Kolara: ಹಳಿ ತಪ್ಪಿದ ಡಬಲ್‌ಡೆಕ್ಕರ್ ರೈಲು, ತಪ್ಪಿದ ಭಾರಿ ದುರಂತ

By Gowthami KFirst Published May 15, 2023, 4:12 PM IST
Highlights

ಕೋಲಾರದ ಬಂಗಾರಪೇಟೆಯಲ್ಲಿ ಡಬಲ್‌ಡೆಕ್ಕರ್ ರೈಲು ಹಳಿ ತಪ್ಪಿ, ಅದೃಷ್ಟವಶಾತ್ ಭಾರಿ ದುರಂತ ತಪ್ಪಿದೆ.

ಕೋಲಾರ (ಮೇ.15): ಕೋಲಾರದ ಬಂಗಾರಪೇಟೆಯಲ್ಲಿ ಡಬಲ್‌ಡೆಕ್ಕರ್ ರೈಲು ಹಳಿ ತಪ್ಪಿ, ಅದೃಷ್ಟವಶಾತ್ ಭಾರಿ ದುರಂತ ತಪ್ಪಿದೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬಿಸಾನತ್ತಂ ಬಳಿ ಈ ದುರ್ಘಟನೆ ನಡೆದಿದೆ. ಡಬಲ್ ಡೆಕ್ಕರ್ ರೈಲು  ಬೆಂಗಳೂರಿನಿಂದ ಚನ್ನೈ ಗೆ ತೆರಳುತ್ತಿತ್ತು. ಲೋಕೊ ಪೈಲೆಟ್ ಸಮಯ ಪ್ರಜ್ಞೆಯಿಂದ ಭಾರಿ ದುರಂತ  ತಪ್ಪಿದೆ. ಒಂದು ರೈಲು ಕೋಚ್ ಹಳಿ ಬಿಟ್ಟು ಪಕ್ಕಕ್ಕೆ ಇಳಿದಿದೆ. ಕೂಡಲೆ ಸ್ಥಳಕ್ಕೆ ತೆರಳಿದ ತಾಂತ್ರಿಕ ತಜ್ಞರಿಂದ ರೈಲು ಸರಿಪಡಿಸಲಾಗಿದೆ. ಬಂಗಾರಪೇಟೆ ರೈಲ್ವೇ ಸಿಬ್ಬಂದಿಯಿಂದ ಇಲಾಖೆ ಸಮಸ್ಯೆ ಸರಿಪಡಿಸಿದೆ. ಚೆನ್ನೈನಿಂದ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡವು ಸ್ಥಳಕ್ಕೆ ಧಾವಿಸಿದೆ. ರೈಲು 22625 ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ – ಕೆಎಸ್‌ಆರ್ ಬೆಂಗಳೂರು ಡಬಲ್ ಡೆಕ್ಕರ್ ಎಕ್ಸ್‌ಪ್ರೆಸ್ ಬೆಂಗಳೂರು ವಿಭಾಗದ ಬಿಸನಟ್ಟಂ ಬಳಿ, ಜೋಲಾರ್‌ಪೆಟ್ಟೈ ಜೂನಿಂದ 50 ಕಿಮೀ ದೂರದಲ್ಲಿ ಹಳಿತಪ್ಪಿತು.

ರೈಲಿನಲ್ಲಿ ಮಹಿಳೆಯ ಚಿನ್ನಾಭರಣ ಕಳವು
ಮೂಲ್ಕಿ: ಮುಂಬೈಯಿಂದ ಊರಿಗೆ ರೈಲಿನಲ್ಲಿ ಬರುತ್ತಿದ್ದಾಗ ಚಿನ್ನಾಭರಣಗಳಿದ್ದ ಬ್ಯಾಗ್‌ ಕಳವಾಗಿರುವ ಬಗ್ಗೆ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೋದರ ಸವಾಲ್‌ ಗೆದ್ದ ಮಧು ಬಂಗಾರಪ್ಪಗೆ ಹೆಚ್ಚಿದ ಸಚಿವ ಸ್ಥಾನದ ನಿರೀಕ್ಷೆ

ವಿಜಯಲಕ್ಷ್ಮೇ ಎಂಬವರು ಮೊಮ್ಮಗಳೊಂದಿಗೆ ಊರಿಗೆ ರೈಲಿನಲ್ಲಿ ಬರುತ್ತಿದ್ದರು. ರೈಲು ಸುರತ್ಕಲ್‌ ತಲುಪಿದಾಗ ಮೊಮ್ಮಗಳನ್ನು ರೈಲಿನ ಶೌಚಾಲಯದಲ್ಲಿ ಮೂತ್ರ ವಿಸರ್ಜಿಸಿ ಹಿಂದಿರುಗಿ ಬಂದು ನೋಡುವಾಗ ಚಿನ್ನಾಭರಣಗಳಿದ್ದ ಬ್ಯಾಗ್‌ ಕಳವಾಗಿರುವುದು ತಿಳಿದು ಬಂದಿದ್ದು, ತಕ್ಷಣ ಸಹ ಪ್ರಯಾಣಿಕರನ್ನು ವಿಚಾರಿಸಿದಾಗ ವ್ಯಕ್ತಿಯೊಬ್ಬರು ಬ್ಯಾಗ್‌ ಹಿಡಿದು ಸುರತ್ಕಲ್‌ ರೈಲು ನಿಲ್ದಾಣದಲ್ಲಿ ಇಳಿದು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ವಿಜಯಲಕ್ಷ್ಮೇ ಸುರತ್ಕಲ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.

ಕೆ ಎಸ್ ಈಶ್ವರಪ್ಪಗೆ ಕಜಿಕಿಸ್ತಾನದಿಂದ ಬೆದರಿಕೆ ಕರೆ, ದೂರು ದಾಖಲು

ಕಳವಾದ ಬ್ಯಾಗ್‌ನಲ್ಲಿ ಮೊಬೈಲ್‌ ಫೋನ್‌, ಚಿನ್ನದ ಎರಡು ಬಳೆಗಳು, 8 ಗ್ರಾಂ ತೂಕದ ಉಂಗುರಗಳು, 24 ಗ್ರಾಂ ತೂಕದ ಚಿನ್ನದ ಸರ ಸೇರಿದಂತೆ ಒಟ್ಟು 3.65 ಲಕ್ಷ ರು. ಮೌಲ್ಯದ ವಸ್ತುಗಳನ್ನು ಕಳವುಗೈದಿರುವುದಾಗಿ ಅವರು ದೂರಿನಲ್ಲಿ ತಿಳಿಸಿದ್ದಾರೆ. 

click me!