ರೇಷನ್ ಕಾರ್ಡ್ ಇ-ಕೆವೈಸಿ ಮೊಬೈಲ್‌ನಲ್ಲೇ ಅಪ್ಡೇಟ್ ಮಾಡಲು 'ಅನ್ನ ಸೇವೆ' ಆ್ಯಪ್ ಬಿಡುಗಡೆ ಮಾಡಿದ ಸರ್ಕಾರ!

Published : Oct 01, 2026, 01:16 PM IST
Karnataka Govt Anna Seva App

ಸಾರಾಂಶ

ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಆಹಾರ ಇಲಾಖೆಯು 'ಅನ್ನ ಸೇವೆ' ಎಂಬ ನೂತನ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಸಚಿವ ರಿಜ್ವಾನ್ ಅರ್ಷದ್ ಚಾಲನೆ ನೀಡಿದ ಈ ಆ್ಯಪ್ ಮೂಲಕ ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು. ಪ್ರಾಯೋಗಿಕವಾಗಿ ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಈ ಸೇವೆ ಲಭ್ಯವಿದೆ.

ಬೆಂಗಳೂರು (ಅ.01): ರಾಜ್ಯದಾದ್ಯಂತ ರೇಷನ್ ಕಾರ್ಡ್ ಇ-ಕೆವೈಸಿ (e-KYC) ಮಾಡಿಸಲು ಸರತಿ ಸಾಲಿನಲ್ಲಿ ನಿಲ್ಲುವ ಅಥವಾ ಕಚೇರಿಗಳಿಗೆ ಅಲೆಯುವ ತಾಪತ್ರಯಕ್ಕೆ ತೆರೆ ಬೀಳಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 'ಅನ್ನ ಸೇವೆ' ಎಂಬ ನೂತನ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿದ್ದು, ಇನ್ನು ಮುಂದೆ ಮನೆಯಲ್ಲೇ ಕುಳಿತು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ.

ಸಚಿವ ರಿಜ್ವಾನ್ ಅರ್ಷದ್ ಮಹತ್ವದ ಘೋಷಣೆ:

ಶಿವಾಜಿನಗರದ ಬ್ರಾಡ್‌ವೇಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆ್ಯಪ್‌ಗೆ ಚಾಲನೆ ನೀಡಿದ ಆಹಾರ ಸಚಿವ ರಿಜ್ವಾನ್ ಅರ್ಷದ್, 'ಬಡವರಿಗೆ ರೇಷನ್ ಪಡೆಯುವಲ್ಲಿ ಯಾವುದೇ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈ ತಾಂತ್ರಿಕ ಬದಲಾವಣೆ ತರುತ್ತಿದ್ದೇವೆ' ಎಂದರು. ನಾನು ಅಧಿಕಾರ ವಹಿಸಿಕೊಂಡ 40 ದಿನಗಳಲ್ಲೇ ಈ ಮಹತ್ವದ ಯೋಜನೆಯನ್ನು ಜನರ ಮುಂದಿಡುತ್ತಿದ್ದೇನೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಲಭ್ಯ:

ಮೊದಲ ಹಂತದಲ್ಲಿ ಈ 'ಅನ್ನ ಸೇವೆ' ಆ್ಯಪ್ ಅನ್ನು ಪೈಲೆಟ್ ಪ್ರಾಜೆಕ್ಟ್ (ಪ್ರಾಯೋಗಿಕ ಯೋಜನೆ) ಆಗಿ ರಾಜ್ಯದ 8 ಜಿಲ್ಲೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಈ 8 ಜಿಲ್ಲೆಗಳು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್ ಮತ್ತು ಕೊಪ್ಪಳ.

ಈ ಜಿಲ್ಲೆಗಳ ಸುಮಾರು 4.5 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಈ ಆ್ಯಪ್ ಮೂಲಕ ಇ-ಕೆವೈಸಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಪೈಲೆಟ್ ಯೋಜನೆ ಯಶಸ್ವಿಯಾದ ನಂತರ, ರಾಜ್ಯದ ಉಳಿದ ಎಲ್ಲಾ ಜಿಲ್ಲೆಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

113 ಕೆಜಿ ಗೋಲ್ಡ್ ಸ್ಮಗ್ಲಿಂಗ್ ಮಾಡಿದ ನಟಿ ರನ್ಯಾ ರಾವ್; ಸ್ಮಗ್ಲರ್ ಗ್ಯಾಂಗ್‌ಗೆ ₹244 ಕೋಟಿ ದಂಡ!
Breaking: ಅಫ್ಘಾನಿಸ್ತಾನದಲ್ಲಿ 5.3 ತೀವ್ರತೆಯ ಭೀಕರ ಭೂಕಂಪ, ಸಾವು-ನೋವು ಎಷ್ಟು?