ಕೋಲ್ಡ್‌ ಸ್ಟೋರೇಜ್‌ ಪ್ರಸ್ತಾವನೆ ಬಂದರೆ ಮಂಜೂರು: ಸಚಿವ ಸೋಮಶೇಖರ್‌

By Kannadaprabha NewsFirst Published Aug 10, 2020, 11:41 AM IST
Highlights

ಕೃಷಿಗೆ 1 ಲಕ್ಷ ಕೋಟಿ ನಿಧಿ ಘೋಷಿಸಿದ ಪ್ರಧಾನಿಗೆ ಎಸ್‌ಟಿಎಸ್‌ ಅಭಿನಂದನೆ| ಮುಂದಿನ ಹತ್ತು ವರ್ಷಗಳ ಅವಧಿಗೆ ರೈತರಿಗೆ ಸಾಲ ಸೇರಿದಂತೆ ಕೃಷಿ ವಲಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ| ಕಿಸಾನ್‌ ಸಮ್ಮಾನ್‌ ನಿಧಿ ಮೂಲಕ ದೇಶಾದ್ಯಂತ 8.5 ಕೋಟಿ ರೈತರ ಖಾತೆಗಳಿಗೆ 17 ಸಾವಿರ ಕೋಟಿ ರು. ವರ್ಗಾವಣೆ| ರೈತರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ದೊಡ್ಡ ಕೊಡುಗೆ|

ಬೆಂಗಳೂರು(ಆ.10): ಕೊರೋನಾ, ಮಳೆ ಹಾಗೂ ನೆರೆ ಹಾವಳಿಯಿಂದ ತತ್ತರಿಸಿರುವ ದೇಶದ ರೈತರಿಗೆ ನೆರವಾಗುವ ಸಲುವಾಗಿ ಒಂದು ಲಕ್ಷ ಕೋಟಿ ರು.ಗಳ ‘ಕೃಷಿ ಮೂಲ ಸೌಕರ್ಯ ನಿಧಿ’ ಪ್ರಾರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಈ ನಿಧಿಯ ಮೂಲಕ ಮುಂದಿನ ಹತ್ತು ವರ್ಷಗಳ ಅವಧಿಗೆ ರೈತರಿಗೆ ಸಾಲ ಸೇರಿದಂತೆ ಕೃಷಿ ವಲಯದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಅಲ್ಲದೆ, ಕಿಸಾನ್‌ ಸಮ್ಮಾನ್‌ ನಿಧಿ ಮೂಲಕ ದೇಶಾದ್ಯಂತ 8.5 ಕೋಟಿ ರೈತರ ಖಾತೆಗಳಿಗೆ 17 ಸಾವಿರ ಕೋಟಿ ರು.ಗಳನ್ನು ವರ್ಗಾಯಿಸಿದ್ದು, ರೈತರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ.

ಕೋವಿಡ್ ಟೆಸ್ಟ್‌ನಲ್ಲಿ ನೆಗೆಟಿವ್; ಆಸ್ಪತ್ರೆಯಿಂದ ನಾಳೆ ಬಿಎಸ್‌ವೈ ಡಿಸ್ಚಾರ್ಜ್

ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಕೋಲ್ಡ್‌ ಸ್ಟೋರೇಜ್‌, ದಾಸ್ತಾನು ಸಂಗ್ರಹ ಕೇಂದ್ರಗಳು, ಸಂಸ್ಕರಣಾ ಕೇಂದ್ರಗಳ ಸ್ಥಾಪನೆ ಬಗ್ಗೆ ಪ್ರಧಾನಿ ತಮ್ಮ ಭಾಷಣದಲ್ಲಿ ತಿಳಿಸಿದ್ದಾರೆ. ಇದು ರೈತರ ಆದಾಯ ದುಪ್ಪಟ್ಟಾಗಲು ಪೂರಕವಾದ ಕ್ರಮವಾಗಿದೆ ಎಂದು ತಿಳಿಸಿರುವ ಅವರು, ರಾಜ್ಯದಲ್ಲಿ ಈಗಾಗಲೇ 162 ಎಪಿಎಂಸಿಗಳಲ್ಲಿ ಬೇಡಿಕೆ ಸಲ್ಲಿಸಿದ ಎಲ್ಲ ಕಡೆ ಕೋಲ್ಡ್‌ ಸ್ಟೋರೇಜ್‌ಗಳನ್ನು ಮಂಜೂರು ಮಾಡಿದ್ದೇವೆ. ಇನ್ನು ಅವಶ್ಯಕತೆ ಇದ್ದವರು ಪ್ರಸ್ತಾವನೆ ಸಲ್ಲಿಸಿದರೆ ತಕ್ಷಣವೇ ಮಂಜೂರು ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಕಿಸಾನ್‌ ಸಮ್ಮಾನ್‌ ಕಂತು ಬಿಡುಗಡೆ: ಪ್ರಧಾನಿಗೆ ಬಿ.ಸಿ. ಪಾಟೀಲ್‌ ಧನ್ಯವಾದ

ರಾಜ್ಯದ 52.20 ಲಕ್ಷ ರೈತ ಕುಟುಂಬಗಳಿಗೆ ನೆರವಾಗುವ ಸಲುವಾಗಿ ‘ಪ್ರಧಾನ ಮಂತ್ರಿ ಕಿಸಾನ್‌’ ಯೋಜನೆಯಡಿ ಪ್ರಸಕ್ತ ವರ್ಷದ ಮೊದಲ ಕಂತು 1,049 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದು ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ತಿಳಿಸುವುದಾಗಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ ಟ್ವೀಟ್‌ ಮೂಲಕ ಹೇಳಿದ್ದಾರೆ.
 

click me!