
ಬೆಂಗಳೂರು(ಅ.06): ಬಿಹಾರದಲ್ಲಿ ಜನಗಣತಿ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ಕೂಡ ಜನಗಣತಿ ಬಿಡುಗಡೆಗೆ ಸುನ್ನೀ ಉಲಮಾ ಮಂಡಳಿಯಿಂದ ಒತ್ತಾಯ ಕೇಳಿ ಬಂದಿದೆ. ಈ ಸಂಬಂಧ ಮಾತನಾಡಿದ ವಕ್ಫ್ ಬೋರ್ಡ್ ಅಧ್ಯಕ್ಷ ಮುಹಮ್ಮದ್ ಶಾಫಿ ಸಾಧಿ ಅವರು, 2015ರ ಕಾಂತರಾಜ್ ವರದಿಯನ್ನು ಬಿಡಗಡೆ ಮಾಡ್ಬೇಕು. ಸಿಎಂ ಸಿದ್ದರಾಮಯ್ಯ ಯಾವುದೇ ಒತ್ತಡಕ್ಕೆ ಮಣಿಯಬಾರದು. ಕಾಂತರಾಜ್ ವರದಿ ಲೀಕ್ ಆಗಿದ್ದು, ಶೇ. 16ರಷ್ಟು ಮುಸ್ಲಿಂ ಸಮುದಾಯ ಅಂತ ಗೊತ್ತಾಗಿದೆ. ಹೀಗಾಗಿ 16 ರಷ್ಟು ಮುಸ್ಲಿಂ ಸಮುದಾಯಕ್ಕೆ ಶೇ.4 ಮೀಸಲಾತಿ ಏನೇನೂ ಸಾಲುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಮುಸ್ಲಿಂ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದಿದೆ. ಹೀಗಾಗಿ ಮುಸ್ಲಿಂ ಸಮುದಾಯಕ್ಕೆ 7-8 ರಷ್ಟು ಮೀಸಲಾತಿ ನೀಡಬೇಕೆಂದು ಮುಹಮ್ಮದ್ ಶಾಫಿ ಸಾಧಿ ಒತ್ತಾಯಿಸಿದ್ದಾರೆ.
ಜಾತಿಗಣತಿಯಿಂದ ಮೀಸಲಾತಿ ಹೆಚ್ಚಳಕ್ಕೆ ಅನುಕೂಲ: ಗೃಹ ಸಚಿವ ಪರಮೇಶ್ವರ್
ಇನ್ನು ಶಿವಮೊಗ್ಗ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ವಕ್ಫ್ ಬೋರ್ಡ್ ಅಧ್ಯಕ್ಷ ಮುಹಮ್ಮದ್ ಶಾಫಿ ಸಾಧಿ ಅವರು, ಗಲಭೆಗಳ ಹಿಂದೆ ಇರೋ ವಿಚಾರ ಬೇರೆಯದೇ ಆಗಿದೆ. ಹಿಂದೂ -ಮುಸ್ಲಿಂರು ಸೌಹಾರ್ದದಿಂದ ಇದ್ದಾರೆ. ಯಾರೋ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ. ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ ಶಿಕ್ಷೆಯಾಗಬೇಕು. ರಾಜಕೀಯ ಪಕ್ಷದವರನ್ನು ಸೈಡ್ ಗೆ ಹಾಕಿದ್ರೇ ಎಲ್ಲಾ ಸರಿಯಾಗುತ್ತದೆ ಎಂದು ಹೇಳಿದ್ದಾರೆ.
ಕೋಲಾರದಲ್ಲಿ ತಲವಾರ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಮುಹಮ್ಮದ್ ಶಾಫಿ ಸಾಧಿ ಅವರು, ಸೌದಿ ಅರೇಬಿಯಾದ ಚಿಹ್ನೆ ತಲವಾರ್ ಆಗಿದೆ. ಅದನ್ನು ಕೆಲವು ಅಜ್ಞಾನಿ ಮುಸ್ಲಿಂರು ಇಸ್ಲಾಮಿನ ಚಿಹ್ನೆ ಎಂದು ಭಾವಿಸಿದ್ದಾರೆ. ಅದರ ಅರ್ಥ ತಲವಾರ್ ಬೀಸುತ್ತೇವೆ ಅನ್ನೋ ಅರ್ಥವಲ್ಲ. ತಲವಾರ್ ಹಿಂದೂಗಳ ವಿರೋಧಿಯಲ್ಲ. ತಲವಾರ್ ಹಿಂದೂಗಳ ವಿರುದ್ಧವಲ್ಲ. ಮುಸ್ಲಿಮರ ಚಿಹ್ನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ಕುರಾನ್ ಶಾಂತಿಯ ಮಂತ್ರ, ಅಹಿಂಸೆಯನ್ನು ಹೇಳಿದೆ ಎಂದು ತಿಳಿಸಿದ್ದಾರೆ.
ಹೊಸದಾಗಿ ಬಾರ್ ತೆರೆಯಲ್ಲ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾಗೂ ಸೂಪರ್ ಮಾರ್ಕೆಟ್ಗಳಲ್ಲೂ ಮದ್ಯದಂಗಡಿ.. ಹೊಸದಾಗಿ 389 ಮದ್ಯದಂಗಡಿ ತೆರೆಯುವ ರಾಜ್ಯ ಸರ್ಕಾರದ ಪ್ಲಾನ್ ಭಾರಿ ವಿರೋಧಕ್ಕೆ ಕಾರಣವಾಗಿತ್ತು. ಜಿಲ್ಲೆ ಜಿಲ್ಲೆಯಲ್ಲೂ ಮಹಿಳೆಯರು ದಂಗೆ ಎದ್ದಿದ್ರು. ಪ್ರತಿಭಟನೆ ಕಹಳೆ ಮೊಳಗಿಸಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದ್ದರು. ಅನೇಕ ಸಂಘಟನೆಗಳು, ಕೆಲ ಕಾಂಗ್ರೆಸ್ ನಾಯಕರು ಕೂಡ ವಿರೋಧಿಸಿದ್ದರು. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಬಗ್ಗೆ ವರದಿ ಪ್ರಸಾರ ಮಾಡಿತ್ತು.ಕೊನೆಗೂ ಮಹಿಳೆಯರ ಆಕ್ರೋಶಕ್ಕೆ ಮಣಿದ ಸಿಎಂ ಸಿದ್ದರಾಮಯ್ಯ ಹೊಸದಾಗಿ ಯಾವುದೇ ಬಾರ್ ತೆರೆಯಲ್ಲ ಅನ್ನೋ ಭರವಸೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ