ಚಿನ್ನಾಭರಣ ಮಳಿಗೆಯ ಮಾಲಿಕರ ಸಂಬಂಧಿಕರಿಗೆ ಜೀವ ಬೆದರಿಕೆ ಹಾಕಿ 3.780 ಕೇಜಿ ಚಿನ್ನಾಭರಣ ದೋಚಿ ಇಬ್ಬರು ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ಮೈಸೂರು ರಸ್ತೆಯ ಮೇಲ್ಸೇತುವೆಯಲ್ಲಿ ನಡೆದಿದೆ.
ಬೆಂಗಳೂರು (ಜು.16) : ಚಿನ್ನಾಭರಣ ಮಳಿಗೆಯ ಮಾಲಿಕರ ಸಂಬಂಧಿಕರಿಗೆ ಜೀವ ಬೆದರಿಕೆ ಹಾಕಿ 3.780 ಕೇಜಿ ಚಿನ್ನಾಭರಣ ದೋಚಿ ಇಬ್ಬರು ಕಿಡಿಗೇಡಿಗಳು ಪರಾರಿಯಾಗಿರುವ ಘಟನೆ ಮೈಸೂರು ರಸ್ತೆಯ ಮೇಲ್ಸೇತುವೆಯಲ್ಲಿ ನಡೆದಿದೆ.
ಬಿನ್ನಿಪೇಟೆ ನಿವಾಸಿ ವ್ಯಾಪಾರಿ ರಾಜ್ ಜೈನ್ ಅವರ ಸೋದರಿ ಪುತ್ರ ಆದಿತ್ಯ ಚೌಪಧಿ ಹಾಗೂ ಮನನ್ ದರೋಡೆಗೆ ಒಳಗಾದವರು. ಈ ಸಂಬಂಧ ರಾಜ್ ಜೈನ್ ನೀಡಿದ ದೂರಿನ ಮೇರೆಗೆ ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂರು ದಿನಗಳ ಹಿಂದೆ ಚಿನ್ನಾಭರಣ ಮಳಿಗೆಯಿಂದ ಬ್ಯಾಗ್‌ನಲ್ಲಿ ಆಭರಣ ತುಂಬಿಕೊಂಡು ಸ್ಕೂಟರ್‌ನಲ್ಲಿ ವ್ಯಾಪಾರಿ ಸಂಬಂಧಿಕರು ಮನೆಗೆ ತೆರಳುವಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Bengaluru: ರಾಜಧಾನಿಯಲ್ಲಿ ಬಿಗ್ಗೆಸ್ಟ್ ದರೋಡೆ, ಬೈಕ್‌ನಲ್ಲಿ ಸಾಗಿಸುತ್ತಿದ್ದ ಕೆಜಿ ಗಟ್ಟಲೆ ಚಿನ್ನ ದೋಚಿ ಪರಾರಿ!
ರಾಜಸ್ಥಾನ ಮೂಲದ ರಾಜ್ ಜೈನ್ ಅವರು, ನಗರ್ತಪೇಟೆ ಮುಖ್ಯರಸ್ತೆಯ ರಮೇಶ್ ಧನಲಕ್ಷ್ಮಿ ಮಾರ್ಕೆಟ್‌ನಲ್ಲಿ ‘ಕೇಸರ್ ಜ್ಯುವೆಲರ್ಸ್’ ಹೆಸರಿನ ಚಿನ್ನಾಭರಣ ಮಳಿಗೆ ಹೊಂದಿದ್ದಾರೆ. ಬಿನ್ನಿಪೇಟೆಯಲ್ಲಿ ಅವರು ನೆಲೆಸಿದ್ದಾರೆ. ಜು.12ರಂದು ರಾತ್ರಿ 7.30ರ ಸುಮಾರಿಗೆ ನಗರ್ತಪೇಟೆಯ ಮಳಿಗೆಯಿಂದ 3.780 ಕೆ.ಜಿ ಚಿನ್ನಾಭರಣವನ್ನು ಬ್ಯಾಗ್‌ನಲ್ಲಿ ತುಂಬಿಕೊಂಡು ಮನೆಗೆ ಜೈನ್ ಅವರ ಅಕ್ಕನ ಮಗ ಆದಿತ್ಯ ಹಾಗೂ ಮನನ್ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಆಗ ಮಾರ್ಗ ಮಧ್ಯೆ ಮೈಸೂರು ರಸ್ತೆಯ ಮೇಲ್ಸೇತುವೆಯಲ್ಲಿ ಮತ್ತೊಂದು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಅಡ್ಡಗಟ್ಟಿಬೆದರಿಸಿ ಒಡವೆ ತುಂಬಿದ್ದ ಬ್ಯಾಗ್ ದೋಚಿ ಪರಾರಿಯಾಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ. ಈ ಕೃತ್ಯದ ತನಿಖೆ ಕೈಗೆತ್ತಿಕೊಂಡಿರುವ ಪೊಲೀಸರು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.
Bengaluru crime: 2 ವಾರಗಳ ಹಿಂದೆ ಬಿಡುಗಡೆ ಆಗಿ ಮನೆಗೆ ಕನ್ನ ಹಾಕಿ ಮತ್ತೆ ಜೈಲು ಸೇರಿದ!