'ಕಾನೂನು ಮುಂದೆ ಎಲ್ಲರೂ ಒಂದೇ..' ; ನಟಿ ರಮ್ಯಾ ಮತ್ತೆ ಪೋಸ್ಟ್, ಸೈಲೆಂಟಾಗಿರೋ ದರ್ಶನ್ ಅಭಿಮಾನಿಗಳು

Kannadaprabha News, Ravi Janekal |   | Kannada Prabha
Published : Aug 15, 2025, 06:22 AM IST
actor darshan thoogudeepa

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಸೇರಿದಂತೆ 7 ಜನರ ಜಾಮೀನು ರದ್ದತಿಯ ಬಗ್ಗೆ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ಮುಂದೆ ಎಲ್ಲರೂ ಸಮಾನರು ಎಂಬುದನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ ಎಂದಿದ್ದಾರೆ. 

ಬೆಂಗಳೂರು (ಆ.15): ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಸೇರಿ 7 ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ರದ್ದು ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ನಟಿ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ. ‘ಕಾನೂನು ಮುಂದೆ ಎಲ್ಲರೂ ಒಂದೇ ಎಂಬ ಗಟ್ಟಿ ಸಂದೇಶವನ್ನು ಈ ಮೂಲಕ ಸುಪ್ರೀಂ ಕೋರ್ಟ್‌ ರವಾನಿಸಿದೆ’ ಎಂದು ಹೇಳಿದ್ದಾರೆ.

ಈ ಹಿಂದೆ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎನ್ನುವ ಮೂಲಕ ದರ್ಶನ್ ಅಭಿಮಾನಿಗಳ ಆಕ್ರೋಶಕ್ಕೆ ರಮ್ಯಾ ಕಾರಣರಾಗಿದ್ದರು. ಸಿಟ್ಟಾದ ದರ್ಶನ್‌ ಫ್ಯಾನ್ಸ್‌ ಅಶ್ಲೀಲ ಕಾಮೆಂಟ್‌ ಕಳಿಸಿದಾಗ ಅವರಿಗೆ ರಮ್ಯಾ ಜೈಲಿನ ರುಚಿ ನೋಡುವಂತೆ ಮಾಡಿದ್ದರು.

ಇದೀಗ ದರ್ಶನ್‌ಗೆ ಬೇಲ್‌ ರದ್ದಾದದ್ದೇ ತಡ ಮತ್ತೆ ಈ ಬಗ್ಗೆ ಬರೆದುಕೊಂಡಿರುವ ರಮ್ಯಾ, ‘ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಮತ್ತು ಉಳಿದ ಆರೋಪಿಗಳಿಗೆ ಜಾಮೀನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ತೀರ್ಪು, ಕಾನೂನು ಮುಂದೆ ಎಲ್ಲರೂ ಸಮಾನರು ಎಂಬ ಸ್ಪಷ್ಟ ಸಂದೇಶ ರವಾನಿಸಿದೆ’ ಎಂದಿದ್ದಾರೆ.

‘ಉಳಿದವರಿಗೆ ನಾನು ಹೇಳಬಯಸುವುದೇನೆಂದರೆ, ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇಡಿ. ಸರಿಯಾದ ಕಾನೂನು ಪ್ರಕ್ರಿಯೆ ಅನುಸರಿಸಿ. ಇದು ದೀರ್ಘ ಮತ್ತು ಕಠಿಣ ಹಾದಿಯಾದರೂ ಸುರಂಗದ ಕೊನೆಯಲ್ಲಿ ಬೆಳಕಿರುವ ಹಾಗೆ ಇದರಲ್ಲೂ ನ್ಯಾಯ ಸಿಕ್ಕೇ ಸಿಗುತ್ತದೆ. ಯಾವ ಕಾರಣಕ್ಕೂ ಕಾನೂನು ನಿಮ್ಮ ಕೈಗೆ ತೆಗೆದುಕೊಳ್ಳಬೇಡಿ. ಎಲ್ಲಕ್ಕಿಂತ ಮುಖ್ಯವಾಗಿ ಅತ್ಮಸಾಕ್ಷಿಗೆ ನಿಷ್ಠರಾಗಿರಿ’ ಎಂದು ಹೇಳಿದ್ದಾರೆ.

ಕಳೆದ ಬಾರಿಯ ಘಟನೆಯಿಂದ ಪಾಠ ಕಲಿತಂತಿರುವ ದರ್ಶನ್‌ ಅಭಿಮಾನಿಗಳು ಸೋಷಲ್‌ ಮೀಡಿಯಾದಲ್ಲಿ ಈ ಪೋಸ್ಟ್‌ಗೆ ಯಾವುದೇ ಕಾಮೆಂಟ್ ಮಾಡಿಲ್ಲ.

ದರ್ಶನ್‌ ನಿವಾಸ ಮುಂದೆ ಅಭಿಮಾನಿಗಳ ಹಿಂಡು

ಬೆಂಗಳೂರು: ಸುಪ್ರೀಂ ಕೋರ್ಟ್‌ ದರ್ಶನ್‌ ಬೇಲ್‌ ರದ್ದು ಮಾಡಿರುವ ಸುದ್ದಿ ತಿಳಿದು ಗುಂಪು ಗುಂಪಾಗಿ ದರ್ಶನ್‌ ನಿವಾಸದ ಎದುರು ಅಭಿಮಾನಿಗಳು ನೆರೆದಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ‘ವಿಷಯ ತಿಳಿದು ತುಂಬ ನೋವಾಗಿದೆ. ನಮ್ಮ ಡಿ ಬಾಸ್‌ ಜೈಲಲ್ಲಿದ್ದರೂ ನಾವು ಅವರನ್ನು ಬಿಟ್ಟುಕೊಡಲ್ಲ. ಅವರನ್ನು ನೂರಕ್ಕೆ ನೂರರಷ್ಟು ಬೆಳೆಸುತ್ತೇವೆ’ ಎಂದಿದ್ದಾರೆ.

ದರ್ಶನ್‌ ಅವರ ಅರೆಸ್ಟ್ ಆಗಿರುವ ಅನ್ನಪೂರ್ಣ ನಗರ ಪೊಲೀಸ್‌ ಠಾಣೆಯ ಮುಂದೆಯೂ ನೂರಾರು ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌