
ಬೆಂಗಳೂರು (ಏ.13): ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆಯಾಗಿದ್ದು, ಈ ಘಟನೆಯ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹ ಹಾಗೂ ಬಾಂಬ್ ಇರಿಸಿದ್ದ ಮುಸಾವಿರ್ ಹುಸೇನ್ ಶಾಜಿಬ್‌ನನ್ನು ಎನ್‌ಐಎ ಬಂಧಿಸಿದೆ. ಬೆಂಗಳೂರಿನ ಕುಂದಲಹಳ್ಳಿ ಬಾಂಬ್ ಸ್ಪೋಟಿಸಿ ಕೋಲ್ಕತ್ತಾದಲ್ಲಿ ಉಗ್ರರು ತಲೆಮರೆಸಿಕೊಂಡಿದ್ದರು. ಬಂಧನದಿಂದ ಬಚಾವ್ ಆಗಲು ಇಬ್ಬರೂ ಕೂಡ ಸಾಕಷ್ಟು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದರು ಎನ್ನುವ ವಿವರ ಕೂಡ ಪತ್ತೆಯಾಗಿದೆ. ಬೇರೆ ಹೆಸರಿನಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡು ಶಂಕಿತರು ಅಡಗಿದ್ದರು. ಎನ್ಐಎ ತನಿಖೆ ವೇಳೆ ನಕಲಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಬ್ದುಲ್ ಮತೀನ್ ತಾಹ, ಯಶ್ ಶಹನವಾಜ್ ಪಟೇಲ್ ಹೆಸರನ್ನು ಆಧಾರ್ ಕಾರ್ಡ್ ಸೃಷ್ಟಿಸಿಕೊಂಡಿದ್ದರೆ, ಮುಸಾವಿರ್ ಹುಸೇನ್ ಶಾಜಿಬ್, ಅನ್ಮೋಲ್ ಕುಲಕರ್ಣಿ ಎನ್ನುವ ಹಿಂದು ಹೆಸರಲ್ಲಿ ಆಧಾರ್ ಕಾರ್ಡ್ ರಚಿಸಿಕೊಂಡಿದ್ದರು.
ಇಬ್ಬರೂ ಕೂಡ ಇದೇ ದಾಖಲೆಯಲ್ಲಿಯೇ ಕೋಲ್ಕತ್ತಾದ ಪ್ಯಾರಡೈಸ್ ಹೋಟೆಲ್‌ಗೆ ದಾಖಲೆ ನೀಡಿ ವಾಸ್ತವ್ಯ ಮಾಡಿದ್ದರು. ದಾಳಿ ವೇಳೆ ನಕಲಿ ದಾಖಲೆಗಳನ್ನು ಎನ್‌ಐಎ ವಶಕ್ಕೆ ಪಡೆದಾಗ ಈ ಮಾಹಿತಿ ಪತ್ತೆಯಾಗಿದೆ. ನಕಲಿ ದಾಖಲೆಗಳನ್ನ ಎನ್‌ಐಎ ಅಧಿಕಾರಿಗಳು ಕೋರ್ಟ್‌ಗೆ ಸಲ್ಲಿಸಿದ್ದಾರೆ. ಅಲ್ಲದೇ, ಉಗ್ರರು ತಲೆಮರೆಸಿಕೊಂಡಿದ್ದ ಸಂಪೂರ್ಣ ಮಾಹಿತಿ ಸಂಗ್ರಹವನ್ನೂ ಮಾಡಿದ್ದಾರೆ.
ಇಬ್ಬರೂ ಉಗ್ರರು ಕೂಡ ತಪ್ಪಿಸಿಕೊಳ್ಳೋದರಲ್ಲಿ ಮಾಸ್ಟರ್ ಮೈಂಡ್ ಆಗಿದ್ದರು. ಪಕ್ಕಾ ಚಾಲಾಕಿತನದಿಂದಲೇ ಕೋಲ್ಕತದಲ್ಲಿ ಇವರು ತಪ್ಪಿಸಿಕೊಳ್ಳುತ್ತಿದ್ದರು. 12 ದಿನ ಕೋಲ್ಕತ್ತದಲ್ಲಿದ್ದ ಇವರು, ಮೂರು ನಾಲ್ಕು ದಿನಕ್ಕೆ ಸ್ಥಳವನ್ನ ಬದಲಾವಣೆ ಮಾಡುತ್ತಿದ್ದರು. ಆದರೆ, ಮುಸಾವಿರ್ ಹಾಗೂ ಮತೀನ್ ತಾಹ ಹೆಜ್ಜೆ ಗುರುತನ್ನು ಪತ್ತೆ ಹಚ್ಚುವಲ್ಲಿ ಎನ್‌ಐಎ ಯಶಸ್ವಿಯಾಗಿತ್ತು.
ಪ್ರತೀ ದಿನ ಲಾಡ್ಜ್ ಗಳನ್ನ ಉಗ್ರರು ಬದಲಾವಣೆ ಮಾಡುತ್ತಿದ್ದರು. ಮಿಧನಾಪುರ್ ಜಿಲ್ಲೆಯ ಹಲವು ಲಾಡ್ಜ್‌ಗಳಲ್ಲಿ ಉಗ್ರರು ವಾಸ ಮಾಡಿದ್ದರು ಎನ್ನುವ ಮಾಹಿತಿ ಸಿಕ್ಕಿದೆ. ಪ್ರತೀ ಎರಡು ಮೂರು ದಿನಕ್ಕೆ ಲಾಡ್ಜ್ ಚೇಂಜ್ ಮಾಡಿದ್ದರು. ಕಳೆದ ಶುಕ್ರವಾರವಷ್ಟೇ ಧಿಗಾದ ಲಾಡ್ಜ್ ನಲ್ಲಿ ವಾಸ್ತವ್ಯ ಮಾಡಿದ್ದರು. ಒಂದೊಂದು ಹೆಸರಲ್ಲಿ ಆರೋಪಿಗಳು ಒಂದೊಂದು ಲಾಡ್ಜ್ ನಲ್ಲಿ ಸೇರಿಕೊಳ್ಳುತ್ತಿದ್ದರು. ಒಮ್ಮೊಮ್ಮೆ ಸೌತ್ ಇಂಡಿಯಾದವರು ಅಂತಾ ಮತ್ತೊಮ್ಮೆ ನಾರ್ತ್ ಇಂಡಿಯಾದವರೇ ಅಂತಾ ಹೇಳಿಕೊಂಡು ವಾಸ್ತವ್ಯ ಮಾಡುತ್ತಿದ್ದರು.
ತೀರ್ಥಹಳ್ಳಿ: ರಾಮೇಶ್ವರಂ ಕೆಫೆ ಸ್ಫೋಟದ ಮಾಸ್ಟರ್ ಮೈಂಡ್ ತಾಹ ನಿವೃತ್ತ ಯೋಧರ ಪುತ್ರ..!
ಕೋಲ್ಕತ್ತಾದ ಹೋಟೆಲ್ ಪ್ಯಾರೈಡೈಸ್, ಲೆನುನ್ ಸೆರಾನಿ ಸೇರಿದಂತೆ ಹಲವು ಲಾಡ್ಜ್ ಗಳಲ್ಲಿ ಉಗ್ರರು ವಾಸವಾಗಿದ್ದರು. ಹೋಟೆಲ್ ಸಿಬ್ಬಂದಿ ಬಳಿ ಶಂಕಿತ ಉಗ್ರರು ಒಂದೊಂದು ಹೆಸರು ಹೇಳುತ್ತಿದ್ದರು. ಸಂಜಯ್ ಅಗರ್ ವಾಲ್, ಉದಯ್ ದಾಸ್ ಎನ್ನುವ ಹೆಸರನ್ನು ಬಳಕೆ ಮಾಡಿದ್ದರು. ಜಾರ್ಖಂಡ್ ಹಾಗೂ ತ್ರಿಪುರ ಮೂಲದ ವ್ಯಕ್ತಿಗಳು ಎಂದು ವಾಸವಾಗಿದ್ದರು.
Rameshwaram Cafe Blast Case: ಬೆಂಗಳೂರು to ಕೊಲ್ಕತ್ತಾ, ಉಗ್ರರು ಸಿಕ್ಕಿಬಿದ್ದಿದ್ದು ಹೇಗೆ?ಇಂಚಿಂಚು ಮಾಹಿತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ