
ಬೆಂಗಳೂರು (ಆ.05): ನಟಿ ರಮ್ಯಾ ಅವರಿಗೆ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಹಾಗೂ ಡೈರೆಕ್ಟ್ ಮೆಸೇಜ್ (ಡಿಎಂ) ಮಾಡಿದ್ದ ದಾಸನ ಅಭಿಮಾನಿಗಳು, ಪೊಲೀಸ್ ಕಂಪ್ಲೇಟ್ ದಾಖಲಾಗುತ್ತಿದ್ದಂತೆ ಕೆಲವು ದಾಸನ ಅಭಿಮಾನಿಗಳು ಪರಾರಿ ಆಗಿದ್ದಾರೆ. ಇನ್ನು ಕೆಲವರು ನಟಿ ರಮ್ಯಾಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಕ್ಷಮೆ ಕೇಳಿದ್ದಾನೆ. ಇದೀಗ ಅಶ್ಲೀಲವಾಗಿ ಮೆಸೇಜ್ ಮಾಡಿದ 48 ಜನರ ಪೈಕಿ 4 ಜನರನ್ನು ಬಂಧಿಸಲಾಗಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅಂಡ್ ಗ್ಯಾಂಗ್ ಜಾಮೀನಿನ ಮೇಲೆ ಹೊರಗಿದೆ. ಆದರೆ, ಜಾಮೀನು ರದ್ದತಿಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಇದನ್ನು ವಿರೋಧಿಸಿ ನಟ ದರ್ಶನ್ ಅಭಿಮಾನಿಗಳು ನಟಿ ರಮ್ಯಾಗೆ ಕಟ್ಟದಾಗಿ ಕಾಮೆಂಟ್‌ಗಳನ್ನು ಮಾಡಿದ್ದರು. ಕೆಲವರು ನಟಿ ರಮ್ಯಾಗೆ ನೇರವಾಗಿ ಕೆಟ್ಟ ಸಂದೇಶಗಳನ್ನು ಕಳುಹಿಸಿ ಟೀಕೆ ಮಾಡಿದ್ದರು. ಒಬ್ಬ ಮಹಿಳೆಗೆ ಕೊಡಬೇಕಾದ ಕನಿಷ್ಠ ಗೌರವವನ್ನೂ ಕೂಡ ಕೊಟ್ಟಿರಲಿಲ್ಲ. ಇನ್ನು ನಟಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದಕ್ಕೆ ಕೊಲೆಯಾಗಿ ಬೀದಿ ಹೆಣವಾಗಿದ್ದ ರೇಣುಕಾಸ್ವಾಮಿಗಿಂತಲೂ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಇದೇ ವಿಚಾರವಾಗಿ ನಟಿ ರಮ್ಯಾ, ದರ್ಶನ್ ಅಭಿಮಾನಿಗಳಿಗೂ, ರೇಣುಕಾಸ್ವಾಮಿಗೂ ವ್ಯತ್ಯಾಸವೇನು ಎಂದು ಕೇಳಿದ್ದರು.
ಇದರ ಬೆನ್ನಲ್ಲಿಯೇ ನಟಿ ರಮ್ಯಾ ಕೆಟ್ಟದಾಗಿ ಕಾಮೆಂಟ್ ಮತ್ತು ಮೆಸೇಜ್ ಮಾಡಿದ್ದ 48 ಜನರ ವಿರುದ್ಧ ಬೆಂಗಳೂರು ಪೊಲೀಸರಿಗೆ ದೂರು ಕೊಟ್ಟಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಸೈಬರ್ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಆಗ, ಶೇ.60ಕ್ಕಿಂತ ಅಧಿಕ ಜನರು ತಮ್ಮ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಆದರೆ, ಪೊಲೀಸರು ಮೆಸೇಜ್ ಮಾಡಿದವರ ಖಾತೆಯ ಐಪಿ ಅಡ್ರೆಸ್ ಹಿಡಿದು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಇದೀಗ ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ವಿಜಯನಗರ ಜಿಲ್ಲೆಗಳ 4 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ನಟಿ ರಮ್ಯ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ಅಶ್ಲೀಲ ಪದ ಬಳಕೆ ಕೇಸ್
ಸೈಬರ್ ಕ್ರೈಂ ಪೊಲೀಸರಿಂದ ಈವರೆಗೆ ದೂರು ದಾಖಲಾದ 48 ಜನ ಆರೋಪಿಗಳ ಪೈಕಿ ಅತೀ ಕೆಟ್ಟದಾಗಿ ಸಂದೇಶ ಕಳಿಸಿದ 15 ಆರೋಪಿಗಳನ್ನ ಗುರುತಿಸಲಾಗಿದೆ. ಈ ಪೈಕಿ ನಾಲ್ವರನ್ನ ಬಂಧನ ಮಾಡಿರುವ ಪೊಲೀಸರು, ಅಶ್ಲೀಲ ಸಂದೇಶ ಹರಡುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಅಶ್ಲೀಲವಾಗಿ ಕೆಟ್ಟದಾಗಿ ಕಾಮೆಂಟ್ ಮಾಡದವರ ಪೈಕಿ ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ಕೋಲಾರ ಭಾಗದವರೇ ಹೆಚ್ಚು ಎಂದು ಹೇಳಿದ್ದಾರೆ. ಇನ್ನು ಕೊಲೆ ಆರೋಪಿ ನಟ ದರ್ಶನ್ ಬೆಂಬಲಿಸಿ ಸಾಮಾನ್ಯ ಕಾಮೆಂಟ್ ಮೂಲಕ ಟೀಕೆ ಮಾಡಿದವರನ್ನು ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ಕೊಟ್ಟು ವಾಪಸ್ ಕಳುಹಿಸಲಾಗುತ್ತಿದೆ. ಆದರೆ, ತೀರಾ ಕೆಟ್ಟದಾಗಿ ಮೆಸೇಜ್ ಮಾಡಿದವರಿಗೆ ಬಿಸಿ ಮುಟ್ಟಿಸಲಾಗುತ್ತಿದೆ.
ಇನ್ನು ನಟಿ ರಮ್ಯಾ ದೂರು ಕೊಟ್ಟ ಬೆನ್ನಲ್ಲಿಯೇ ಕೆಲವರು ಅಕೌಂಟ್ ಡಿಲಿಟ್ ಮಾಡಿಕೊಂಡು, ತಾವು ವಾಸವಾಗಿರುವ ಮನೆ ಹಾಗೂ ಊರನ್ನು ಬಿಟ್ಟು ಪರಾರಿ ಆಗಿದ್ದಾರೆ. ಪೊಲೀಸರು ತಮ್ಮನ್ನು ಹುಡುಕಿಕೊಂಡು ಬಂದಲ್ಲಿ ಯಾವುದೇ ಮಾಹಿತಿ ನೀಡದಂತೆ ಮನೆಯವರು ಹಾಗೂ ಸ್ನೇಹಿತರಿಗೆ ಹೇಳಿದ್ದಾನೆ. ಇನ್ನು ದರ್ಶನ್ ಅಭಿಮಾನಿಯಾಗಿ ಓಲೈಕೆ ಮಾಡವ ಭರಾಟೆಯಲ್ಲಿ ಕಟು ಟೀಕೆ ಮಾಡಿದ ಕೆಲವರು, ನಟಿ ರಮ್ಯಾ ಅವರಿಗೆ ನೇರವಾಗಿ ಮೆಸೇಜ್ ಮಾಡಿ ಕ್ಷಮೆ ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ