ಬೆಂಗಳೂರು ಬಾಂಬ್ ಬ್ಲಾಸ್ಟ್ ಪ್ರಕರಣದ ಬೆನ್ನಲ್ಲೇ ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಲ್ಲಿ 17 ಕಡೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಚೆನ್ನೈನಲ್ಲಿ ಐವರನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು (ಮಾ.5): ಬೆಂಗಳೂರಿನ ಸುಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣ ದೇಶದಾದ್ಯಂತ ಸುದ್ದಿಯಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದಾರೆ. ಇದರ ಬೆನ್ನಲ್ಲೇ ಈಗ ಎನ್‌ಐಎ ದೇಶದಾದ್ಯಂತ ಏಕಕಾಲದಲ್ಲಿ ದಾಳಿ ನಡೆಸಿದೆ. ಕರ್ನಾಟಕ ಸೇರಿ ಒಟ್ಟು 7 ರಾಜ್ಯಗಳಲ್ಲಿ 17 ಕಡೆ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಚೆನ್ನೈನಲ್ಲಿ ಐವರನ್ನು ವಶಕ್ಕೆ ಪಡೆದಿದ್ದು, ಹಲವೆಡೆ ಮಹತ್ವದ ದಾಖಲೆ ಕಲೆಹಾಕಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿನಲ್ಲಿ ಸಹ ಖೈದಿಗಳನ್ನು ಮನಪರಿವರ್ತನೆ ಪ್ರಕರಣ ಸಂಬಂಧ ದೇಶದಾದ್ಯಂತ ಪ್ರಮುಖ ಜೈಲುಗಳ ಮೇಲೆ ಎನ್ ಐ ಎ ದಾಳಿ ಮಾಡಿದ್ದು, ಬೆಂಗಳೂರಿನ ಸುಲ್ತಾನ್ ಪಾಳ್ಯ ಸೇರಿ ಹಲವೆಡೆ ದಾಳಿ ಮಾಡಿದ್ದಾರೆ.
Rameshwaram Cafe Blast ಆತುರದಲ್ಲಿ ಬಂದು 45 ಸೆಕೆಂಡ್ ನಲ್ಲಿ ಬಾಂಬರ್!
ಉಗ್ರ ಟಿ.ನಸೀರ್ ಹಾಗೂ ಜುನೈದ್ ಇಬ್ಬರೂ ಸೇರಿ ಯುವಕರನ್ನ ಉಗ್ರಕೃತ್ಯಗಳಲ್ಲಿ ಭಾಗಿಯಾಗುವಂತೆ ತರಭೇತಿ ನೀಡುತ್ತಿದ್ದರು. ಈ ಬಗ್ಗೆ ದಾಳಿ ನಡೆಸಿದ್ದ ಸಿಸಿಬಿ ಐವರನ್ನ ಅರೆಸ್ಟ್ ಮಾಡಿ, ಗ್ರನೈಡ್ ವಶಕ್ಕೆ ಪಡೆದಿದ್ದರು. ಮಾತ್ರವಲ್ಲ ಪಿಸ್ತೂಲ್ ಸೇರಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಮುಂದಿನ ತನಿಖೆಗಾಗಿ ಕೇಸ್ ಅನ್ನು ಎನ್ ಐಎಗೆ ಕೇಂದ್ರ ಸರ್ಕಾರ ವರ್ಗಾವಣೆ ಮಾಡಿತ್ತು. ಈ ಪ್ರಕರಣದಲ್ಲಿ ಘೋಷಿತ ಉಗ್ರ ಟಿ ನಾಜಿರ್ ಸೇರಿ ಐವರನ್ನು ಅರೆಸ್ಟ್ ಮಾಡಲಾಗಿತ್ತು. ಮಾತ್ರವಲ್ಲ ಉಗ್ರ ಟಿ.ನಾಸೀರ್ ನಿಂದ ಜೈಲಿನಲ್ಲಿ ಕೂಡ ಖೈದಿಗಳಿಗೆ ಕೂಡ ತರಭೇತಿ ನೀಡುತ್ತಿದ್ದಾನೆಂಬ ವಿಚಾರವಾಗಿ ಟಿ.ನಸೀರ್ ನಿಂದ ತರಬೇತಿ ಪಡೆದವರಿಗೂ ರಾಮೇಶ್ವರಂ ಕೆಫೆ ಬ್ಲಾಸ್ಟ್ ಗೂ ಸಂಬಂಧ ಇರುವ ಶಂಕೆ ಮೇಲೆ ದೇಶದಾದ್ಯಂತ ಪ್ರಮುಖ ಜೈಲುಗಳ ಮೇಲೆ ಎನ್ಐಎ ದಾಳಿ ನಡೆದಿದೆ.
ಇನ್ನು ಪರಪ್ಪನ ಅಗ್ರಹಾರದಲ್ಲೂ ಎನ್ ಐ ಎ ಅಧಿಕಾರಿಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ತಡರಾತ್ರಿ ತಡರಾತ್ರಿ 2 ಗಂಟೆಗೆ ದಾಳಿ ನಡೆಸಿ ಮುಂಜಾನೆ 6 ಗಂಟೆಗೆ ಹಿಂತಿರುಗಿದ್ದಾರೆ. ದಾಳಿ ವೇಳೆ ಉಗ್ರ ಟಿ ನಜೀರ್ ತಂಡವನ್ನು ವಿಚಾರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹೆಣ್ಣೂರು ಠಾಣಾ ವ್ಯಾಪ್ತಿಯ ಎರಡು ಕಡೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದೆ. ತೂಬಾ ಲೇಔಟ್ ಮತ್ತು ಸರಾಯಿ ಪಾಳ್ಯದಲ್ಲಿ ದಾಳಿ ನಡೆಸಿ ಪರಿಶೀಲನೆ ಮಾಡಲಾಗಿದ್ದು, ಉಗ್ರ ಚಟುವಟಿಕೆಗಳ ಅನುಮಾನದ ಮೇಲೆ ದಾಳಿ ನಡೆದಿದೆ.
ಚೆನ್ನೈನಲ್ಲಿ ಐವರು ಅರೆಸ್ಟ್:
ದೇಶದಾದ್ಯಂತ ಎನ್ ಐ ಎ ದಾಳಿ ಪ್ರಕರಣಕ್ಕೆ ಸಬಂಧಿಸಿದಂತೆ ಚೆನ್ನೈಯಲ್ಲಿ ಐವರನ್ನ ವಶಕ್ಕೆ ಪಡೆಯಲಾಗಿದೆ. ಚೆನ್ನೈ ಸಿಟಿಯ ಸಿದ್ದಾಯಳ್ ಪೇಟೆಯ ಬಿಡಾರಿಯಾರ್ ದೇವಸ್ಥಾನದ ಬಳಿ ಇರುವ ಏರಿಯಾದಿಂದ ಐದು ಜನರನ್ನು ವಶಕ್ಕೆ ಪಡೆದಿದ್ದಾರೆಂದು ವರದಿ ತಿಳಿಸಿದ್ದು, ಅವರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರು ಬಾಂಬ್ ಸ್ಫೋಟ, ರಾಮೇಶ್ವರಂ ಕೆಫೆಯೇ ಟಾರ್ಗೆಟ್ ಯಾಕೆ?