ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣದಲ್ಲೂ 'ನಮ್ಮ ಬ್ರದರ್ಸ್' ಅಂತಾ ನೆಗ್ಲೆಟ್ ಮಾಡ್ಬೇಡಿ; ಎನ್ ರವಿಕುಮಾರ್

By Ravi Janekal  |  First Published Mar 1, 2024, 5:34 PM IST

ಬೆಂಗಳೂರಿನ ರಾಮೇಶ್ವರ ಕೆಫೆ ನಿಗೂಢ ಸ್ಫೋಟಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಬೆಚ್ಚಿಬಿದ್ದಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸುಮಾರು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.


ಬೆಂಗಳೂರು (ಮಾ.1) : ಬೆಂಗಳೂರಿನ ರಾಮೇಶ್ವರ ಕೆಫೆ ನಿಗೂಢ ಸ್ಫೋಟಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಬೆಚ್ಚಿಬಿದ್ದಿದೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಸುಮಾರು 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಪ್ರತಿಕ್ರಿಯಿಸಿದ್ದಾರೆ.

ರಾಮೇಶ್ವರ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಸುದ್ದಿ ನಾನು ಮಾಧ್ಯಮದಲ್ಲಿ ನೋಡಿದೆ. ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಬ್ಲಾಸ್ಟ್ ಆಗಿದೆ.  ಸ್ಪೋಟದಲ್ಲಿ ಸಿಬ್ಬಂದಿ ಸೇರಿ ಒಂಬತ್ತು ಜನರಿಗೆ ಗಂಭಿರ ಗಾಯ ಆಗಿದೆ. ಸ್ಫೋಟದಿಂದ ಸುತ್ತಲೂ ಭಯದ ವಾತಾವರಣ ಕವಿದಿದೆ. ಈ ಸರ್ಕಾರ ಈಗಲಾದ್ರೂ ಗಂಭೀರವಾಗಿ ಪರಿಗಣಿಸಲಿ. ಸರ್ಕಾರ ಈ ರೀತಿಯ ಘಟನೆ ಗಂಭೀರವಾಗಿ ತಗೆದುಕೊಳ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

undefined

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟ; ಐವರಿಗೆ ಗಂಭೀರ ಗಾಯ!

ಈ ಹಿಂದೆ ಮಂಗಳೂರಲ್ಲಿ ಆಟೋದಲ್ಲಿ ಕುಕ್ಕರ್ ಬ್ಲಾಸ್ಟ್ ಆದಾಗ ಇದೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, 'ನಮ್ಮ ಬ್ರದರ್ಸ್' ಅಂದಿದ್ರು. ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆ ಸಹ ಗಂಭೀರವಾಗಿ ತೆಗೆದುಕೊಂಡಿಲ್ಲ. ಘೋಷಣೆ ಕೂಗಿದ ಬಗ್ಗೆ FSL ರಿಪೋರ್ಟ್ ಬಂದಿದ್ರು ಬಹಿರಂಗ ಮಾಡ್ತಿಲ್ಲ. ಈ ರೀತಿ ಅತಿಯಾದ ಒಲೈಕೆಯಿಂದಲೂ ಇಂಥ ಘಟನೆಗಳು ಮರುಕಳಿಸುತ್ತಿವೆ. ಇದೀಗ ನಡೆದ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿ. ಸ್ಫೋಟಕ್ಕೆ ಬ್ಯಾಟರಿ ಬಳಸಲಾಗಿದೆ. ಈ ಪ್ರಕರಣವಾದ್ರೂ ಗಂಭೀರವಾಗಿ ಪರಿಗಣಿಸಿ ಎಂದು ಆಗ್ರಹಿಸಿದರು.

ಇಡೀ ದೇಶದಲ್ಲಿ ಸ್ಫೋಟ ಪ್ರಕರಣ, ಉಗ್ರರ ಕೃತ್ಯಗಳು ಕಡಿಮೆಯಾಗಿವೆ. ಕೇಂದ್ರ ಸರ್ಕಾರ ಉಕ್ಕಿನ ರೀತಿ ಪರಿಗಣಿಸುತ್ತೆ. ದೇಶದಲ್ಲಿ ಉಗ್ರರ ಉಪಟಳ ಕಡಿಮೆ ಆಗಲು ಕೇಂದ್ರ ಸರ್ಕಾರ ಕಾರಣ. ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಬಿಗ್ ಟ್ವಿಸ್ಟ್, ಐಇಡಿ ಬಳಸಿರುವ ಬಗ್ಗೆ ಪೊಲೀಸರ ಶಂಕೆ!

ರಾಮೇಶ್ವರ ಕೆಫೆ ಬ್ಲಾಸ್ಟ್ ಪ್ರಕರಣದಲ್ಲೂ ಬ್ರದರ್ಸ್ ಅಂತ ನೆಗ್ಲೆಕ್ಟ್ ಮಾಡಬಾರದು. ಎನ್‌ಐಎ ತಂಡ ಬಂದಿದೆ. ಬೇಗ ಬಗೆಹರಿಸುತ್ತಾರೆ ಅನ್ನೋ ಭರವಸೆ ಇದೆ. ನಮ್ಮ ಪೊಲೀಸರು ಕೂಡ ಪ್ರಕರಣ ಬೇಧಿಸುವಲ್ಲಿಕ ಸಮರ್ಥರಿದ್ದಾರೆ. ಒಟ್ಟು ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

click me!