ಕಾನೂನಿಂದಷ್ಟೇ ಸಮಾಜ ನಡೆಯಲ್ಲ: ಮೋಹನ್ ಭಾಗ್ವತ್‌

Kannadaprabha News, Ravi Janekal |   | Kannada Prabha
Published : Nov 08, 2025, 09:29 AM IST
RSS chief Mohan Bhagwat speech in Nele Foundation silver jubilee

ಸಾರಾಂಶ

RSS chief Mohan Bhagwat speech: ನೆಲೆ ಫೌಂಡೇಶನ್‌ನ ರಜತ ಮಹೋತ್ಸವದಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್, ಸಮಾಜವು ಕಾನೂನಿನಿಂದಲ್ಲ, ಸಂವೇದನೆ ಮತ್ತು ಸಾಂಸ್ಕೃತಿಕ ತಳಹದಿಯಿಂದ ನಡೆಯುತ್ತದೆ ಎಂದರು. ಸಮಾಜ ಒಟ್ಟಾಗಿ ನಿಂತರೆ ಭಾರತ ವಿಶ್ವಗುರುವಾಗಬಹುದು ಎಂದರು.

ಬೆಂಗಳೂರು (ನ.8): ಸಮಾಜ ಕೇವಲ ಕಾನೂನಿನಿಂದ ಮಾತ್ರ ನಡೆಯುವುದಿಲ್ಲ. ಸಂವೇದನೆಯಿಂದ, ಸಾಂಸ್ಕೃತಿಕ ತಳಹದಿಯ ಮೇಲೆ ನಡೆಯುತ್ತದೆ ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ.

ಶುಕ್ರವಾರ ನಗರದಲ್ಲಿ ನಡೆದ ನೆಲೆ ಫೌಂಡೇಶನ್‌ನ ರಜತ ಮಹೋತ್ಸವ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮಾಜ ಒಟ್ಟಾಗಿ ನಿಂತರೆ ದೇಶವೂ ಎತ್ತರದಲ್ಲಿ ನಿಲ್ಲುತ್ತೆ:

ಸಮಾಜಕ್ಕೆ ತನ್ನತನ ಇರುತ್ತದೆ. ಸ್ಪಂದನೆ, ಸಂವೇದನಾಶೀಲತೆಯಿಂದ ಅದು ಜಾಗೃತಗೊಳ್ಳುತ್ತದೆ. ನಾವೆಲ್ಲರೂ ಸಂವೇದನೆಯನ್ನು ಹೊಂದಬೇಕು. ನಮ್ಮ ಹೃದಯದಲ್ಲಿ ಸಂವೇದನೆಯ ದೀಪವನ್ನು ಹಚ್ಚಿ ಅದರಂತೆ ಎಲ್ಲರ ಹೃದಯದಲ್ಲಿ ದೀಪ ಬೆಳಗಲು ಏನೆಲ್ಲಾ ಮಾಡಬೇಕೋ ಅದನ್ನು ಮಾಡಬೇಕು. ಆಗ ನಮ್ಮ ಸಮಾಜ ಅಭಿವೃದ್ಧಿ ಕಾಣುತ್ತದೆ. ನಮ್ಮ ಸಮಾಜ ಒಟ್ಟಾಗಿ ನಿಂತರೆ ದೇಶವೂ ಎತ್ತರದಲ್ಲಿ ನಿಲ್ಲುತ್ತದೆ. ಆಗ ಭಾರತವೂ ಜಗತ್ತಿಗೆ ಮಾರ್ಗದರ್ಶನ ನೀಡುವ ಬೆಳಕಾಗಬಹುದು. ವಿಶ್ವಗುರು ಆಗಬಹುದು ಎಂದರು.

ಮೋಹನ್ ಭಾಗವತ್ ಬೇಸರ:

ಜಗತ್ತಿನಲ್ಲಿ ಜ್ಞಾನ ಭಂಡಾರವಿದೆ. ವಿಜ್ಞಾನ, ಹಣ ಸೇರಿದಂತೆ ಎಲ್ಲವೂ ಇದೆ. ಆದರೆ, ಮನುಷ್ಯ-ಮನುಷ್ಯರ ನಡುವೆ, ಮನುಷ್ಯ ಮತ್ತು ಕುಟುಂಬದ ನಡುವೆ ಸಂಬಂಧ ಇಲ್ಲದಂತಾಗಿದೆ. ಕುಟುಂಬಕ್ಕೆ ಸಮಾಜದೊಂದಿಗೆ, ಸಮಾಜಕ್ಕೆ ಸೃಷ್ಟಿಯೊಂದಿಗೆ ಸಂಬಂಧ ಇಲ್ಲವಾಗಿದೆ. ಎಲ್ಲರಿಗೂ ಬೇರೆ ಬೇರೆಯಾಗಿ ಹೋಗುವ ಧಾವಂತವಿದೆ. ಸಾಯುವವರೆಗೂ ಸುಖದಲ್ಲಿ ಬದುಕಬೇಕು ಎನ್ನುವ ಹಂಬಲವಿದೆ. ಹೀಗಾಗಿ, ಬೇರೆಯವರ ಬಗ್ಗೆ ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ ಎನ್ನುವ ವಾತಾವರಣವಿದೆ ಎಂದು ಮೋಹನ್ ಭಾಗವತ್ ಬೇಸರ ವ್ಯಕ್ತಪಡಿಸಿದರು.

ನಮಗೆ ಚೆನ್ನಾಗಿರಲು ಏನು ಬೇಕೋ ಅದನ್ನು ಮಾಡುತ್ತೇವೆ. ಏನೇ ಮಾಡಿದರೂ ನನಗೆ ಲಾಭ ಏನು? ಎನ್ನುವುದರ ಲೆಕ್ಕಾಚಾರ ಮಾಡಿಯೇ ಮುಂದುವರೆಯುತ್ತೇವೆ. ಲಾಭ ಇಲ್ಲದಿದ್ದರೆ ಮಾಡುವುದಿಲ್ಲ. ನಷ್ಟವಾಗುತ್ತದೆ ಎನ್ನುವುದಾದರೆ ಅದನ್ನು ಬೇರೆಯವರು ಮಾಡಲೂ ಬಿಡುವುದಿಲ್ಲ. ಜಗತ್ತು ಇದೇ ರೀತಿ ಸುಮಾರು 2000 ವರ್ಷಗಳಿಂದ ನಡೆದುಕೊಂಡು ಬಂದಿದೆ. ಇದರಿಂದ ಬಗೆ ಬಗೆಯ ಸಮಸ್ಯೆಗಳು, ದುಃಖ- ದುಮ್ಮಾನಗಳು ಎದುರಾಗಿವೆ. ಅದನ್ನು ಕಡಿಮೆ ಮಾಡಲು ಪ್ರಯತ್ನಗಳೂ ನಡೆದಿವೆ. ಆದರೆ, ಫಲ ಸಿಕ್ಕಿಲ್ಲ ಎಂದು ಹೇಳಿದರು.

ಇಂದು ಜಗತ್ತು ಸಮೃದ್ಧವಾಗಿದೆ. ಜ್ಞಾನವಂತರಿಂದ ತುಂಬಿದೆ. ವಿಜ್ಞಾನದಿಂದ ಕೆಲಸಗಳು ಸರಳವಾಗಿ ಸುಖ, ಸಂತೋಷಕ್ಕೆ ಅವಕಾಶಗಳು ಇವೆ. ಆದರೂ, ಅನಾಥರನ್ನು ನೋಡಿಕೊಳ್ಳಲು ಜನರು ಇಲ್ಲ. ಇಂತಹ ಸಂದರ್ಭದಲ್ಲಿ ಲಾಭದ ಉದ್ದೇಶವಿಲ್ಲದೆ ಕಾರ್ಯ ನಿರ್ವಹಿಸುತ್ತಿರುವ ನೆಲೆ ಫೌಂಡೇಶನ್‌ನ ಕಾರ್ಯ ಶ್ಲಾಘನೀಯ. ಇಂತಹ ಸಂಸ್ಥೆಗಳ ಸಂಖ್ಯೆ ಇನ್ನಷ್ಟು ಹೆಚ್ಚಬೇಕು ಎಂದು ಭಾಗವತ್ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಳ್ಳಿ ಬೆಳಕು ಕಿರು ಹೊತ್ತಿಗೆಯನ್ನು ಮೋಹನ್ ಭಾಗವತ್ ಬಿಡುಗಡೆ ಮಾಡಿದರು. ನೆಲೆ ಫೌಂಡೇಶನ್ ಅಧ್ಯಕ್ಷ ಡಿ. ಶಿವಕುಮಾರ್, ಮಹೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಶ್ರೀನಾಥ ಮತ್ತಿತರರು ಉಪಸ್ಥಿತರಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್