ಮುರುಘಾಶ್ರೀ ಬಾಲಕಿಯರ ಜತೆ ಲೈಂಗಿಕ ಕ್ರಿಯೆ ನಡೆಸಿಲ್ಲ: 2ನೇ ಪೋಕ್ಸೋ ಕೇಸ್‌​ನ​ಲ್ಲಿ ತಜ್ಞ ವೈದ್ಯರ ಹೇಳಿಕೆ

By Kannadaprabha News  |  First Published Feb 14, 2023, 12:01 PM IST

 ಮುರುಘಾ ಶ್ರೀ ಮೇಲಿನ ಎರಡನೇ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಆರೋಪ ಪಟ್ಟಿಇದೀಗ ಬಹಿರಂಗಗೊಂಡಿದ್ದು, ಸಂತ್ರಸ್ತ ಬಾಲಕಿಯರೊಂದಿಗೆ ಯಾವುದೇ ಲೈಂಗಿಕ ಕ್ರಿಯೆ ನಡೆದಿಲ್ಲ. ಆದರೆ ಲೈಂಗಿಕ ದೌರ್ಜನ್ಯ ಅಲ್ಲಗಳೆಯುವಂತಿಲ್ಲ ಎಂದು ತಜ್ಞ ವೈದ್ಯರು ವರದಿ ನೀಡಿದ್ದಾರೆ. 


ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ: ಮುರುಘಾ ಶ್ರೀ ಮೇಲಿನ ಎರಡನೇ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಆರೋಪ ಪಟ್ಟಿಇದೀಗ ಬಹಿರಂಗಗೊಂಡಿದ್ದು, ಸಂತ್ರಸ್ತ ಬಾಲಕಿಯರೊಂದಿಗೆ ಯಾವುದೇ ಲೈಂಗಿಕ ಕ್ರಿಯೆ ನಡೆದಿಲ್ಲ. ಆದರೆ ಲೈಂಗಿಕ ದೌರ್ಜನ್ಯ ಅಲ್ಲಗಳೆಯುವಂತಿಲ್ಲ ಎಂದು ತಜ್ಞ ವೈದ್ಯರು ವರದಿ ನೀಡಿದ್ದಾರೆ. ಜ.10 ರಂದೇ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು ಸೋಮವಾರ ಚಾರ್ಜ್‌ಶೀಟ್‌ ನಂಬರ್‌ ನೀಡಲಾಗಿದೆ. ಮುರುಘಾಶ್ರೀ ಪರ ವಕೀಲರು ಜಾರ್ಜ್‌ಶೀಟ್ ಪಡೆದ ನಂತರ ಅದರಲ್ಲಿನ ಪ್ರಮುಖ ಸಂಗತಿಗಳು ಗೊತ್ತಾಗಿವೆ. ಸಂತ್ರಸ್ತ ಬಾಲಕಿಯರಿಬ್ಬರ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಲೈಂಗಿಕ ಕ್ರಿಯೆ ನಡೆದಿಲ್ಲ. ಆದರೆ ಲೈಂಗಿಕ ದೌರ್ಜನ್ಯ ಅಲ್ಲಗಳೆಯುವಂತಿಲ್ಲ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯ(Chitradurga District Hospital) ಡಾ.ಉಮಾ, ಡಾ.ರೂಪಾ ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೊದಲ ಆರೋಪಿ ಮುರುಘಾಶ್ರೀ ಹಾಗೂ ಎರಡನೇ ಆರೋಪಿ ರಶ್ಮಿ (Rashmi) ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಸಂತ್ರಸ್ತ ಬಾಲಕಿಯರು ನಮಗೆ ಗೊತ್ತೇ ಇಲ್ಲವೆಂದು ಮುರುಘಾಶ್ರೀ (Murugha Shree) ಹೇಳಿದ್ದರೆ, ಮುರುಘಾಶ್ರೀ ಖಾಸಗಿ ಕೋಣೆಗೆ ನಾನೆಂದೂ ಬಾಲಕಿಯರ ಕಳಿಸಿಲ್ಲವೆಂದು ರಶ್ಮಿ ಹೇಳಿಕೆ ನೀಡಿದ್ದು ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ. ಮೊದಲ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯರು ಹೇಳಿದ ರೀತಿಯೇ 2ನೇ ದೂರಿನ (POCSO case)ದಾಟಿಯೂ ಇದೆ. ಹಾಸ್ಟೆಲ್‌ ವಾರ್ಡನ್‌ ರಶ್ಮಿ ಟೈಂ ಟೇಬಲ್‌ ಹಾಕಿಕೊಂಡು ಸರದಿ ಪ್ರಕಾರ ನಮ್ಮನ್ನು ಮುರುಘಾಶ್ರೀಗಳ ಖಾಸಗಿ ಕೋಣೆಗೆ ಕಳಿಸುತ್ತಿದ್ದರು. ಸ್ವಾಮೀಜಿಯವರು ಚಾಕೋಲೇಟ್‌ ಹಾಗೂ ಮತ್ತು ಬರುವ ಔಷಧ ನೀಡಿ ನಮ್ಮನ್ನು ಬಳಿಸಿಕೊಳ್ಳುತ್ತಿದ್ದರೆಂದು ಸಂತ್ರಸ್ತ ಬಾಲಕಿಯರು ಹೇಳಿಕೆ ನೀಡಿದ್ದಾರೆ.

Latest Videos

undefined

Murugha Swamy Case: ಅತ್ಯಾಚಾರ ಆರೋಪಿ ಮುರುಘಾಶ್ರೀಗೆ ಮಾಸ್ಟರ್​​ ಸ್ಟ್ರೋಕ್: ಮಠಕ್ಕೆ ಕಾಲಿಡೋದೂ ಅಸಾಧ್ಯ!?

ಎರಡನೇ ಪೋಕ್ಸೋ ಪ್ರಕರಣದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಒಟ್ಟು 761 ಪುಟಗಳ ಚಾರ್ಜ್‌ಶೀಟ್‌ (chargesheet) ಸಲ್ಲಿಸಿದ್ದಾರೆ.

ಮುರುಘಾಶ್ರೀ ವಕೀಲರಿಗೆ ಹೆಚ್ಚಿನ ಮಾಹಿತಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಬೆಂಗಳೂರು: ಬಂಧನಕ್ಕೊಳಗಾಗುವ ಮಠದ ಪೀಠಾಧಿಪತಿಗಳ ಅಧಿಕಾರ ಚಲಾವಣೆಗೆ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆ ಅಡಿಯಲ್ಲಿ ನಿರ್ಬಂಧ ವಿಧಿಸಿದ ಬಗ್ಗೆ ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್‌ಗಳ (High Court) ತೀರ್ಪು ಮತ್ತು ಕಾನೂನು ಆಯೋಗಳ ಅಭಿಪ್ರಾಯಗಳಿದ್ದರೆ ಹಾಜರುಪಡಿಸುವಂತೆ ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಮುರುಘಾ ಶರಣರ ಪರ ವಕೀಲರಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

ಪೋಕ್ಸೋ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾದ ಹಿನ್ನೆಲೆಯಲ್ಲಿ ಮುರುಘಾ ಮಠಕ್ಕೆ ಸಂಬಂಧಿಸಿದಂತೆ ತಮ್ಮ ಅಧಿಕಾರ ಚಲಾವಣೆಗೆ ನಿರ್ಬಂಧ ವಿಧಿಸಿರುವ ಚಿತ್ರದುರ್ಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುರುಘಾ ಶರಣರು ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ (Justice Krishna S. Dixit) ಅವರ ನ್ಯಾಯಪೀಠ ಈ ಸೂಚನೆ ನೀಡಿತು.

ಮುರುಘಾಶ್ರೀ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದ ಚಿತ್ರದುರ್ಗ ನ್ಯಾಯಾಲಯ

ವಿಚಾರಣೆ ವೇಳೆ ಶರಣರ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ (CV Nagesh) ವಾದ ಮಂಡಿಸಿ, ಅರ್ಜಿದಾರರ ವಿರುದ್ಧ ಪ್ರಕರಣದಲ್ಲಿ ತನಿಖಾಧಿಕಾರಿಯು ಸಂಬಂಧಪಟ್ಟ ನ್ಯಾಯಾಲಯಕ್ಕೆ ಕೇವಲ ಅಂತಿಮ ವರದಿ ಸಲ್ಲಿಸಿದ್ದಾರೆ. ನ್ಯಾಯಾಲಯದ ತೀರ್ಪು ಇನ್ನೂ ಹೊರಬಿದ್ದಿಲ್ಲ. ಆದರೆ, ತನಿಖಾ ವರದಿಯನ್ನೇ ಆಧರಿಸಿ ಕೆಲವರು ಮಠದ ವಿಚಾರದಲ್ಲಿ ಶರಣರು ಅಧಿಕಾರ ಚಲಾಯಿಸುವುದಕ್ಕೆ ನಿರ್ಬಂಧ ಹೇರಲು ಕೋರಿದ್ದರು. ಅವರ ಮನವಿ ಪುರಸ್ಕರಿಸಿ ಧಾರ್ಮಿಕ ಸಂಸ್ಥೆಗಳ ದುರುಪಯೋಗ ತಡೆ ಕಾಯ್ದೆಯಡಿ ಮುರುಘಾ ಮಠಕ್ಕೆ ಸಂಬಂಧಿಸಿದಂತೆ ಶರಣರು ತಮ್ಮ ಅಧಿಕಾರ ಚಲಾಯಿಸಲು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಇದು ಸಂಪೂರ್ಣ ಕಾನೂನು ಬಾಹಿರ. ಸೆಷನ್ಸ್‌ ನ್ಯಾಯಾಲಯಕ್ಕೆ ಇಂತಹ ಅಧಿಕಾರ ಇಲ್ಲ ಎಂದು ಪ್ರತಿಪಾದಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಈ ಮೇಲಿನಂತೆ ನಿರ್ದೇಶನ ನೀಡಿ ವಿಚಾರಣೆಯನ್ನು ಇದೇ ಫೆ. 16ಕ್ಕೆ ಮುಂದೂಡಿತು.

click me!