರ ಎಲ್ಲ ಧರ್ಮಗಳ ಭಾವನೆಗಳನ್ನು ಗೌರವಿಸಿ ಕಾನೂನುಬದ್ಧವಾಗಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bengaluru: ಮನೆಯಲ್ಲಿರುವ ಹಳೆ ಬಟ್ಟೆ, ಹಾಸಿಗೆ,ಸೋಫಾ, ಚಪ್ಪಲಿ ಸಂಗ್ರಹಕ್ಕೆ ಆ್ಯಪ್‌
ಬಿಜೆಪಿ ಬೆಂಬಲದೊಂದಿಗೆ ಮತ್ತೆ ರಾಜ್ಯಸಭೆಗೆ ದೇವೇಗೌಡ ಆಯ್ಕೆ? ಇಲ್ಲಿದೆ ನೋಡಿ ಲೆಕ್ಕಾಚಾರ!