ಸೀಡಿ ಗ್ಯಾಂಗ್‌ ಮೇಲೆ ಎಸ್‌ಐಟಿ ದಾಳಿ: ಮೂಲ ವಿಡಿಯೋ ಶೋಧ

By Kannadaprabha News  |  First Published Mar 18, 2021, 7:24 AM IST

ಸೀಡಿ ಗ್ಯಾಂಗ್‌ ಮೇಲೆ ಎಸ್‌ಐಟಿ ದಾಳಿ: ಮೂಲ ವಿಡಿಯೋ ಶೋಧ| ಬೆಂಗಳೂರಿನ ನರೇಶ್‌ ಗೌಡ, ಭವಿತ್‌ ಮನೆ ಮೇಲೆ ರೇಡ್‌| ಸಿಗದ ಅಸಲಿ ಸೀಡಿ


ಬೆಂಗಳೂರು(ಮಾ.18): ಒಂದೆಡೆ ಹೊರರಾಜ್ಯಗಳಲ್ಲಿ ಮಾಜಿ ಸಚಿವರ ಲೈಂಗಿಕ ಹಗರಣದ ಸಿ.ಡಿ. ಸ್ಫೋಟದ ಸೂತ್ರಧಾರರ ಹುಡುಕಾಟ ನಡೆಸಿರುವ ವಿಶೇಷ ತನಿಖಾ ದಳ (ಎಸ್‌ಐಟಿ), ಮತ್ತೊಂದೆಡೆ ಬೆಂಗಳೂರಿನಲ್ಲೂ ಈ ‘ಸೀಡಿ ಗ್ಯಾಂಗ್‌’ ಮೇಲೆ ದಾಳಿ ಮಾಡಿದೆ. ಆ ತಂಡದ ಪತ್ರಕರ್ತರು ಸೇರಿದಂತೆ ಸಂಬಂಧಪಟ್ಟವರ ಮನೆಗಳಲ್ಲಿ ಇದೆ ಎನ್ನಲಾದ ‘ಆನ್‌ ಎಡಿಟೆಡ್‌’ ಸೆಕ್ಸ್‌ ವಿಡಿಯೋಗಾಗಿ ಶೋಧ ನಡೆಸಿದೆ.

ಎರಡು ದಿನಗಳ ಹಿಂದೆ ಬೆಂಗಳೂರಿನ ಶೇಷಾದ್ರಿಪುರದಲ್ಲಿರುವ ಜಾಹೀರಾತು ಕಂಪನಿ ಮೇಲೆ ದಾಳಿ ನಡೆಸಿ ಎಸ್‌ಐಟಿ ಪರಿಶೀಲಿಸಿತ್ತು. ಇದೀಗ ಬುಧವಾರ ಬಸವೇಶ್ವರನಗರ ಸಮೀಪದ ಮಂಜುನಾಥ ನಗರದಲ್ಲಿರುವ ‘ಸೀಡಿ ಸ್ಫೋಟದ ಮಾಸ್ಟರ್‌ ಮೈಂಡ್‌’ ಎನ್ನಲಾದ ಖಾಸಗಿ ಸುದ್ದಿವಾಹಿನಿ ಸ್ಟಿಂಗ್‌ ಆಪರೇಷನ್‌ ವರದಿಗಾರ ನರೇಶ್‌ ಗೌಡ ಹಾಗೂ ಆತನ ಸ್ನೇಹಿತನ ನಿವಾಸಿಗಳಿಗೆ ಬುಧವಾರ ಹಠಾತ್‌ ದಾಂಗುಡಿಯಿಟ್ಟು ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ.

Tap to resize

Latest Videos

ಸದನದಲ್ಲಿ ಮತ್ತೆ ಗುಡುಗಿದ ಬಸನಗೌಡ ಪಾಟೀಲ್ ಯತ್ನಾಳ್...!

ಈ ದಾಳಿ ವೇಳೆ ಕೆಲವು ಎಲೆಕ್ಟ್ರಾನಿಕ್‌ ವಸ್ತುಗಳು ಹಾಗೂ ದಾಖಲೆಗಳು ಪತ್ತೆಯಾಗಿವೆ. ಆದರೆ ಅಸಲಿ ವಿಡಿಯೋ ಪತ್ತೆಯಾಗಿಲ್ಲ. ಇದರಿಂದ ಆನ್‌ ಎಡಿಟೆಡ್‌ ವಿಡಿಯೋ ಮತ್ತಷ್ಟುನಿಗೂಢವಾಗಿದೆ ಎಂದು ತಿಳಿದುಬಂದಿದೆ.

ಮಾಜಿ ಸಚಿವರ ಲೈಂಗಿಕ ವಿವಾದಕ್ಕೆ ಸಂಬಂಧಿಸಿದ ಕೆಲ ನಿಮಿಷಗಳ ವಿಡಿಯೋಗಳು ಮಾತ್ರ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಿಗೆ ಬಹಿರಂಗವಾಗಿದ್ದವು. ಈ ವಿಡಿಯೋಗಳ ಬಹಿರಂಗಕ್ಕೂ ಮುನ್ನ ಆರೋಪಿಗಳು ಅವುಗಳನ್ನು ಎಡಿಟ್‌ (ಕತ್ತರಿ ಪ್ರಯೋಗ) ಮಾಡಿರುವುದು ತನಿಖೆ ವೇಳೆ ಖಚಿತವಾಗಿದೆ. ಹೀಗಾಗಿ ರಾಸಲೀಲೆಯ ಸಂಪೂರ್ಣ ವಿಡಿಯೋ ತನಿಖೆ ದೃಷ್ಟಿಯಿಂದ ಬಹುಮುಖ್ಯವಾಗಿದೆ. ಕೃತ್ಯ ಬೆಳಕಿಗೆ ಬಂದ ನಂತರ ಪ್ರಮುಖ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಯುವತಿ ಸಹ ಪತ್ತೆಯಾಗಿಲ್ಲ. ಹೀಗಾಗಿ ಆ ವಿಡಿಯೋಗೆ ಹುಡುಕಾಟ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೇಷಾದ್ರಿಪುರದಲ್ಲಿ ಜಾಹೀರಾತು ಕಂಪನಿಗೆ ಸೀಡಿ ಸ್ಫೋಟದ ತಂಡದ ಸದಸ್ಯ ಎನ್ನಲಾದ ಖಾಸಗಿ ಸುದ್ದಿವಾಹಿನಿ ಪತ್ರಕರ್ತ ಭವಿತ್‌ ನಿಯಮಿತವಾಗಿ ಭೇಟಿ ನೀಡುತ್ತಿದ್ದ. ಆ ಜಾಹೀರಾತು ಕಂಪನಿಯಲ್ಲೇ ವಿಡಿಯೋ ಎಡಿಟ್‌ ಆಗಿರುವ ಶಂಕೆ ಮೇರೆಗೆ ದಾಳಿ ನಡೆಸಿ ಪರಿಶೀಲಿಸಲಾಯಿತು. ಅಲ್ಲಿ ಕೆಲವು ಪ್ರಮುಖ ಪುರಾವೆಗಳು ಲಭಿಸಿವೆ. ನರೇಶ್‌ ಗೌಡ ಹಾಗೂ ಆತನ ಗೆಳೆಯನ ಮನೆಗಳಲ್ಲಿ ಕೂಡ ಕೆಲವು ವಸ್ತುಗಳು ಸಿಕ್ಕಿವೆ. ಅಸಲಿ ವಿಡಿಯೋ ಸಿಕ್ಕಿದ್ದರೆ ಕೃತ್ಯ ಎಲ್ಲಿ ನಡೆದಿದೆ, ಯಾವಾಗ ನಡೆದಿದೆ, ಹೇಗೆಲ್ಲಾ ಚಿತ್ರೀಕರಿಸಿದ್ದಾರೆ ಎಂಬುದಕ್ಕೆ ಸ್ಪಷ್ಟವಾದ ಉತ್ತರ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'4 ತಿಂಗಳಿಂದ ಸೀಡಿ ಗ್ಯಾಂಗ್‌ ಬ್ಲ್ಯಾಕ್‌ಮೇಲ್, ಮರ್ಯಾದೆಗೆ ಅಂಜಿ ಹಣ ಕೊಟ್ಟಿದ್ದೆ'

ದಾಳಿ ಏಕೆ?

- ಸೀಡಿ ಗ್ಯಾಂಗ್‌ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು ಎಡಿಟ್‌ ಮಾಡಿದ ವಿಡಿಯೋ

- ಮೂಲ ವಿಡಿಯೋ ಸಿಕ್ಕರೆ ಸಂಚು ನಡೆದ ಜಾಗ, ಸಮಯ ಪತ್ತೆಯಾಗುತ್ತದೆ

- ಹೀಗಾಗಿ ಅನ್‌ ಎಡಿಟೆಡ್‌ ವಿಡಿಯೋಗಾಗಿ ಎಸ್‌ಐಟಿ ಹುಡುಕಾಟ

- ದಾಳಿ ವೇಳೆ ಕೆಲವು ದಾಖಲೆ, ಎಲೆಕ್ಟ್ರಾನಿಕ್‌ ಉಪಕರಣಗಳು ಮಾತ್ರ ಪತ್ತೆ

click me!