ಕರ್ನಾಟಕದಲ್ಲಿ ಕೊರೋನಾ ಮಹಾಸ್ಫೋಟ: ಸೋಂಕಿನ ಸಂಖ್ಯೆಯಲ್ಲಿ ಭಾರೀ ಏರಿಕೆ

By Suvarna News  |  First Published Mar 17, 2021, 9:43 PM IST

ಕರ್ನಾಟಕದಲ್ಲಿ ದಿನದಿಂದ ದಿನ್ಕೆಕ ಕೊರೋನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಮಾರ್ಚ್ 17 ಅಂಕಿ ಸಂಖ್ಯೆ ಇಲ್ಲಿದೆ.


ಬೆಂಗಳೂರು, (ಮಾ.17): ಕೆಲ ದಿನಗಳಿಂದ ರಾಜ್ಯದಲ್ಲಿ 300ರಿಂದ 400 ಕೊರೋನಾ ಕೇಸ್‌ಗಳು ಪತ್ತೆಯಾಗುತ್ತಿದ್ದವು. ಆದ್ರೆ, ಇಂದು (ಬುಧವಾರ) ಕೊರೋನಾ ಮಹಾಸ್ಪೋಟವಾಗಿದೆ.

ಹೌದು..ಕಳೆದ 24 ಗಂಟೆಯಲ್ಲಿ 1275 ಮಂದಿಗೆ ಸೋಂಕು ಧೃಡವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 9,63,614ಕ್ಕೆ ಏರಿಕೆಯಾಗಿದೆ.

Latest Videos

undefined

ರಾಜ್ಯದಲ್ಲಿ ನೈಟ್‌ ಕರ್ಫ್ಯೂ, ಲಾಕ್‌ಡೌನ್ ಇಲ್ಲ: ಆದ್ರೆ ಕೇಂದ್ರದಿಂದ 3 ಪ್ರಮುಖ ಸಲಹೆ!

ರಾಜ್ಯದಲ್ಲಿಂದು 479 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಒಟ್ಟು 9,40,968 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಈ ಮೂಲಕ  ಸಕ್ರಿಯ ಪ್ರಕರಣಗಳ ಸಂಖ್ಯೆ 10,220 ಇದೆ.

ಇನ್ನು ಬೆಂಗಳೂರಿನಲ್ಲಿ ಇಂದು (ಬುಧವಾರ) 786 ಮಂದಿಗೆ ಸೋಂಕು ತಗುಲಿದ್ದು, , 271 ಮಂದಿ ಗುಣಮುಖಿತರಾಗಿದ್ದಾರೆ. ಕಿಲ್ಲರ್ ಕೊರೋನಾ ಸೋಂಕಿಗೆ ಮೂವರು ಬಲಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 4,530ಕ್ಕೆ ತಲುಪಿದೆ.

click me!