
ರಾಮನಗರ (ಮೇ.03) ಮಹಿಳೆಗೆ ಪದೇ ಪದೆ ಮೇಸೇಜ್ ಮಾಡಿ ನಗ್ನ ಫೋಟೋ ಕಳುಹಿಸುವಂತೆ ಕಿರುಕುಳ ನೀಡಿದ ಘಟನೆ ರಾಮನಗರದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ವಿಶೇಷ ಪೂಜೆ ಮಾಡಿಸುತ್ತಿದ್ದೇನೆ. ಈ ಪೂಜೆಗೆ ಮಹಿಳೆಯ ನಗ್ನ ಫೋಟೋ ಅವಶ್ಯಕತೆ ಇದೆ. ನಿನ್ನ ಮಚ್ಚೆ ಇಲ್ಲದ ನಗ್ನ ದೇಹದ ಫೋಟೋ ಕಳುಹಿಸು. ಪೂಜೆ ಮುಗಿದ ಬಳಿಕ 30 ಲಕ್ಷ ರೂಪಾಯಿ ಕಳುಹಿಸುತ್ತೇನೆ ಎಂದು ಕಿರಣ್ ಎಂಬಾತ ಕಿರುಕುಳ ನೀಡಿದ್ದಾನೆ. ಈ ಸಂಬಂಧ ದೂರು ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ.
ಮನಿ ಡಬ್ಲಿಂಗ್ ಮಾಡುವ ಪೂಜೆಯೊಂದಕ್ಕೆ ಸೆಲೆಕ್ಟ್ ಮಾಡಲು ನಗ್ನ ಪೋಟೊ ಕಳುಹಿಸುವಂತೆ ಕಿರುಕುಳ ನೀಡಿದ್ದಾನೆ. ರಾಮನಗರ ತಾಲೂಕಿನ ದೊಡ್ಡಮಣ್ಣುಗುಡ್ಡೆ ಗ್ರಾಮದ ಮಹಿಳೆಯೊಬ್ಬರ ನಂಬರನ್ನು ಪಡೆದ ಅದೇ ಗ್ರಾಮದ ಆರೋಪಿ ಕಿರಣ್ ನಗ್ನ ಫೋಟೋ ಕಳುಹಿಸುವಂತೆ ಕಿರುಕುಳ ನೀಡಿದ್ದಾರೆ. ಪದೇ ಪದೇ ವ್ಯಾಟ್ಸಾಪ್ ಮೆಸೇಜ್ ಮಾಡಿ ಕಿರುಕಳ ನೀಡಿದ್ದಾನೆ.
ನಾನು ಬೆಂಗಳೂರಿನಲ್ಲಿ ವಿಶೇಷ ಪೂಜೆ ಮಾಡಿಸ್ತಿದ್ದೀನಿ, ಇದಕ್ಕೆ ಮೈ ಮೇಲೆ ಮಚ್ಚೆ ಇಲ್ಲದ ಮಹಿಳೆ ನಗ್ನವಾಗಿ ಕೂರಬೇಕು.ಈ ಪೂಜೆಗೆ ನಿನ್ನನ್ನ ಸೆಲೆಕ್ಟ್ ಮಾಡಲು ನಿನ್ನ ಬೆತ್ತಲೆ ಪೋಟೊ ಕಳುಹಿಸು ಎಂದು ಕಿರಣ್ ಕಿರುಕುಳ ನೀಡಲು ಆರಂಭಿಸಿದ್ದಾನೆ. ಪೂಜೆ ಮುಗಿಯುತ್ತಿದ್ದಂತೆ 30 ಲಕ್ಷ ರೂಪಾಯಿ ಹಣ ನೀಡುತ್ತೇನೆ ಎಂದಿದ್ದಾನೆ. ಕಳೆದ ಒಂದು ವಾರದಿಂದ ಕಿರಣ್ ಸತತವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಕಿರಣ್ ಎಂಬಾತನ ಕಿರುಕುಳ ತೀವ್ರಗೊಳ್ಳುತ್ತಿದ್ದಂತೆ ಎರಡು ದಿನಗಳ ಹಿಂದೆ ಮಹಿಳೆ ದೂರು ನೀಡಿದ್ದಾರೆ, ರಾಮನಗರ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ಇದೀಗ ಎರಡು ದಿನ ಕಳೆದರೂ ಆರೋಪಿಯನ್ನು ಬಂದಿಸಿಲ್ಲ ಅನ್ನೋ ಆರೋಪವೂ ಕೇಳಿಬಂದಿದೆ. ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಮಹಿಳೆ ಮನವಿ ಮಾಡಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ