
ಮುಧೋಳ (ಅ.13) : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬುದ್ದ, ಬಸವ ಹಾಗೂ ಡಾ.ಅಂಬೇಡ್ಕರ್ ಅವರ ನಿಜವಾದ ಅಭಿಮಾನಿಗಳಾಗಿದ್ದು, ಮನುಕುಲದ ಉದ್ಧಾರ ಹಾಗೂ ಸರ್ವ ಜನಾಂಗದ ಹಿತ ಬಯಸಿರುವ ಅವರೆಲ್ಲರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಸಿಕೊಳ್ಳುವ ಮೂಲಕ ಅವರ ಸಂದೇಶಗಳನ್ನು ರಾಜ್ಯದ ಅಡಳಿತದಲ್ಲಿ ತರುವ ಪ್ರಾಮಾಣಿಕ ಪ್ರಯತ್ನ ಸಿದ್ದರಾಮಯ್ಯನವರದ್ದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ನಗರದ ಸಚಿವರ ಗೃಹ ಕಚೇರಿಯಲ್ಲಿ ಬಸವ ತತ್ವ ಅಭಿಮಾನಿಗಳಿಂದ ಭಾನುವಾರ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು, ತನ್ಮೂಲಕ ಸಾಮಾಜಿಕ ನ್ಯಾಯ ನೀಡಿ ಜನಪರ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮಾಡಬೇಕೆಂಬ ಸಿದ್ದರಾಮಯ್ಯನವರ ಆಶಯವಾಗಿದೆ. ಅಸಮಾನತೆ, ಅಸ್ಪೃಶ್ಯತೆ, ಹೋಗಿ ಪುರುಷರಂತೆ ಮಹಿಳೆಯರು ಎಲ್ಲ ಹಂತಗಳಲ್ಲಿ ಸಶಕ್ತರಾಗಬೇಕು, ತನ್ಮೂಲಕ ಬಡವರ ಉದ್ಧಾರವಾಗಿ ಸ್ವಾಭಿಮಾನಿ ಬದುಕು ಸಾಧಿಸಬೇಕೆಂಬ ಸಿಎಂ ಸಿದ್ದರಾಮಯ್ಯನವರ ಪರಿಕಲ್ಪನೆಯಾಗಿದೆ. ಅದಕ್ಕೆ ನಾನು ಸೇರಿ ಎಲ್ಲ ಸಚಿವ ಸಂಪುಟದ ಸಚಿವರು ಶಾಸಕರು ಬೆಂಬಲವಾಗಿ ನಿಲ್ಲುತ್ತೇವೆಂದು ತಿಮ್ಮಾಪೂರ ಅಭಿಮಾನದಿಂದ ಹೇಳಿದರು.
ಇದನ್ನೂ ಓದಿ: ನಮ್ಮ ಸರ್ಕಾರ ಬಂದ್ರೆ ನೂರಕ್ಕೆ ನೂರರಷ್ಟು ಆರೆಸ್ಸೆಸ್ ಬ್ಯಾನ್ ಮಾಡ್ತೇವೆ: ಎಂ ಲಕ್ಷ್ಮಣ್
ಪ್ರಮುಖರಾದ ಹಣಮಂತ ಬಾಲಪ್ಪ ತಿಮ್ಮಾಪೂರ, ಅಶೋಕ ಕಿವಡಿ, ಸದುಗೌಡ ಪಾಟೀಲ, ಪರಮಾನಂದ ಕುಟರಟ್ಟಿ, ಚಿನ್ನು ಅಂಬಿ, ಚಿದಾನಂದ ಪಾಟೀಲ, ಶ್ರೀನಿವಾಸ ನವಲೆ, ಮುಂತಾದವರು ಉಪಸ್ಥಿತರಿದ್ದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ