ಕೋವಿಡ್ ಸಂಕಷ್ಟಕ್ಕೆ ರೋಟರಿಯಿಂದ 36 ಕೋಟಿ ರುಪಾಯಿ ದೇಣಿಗೆ

By Suvarna NewsFirst Published Jul 28, 2020, 8:12 AM IST
Highlights

ಸಮಾಜದ ನೋವುಗಳನ್ನು ಅರಿತು ಯಾರು ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಾರೋ ಅವರು ಬಲಿಷ್ಠರಾಗಿಯೂ, ಯಾರು ಸ್ವಾರ್ಥದ ಬದುಕನ್ನು ನಡೆಸುತ್ತಾರೋ ಅವರು ಬಲಹೀನರಾಗುತ್ತಾರೆ. ಫೆಲೊಶಿಪ್‌-ಫ್ರೆಂಡ್‌ಶಿಪ್‌ ಆಧಾರದಲ್ಲಿ ಕ್ಲಬ್‌ ಉತ್ತಮವಾಗಿ ಕಾರ್ಯನಿರ್ವಹಿಸಲು ಮುಂದಾಗಬೇಕು ರೋಟರಿ ಕ್ಲಬ್ ಪದಾದಿಕಾರಿಗಳು ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಸೊರಬ(ಜು.28): ಕೋವಿಡ್‌ ಹತೋಟಿಗೆ ತರಲು ಒಗ್ಗಟ್ಟಾಗಿ ಕೆಲಸ ಮಾಡಬೇಕು. ರೋಟರಿ ಇಂಡಿಯಾ ಈಗಾಗಲೇ 36 ಕೋಟಿ ರು.ಗಳನ್ನು ದೇಶಕ್ಕೆ ದೇಣಿಗೆಯಾಗಿ ನೀಡಿದೆ. 

ತೀರ್ಥಹಳ್ಳಿ ಕ್ಲಬ್‌ ಕೋವಿಡ್‌ ಸಂತ್ರಸ್ತರಿಗೆ ದಾನಿಗಳ ನೆರವಿನಿಂದ ಪ್ರತಿದಿನ 500 ಕ್ಕೂ ಹೆಚ್ಚು ಜನತೆಗೆ ಆಹಾರದ ಪಟ್ಟಣಗಳನ್ನು ಹಾಗೂ ಕಿಟ್‌ಗಳನ್ನು ವಿತರಿಸಿದೆ ಎಂದು ರೋಟರಿಯನ್‌ ದಾನಿ ಕೆ.ಪಿ.ಎಸ್‌ ಸ್ವಾಮಿ ತಿಳಿಸಿದರು. ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್‌ನಲ್ಲಿ 2020- 21ರ ಸೊರಬ ರೋಟರಿ ಕ್ಲಬ್‌ ನೂತನ ಪದಾಧಿಕಾರಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಸಮಾಜದ ನೋವುಗಳನ್ನು ಅರಿತು ಯಾರು ಅದನ್ನು ಬಗೆಹರಿಸಲು ಪ್ರಯತ್ನಿಸುತ್ತಾರೋ ಅವರು ಬಲಿಷ್ಠರಾಗಿಯೂ, ಯಾರು ಸ್ವಾರ್ಥದ ಬದುಕನ್ನು ನಡೆಸುತ್ತಾರೋ ಅವರು ಬಲಹೀನರಾಗುತ್ತಾರೆ. ಫೆಲೊಶಿಪ್‌-ಫ್ರೆಂಡ್‌ಶಿಪ್‌ ಆಧಾರದಲ್ಲಿ ಕ್ಲಬ್‌ ಉತ್ತಮವಾಗಿ ಕಾರ್ಯನಿರ್ವಹಿಸಲು ಮುಂದಾಗಬೇಕು. ಕಳೆದ 4 ವರ್ಷಗಳಿಂದಲೂ ಸೊರಬ ರೋಟರಿ ಕ್ಲಬ್‌ ಜಿಲ್ಲೆಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. 

ಕಾಂಗ್ರೆಸ್‌ ಪ್ರತಿಭಟನೆಯಲ್ಲಿ ಭಾರಿ ಹೈಡ್ರಾಮಾ: ಸಾಮಾಜಿಕ ಅಂತರ ಮಾಯ!

ರೋಟರಿಕ್ಲಬ್‌ ಶಾಂತಿಗೆ ಒತ್ತು ನೀಡಿ ಅಸಮಾನತೆಯನ್ನು ಹೋಗಲಾಡಿಸಲು, ಕಾಯಿಲೆಗಳನ್ನು ತಡೆಗಟ್ಟುವಲ್ಲಿ, ಚಿಕಿತ್ಸೆ ಕೊಡಿಸುವಲ್ಲಿ, ತಾಯಿ ಮತ್ತು ನವಜಾತ ಶಿಶು ಪಾಲನೆಯ ಅರಿವು ಮೂಡಿಸುವಲ್ಲಿ, ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸುವುದರ ಜೊತೆಗೆ ಸಮುದಾಯದ ಆರ್ಥಿಕ ಪ್ರಮಾಣ ಅಭಿವೃದ್ಧಿ ಪಡಿಸುವಂತಹ ಜಾಗೃತಿ ಮೂಡಿಸಲು ಮುಂದಾಗುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅವರು ಕರೆ ನೀಡಿದರು.

ವಲಯ 11ರ ಅಸಿಸ್ಟೆಂಟ್‌ ಗೌರ್ನರ್‌ ರೋಟರಿಯನ್‌ ಡಾ.ನಂದ ಕಿಶೋರ್‌, ವಲಯ ಸೇನಾನಿ ದಿನೇಶ್‌ ಸಾಗರ್‌, ನೂತನ ಅಧ್ಯಕ್ಷ ಟಿ.ಆರ್‌.ಸಂತೋಷ್‌, ಮಾಜಿ ಅಧ್ಯಕ್ಷ ರಾಜು ಹಿರಿಯಾವಲಿ, ಶಂಕರ್‌ ಡಿ.ಎಸ್‌., ನಾಗರಾಜ್‌ಗುತ್ತಿ, ಕಾರ್ಯದರ್ಶಿ ಜಾವೀದ್‌ಅಹಮದ್‌, ಕೃಷ್ಣಪ್ಪ ಓಟೂರು ಮಾತನಾಡಿದರು. ನೂತನ ಅಧ್ಯಕ್ಷ ಟಿ.ಆರ್‌.ಸಂತೋಷ್‌ ಮತ್ತು ಪದಾಧಿಕಾರಿಗಳು ಪದವಿ ಸ್ವೀಕರಿಸಿದರು.

ಯು. ಎನ್‌. ಲಕ್ಷಿತ್ರ್ಮೕಕಾಂತ್‌ ಉರಣ್‌ಕರ್‌ ನೂತನ ಪದಾಧಿಕಾರಿಗಳನ್ನು ಉದ್ದೇಶಿಸಿ ಅಭಿನಂದನಾ ಭಾಷಣ ಮಾಡಿದರು.

click me!