ಶೃಂಗೇರಿ ಕ್ಷೇತ್ರದ ಮತ ಮರು ಎಣಿಕೆ, 2023ರಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ ಈಗ ಗೆಲುವು

Published : May 03, 2026, 10:46 AM IST
BJP DN Jeevaraj

ಸಾರಾಂಶ

ಶೃಂಗೇರಿ ಕ್ಷೇತ್ರದ ಮತ ಮರು ಎಣಿಕೆ, 2023ರಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ ಈಗ ಗೆಲುವು, 2023ರ ವಿಧಾನಸಭಾ ಚುನಾವಣೆ ವೇಳೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಡಿ ರಾಜೇಗೌಡ ಗೆಲುವು ಕಂಡಿದ್ದರು.

ಚಿಕ್ಕಮಗಳೂರು (ಮೇ.03) ಶೃಂಗೇರಿ ವಿಧಾನಸಭಾ ಕ್ಷೇತ್ರದ ಮತ ಮರು ಎಣಿಕೆ ಇದೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ., 2023ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿಡಿ ರಾಜೇಗೌಡ ಗೆಲುವು ದಾಖಲಿಸಿದ್ದರು. ಈ ಮೂಲಕ ಟಿಡಿ ರಾಜೇಗೌಡ ಶಾಸಕರಾಗಿದ್ದರು. ಆದರೆ ಮತ ಎಣಿಕೆಯಲ್ಲಿ ಟ್ಯಾಂಪರಿಂಗ್ ಆಗಿದೆ ಎಂಬ ಆರೋಪದಿಂದ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಹೈಕೋರ್ಟ್ ಸೂಚನೆಯಂತೆ ಅಂಚೆ ಮತಗಳ ಮರು ಎಣಿಕೆ ನಡೆದಿದ್ದು, 2023ರಲ್ಲಿ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಡಿಎನ್ ಜೀವರಾಜ್ ಗೆಲುವು ದಾಖಲಿಸಿದ್ದಾರೆ. ಬಿಜೆಪಿ ಸಂಭ್ರಮ ಜೋರಾಗಿದೆ.

2023 ಇವಿಎಂನಲ್ಲಿ ಗೆದ್ದರೂ 2026ರ ಅಂಚೆ ಮತದಾನದಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ ಇದೀಗ ಮರು ಎಣಿಕೆಯಲ್ಲಿ ಸೋಲು ಕಂಡಿದ್ದಾರೆ. ಇತ್ತ ಇವಿಎಂನಲ್ಲಿ ಸೋತು ಅಂಚೆ ಮತದಾನದ ಮೂಲಕ ಜೀವರಾಜ್ ಗೆಲುವು ದಾಖಲಿಸಿದ್ದಾರೆ.

2023ರ‌ ಫಲಿತಾಂಶ ಇವಿಎಂನಲ್ಲಿ ಒಟ್ಟು ಮತಗಳು

ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡ : ಒಟ್ಟು ಮತಗಳು : 58602

ಡಿ ಎನ್ ಜೀವರಾಜ್ ಪಡೆದ ಮತಗಳು : 58278

ಫಲಿತಾಂಶ: 324 ಟಿ ಡಿ ರಾಜೇಗೌಡರ ಅಂತರ ಮತಗಳಿಂದ‌ ಗೆಲುವು

 

2026ರ ಅಂಚೆ ಮತ ಮರು ಎಣಿಕೆ ಫಲಿಶಾಂತ (1822 ಮತಗಳಲ್ಲಿ‌)

ಡಿ ಎನ್‌ ಜೀವರಾಜ್ ;690 ಮತಗಳು

ಟಿ‌ ಡಿ ರಾಜೇಗೌಡ. : 314 ಮತಗಳು

ಒಟ್ಟು :376 ಜೀವರಾಜ್ ಅಂತರದ ಮತಗಳು

 

2026ರಲ್ಲಿ ಇವಿಎಂ ಮತ್ತು ಅಂಚೆ ಮತಗಳ ಫಲಿತಾಂಶ

ರಾಜೇಗೌಡರ ಅಂತರ :324 ( ಇವಿಎಂನಲ್ಲಿ )

ಜೀವರಾಜ್ ಅಂತರ. : 376

ಒಟ್ಟು ಬಿಜೆಪಿ ಅಭ್ಯರ್ಥಿ ಜೀವರಾಜ್ 52 ಮತಗ‌ಳ‌ ಅಂತರದಿಂದ ಗೆಲುವು

ಗೆಲುವಿನ ಬಳಿಕ ಮಾತನಾಡಿರುವ ಡಿಎನ್ ಜೀವರಾಜ್, ಕಳೆದ ಮೂರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಕೊನೆಗೂ ನ್ಯಾಯ ಸಿಕ್ಕಿದೆ. ಕಾಂಗ್ರೆಸ್ ನಾಯಕರು ಸುಖಾ ಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಡಿಎನ್ ಜೀವರಾಜ್ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಿಗೆ ಬೆಲೆ ಏರಿಕೆ ಶಾಕ್, ಹೊಟೆಲ್‌ಗಳಲ್ಲಿ ಕಾಫಿ ತಿಂಡಿಗಳ ಬೆಲೆ ಹೆಚ್ಚಳ
ಗೋವುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಕಾಂಗ್ರೆಸ್ ಶಾಸಕ ಆರ್‌ವಿ ದೇಶಪಾಂಡೆ