ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ: ಇಕ್ಬಾಲ್

Kannadaprabha News   | Kannada Prabha
Published : Dec 22, 2025, 05:55 AM IST
Ramanagar MLA Iqbal Hussain on DK Shivakumar CM rav

ಸಾರಾಂಶ

ಶಾಸಕ ಇಕ್ಬಾಲ್ ಹುಸೇನ್‌ ಅವರು, ಡಿಸಿಎಂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂಬ ತಮ್ಮ ಹೇಳಿಕೆಗೆ ಬದ್ಧ ಎಂದು ಪುನರುಚ್ಚರಿಸಿದ್ದಾರೆ. ಭಗವಂತನ ಶಕ್ತಿ ಪಡೆದವರು ಕೊಟ್ಟ ದಿನಾಂಕವನ್ನು ತಾವು ಹೇಳಿದ್ದು, ಡಿಕೆಶಿಗೆ ನೊಣವಿನಕೆರೆ ಅಜ್ಜಯ್ಯನವರ ಆಶೀರ್ವಾದವಿದೆ ಎಂದಿದ್ದಾರೆ. 

ರಾಮನಗರ (ಡಿ.22): ನಮ್ಮ ನಾಯಕರಾದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಹೇಳಿಕೆಗೆ ನಾನು ಈಗಲೂ, ಕೊನೆಯವರಗೂ ಕೂಡ ಬದ್ಧವಾಗಿರುತ್ತೇನೆ. ಭಗವಂತನಿಂದ ಶಕ್ತಿ ಪಡೆದವರು ಕೊಟ್ಟ ದಿನಾಂಕವನ್ನೇ ನಾನು ಹೇಳಿದ್ದು, ಡಿಸಿಎಂ ಅವರಿಗೆ ಅಜ್ಜಯ್ಯ ಅವರ ಆರ್ಶೀವಾದ ಸದಾ ಇರುತ್ತದೆ ಎಂದು ಶಾಸಕ ಇಕ್ಬಾಲ್ ಹುಸೇನ್‌ ವಿಶ್ವಾಸ ವ್ಯಕ್ತಪಡಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾರು ಭಗವಂತನಿಂದ ಶಕ್ತಿಯನ್ನು ಪಡೆದುಕೊಂಡಿದ್ದಾರೋ ಅವರು ಕೊಟ್ಟಿದ್ದ ದಿನಾಂಕವನ್ನು ನಾನು ಹೇಳಿದ್ದೇನೆ. ಆ ಕಾರಣದಿಂದಲೇ ಜ.6 ಅಥವಾ 9 ಎಂದು ದಿನಾಂಕ ಹೇಳಿದ್ದೇನೆ. ಇದು ನನ್ನ ವೈಯಕ್ತಿಕವಾದ ಅಭಿಪ್ರಾಯ ಅಲ್ಲ. ನಮ್ಮ ನಾಯಕರು ಸಿಎಂ ಆಗ್ತಾರೆ ಎನ್ನುವುದಕ್ಕೆ ಸದಾ ಬದ್ಧನಾಗಿರುವೆ. ಎಲ್ಲಾ ನಾಯಕರಿಗೂ ಶಕ್ತಿ ತುಂಬಲು ಒಬ್ಬೊಬ್ಬರು ಗುರುಗಳು ಇರುತ್ತಾರೆ. ಅವರಿಂದ ರಾಜಕಾರಣಿಗಳು ಆಶೀರ್ವಾದ ಪಡೆಯುತ್ತಾರೆ. ಅದರಂತೆ ಡಿ.ಕೆ.ಶಿವಕುಮಾರ್ ಅವರು ನೊಣವಿನಕೆರೆಯ ಅಜ್ಜಯ್ಯ (ಲಿಂಗೈಕ್ಯ ಗಂಗಾಧರ ಜಗದ್ಗುರುಗಳು) ಅವರಿಂದ ಆರ್ಶೀವಾದ ಪಡೆಯುತ್ತಾರೆ. ನಾನು ಸಹ ಹೊಸ ವರ್ಷಕ್ಕೆ ಹೊಸ ಸಿಎಂ ಆಗುತ್ತಾರೆಂದು ದೇವರನ್ನು ನಂಬಿ ಕಾಯುತ್ತಿದ್ದೇನೆ ಎಂದರು.

ಗೃಹಲಕ್ಷ್ಮಿ ಹಣ ದುರ್ಬಳಕೆ ಸುಳ್ಳು:

ಚಳಿಗಾಲದ ಅಧಿವೇಶನದಲ್ಲಿ ರೈತರ ಸಮಸ್ಯೆಗಳು, ನೀರಾವರಿ, ಕೆರೆತುಂಬಿಸುವ ಕೆಲಸ, ರಸ್ತೆ ಅಭಿವೃದ್ದಿ ಸೇರಿದಂತೆ ಸಾಕಷ್ಟು ಚರ್ಚೆಗಳು ನಡೆದಿವೆ. ವಿರೋಧ ಪಕ್ಷದವರು ವಿನಾಕಾರಣ ಸಿಎಂ ಯಾರು ಅನ್ನೋ ಚರ್ಚೆ ಮಾಡಿ ಅಧಿವೇಶನದ ಕಾಲಹರಣ ಮಾಡಿದರು. ₹5000 ಕೋಟಿ ಗೃಹಲಕ್ಷ್ಮಿ ಹಣ ಚುನಾವಣೆಗಳಿಗೆ ಬಳಕೆ ಮಾಡಲಾಗಿದೆ ಎಂಬ ಬಿಜೆಪಿ ನಾಯಕರ ಆರೋಪ ಸುಳ್ಳು. 2 ತಿಂಗಳು ಹಾಕಿಲ್ಲ ಅನ್ನೋ ಮಾಹಿತಿಯನ್ನು ಅಧಿಕಾರಿಗಳು ಸಚಿವರಿಗೆ ಕೊಟ್ಟಿರಲಿಲ್ಲ. ಆ ಬಗ್ಗೆ ಸದನದಲ್ಲೇ ಸಚಿವರು ಮತ್ತು ಸಿಎಂ ಸ್ಪಷ್ಟನೆ ಸಹ ಕೊಟ್ಟಿದ್ದಾರೆ ಎಂದು ಇಕ್ಬಾಲ್‌ ಹೇಳಿದರು.

ಡಿಕೆಶಿ ಸಿಎಂ ಆಗುವ ಹೇಳಿಕೆಗೆ ಸದಾ ಬದ್ಧ: ಇಕ್ಬಾಲ್ ಹುಸೇನ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ವಚ್ಛ ಮಂಗಳೂರು ಮತ್ತೆ ಮಲೀನ: ರಸ್ತೆಗಳಲ್ಲಿ ರಾಶಿ ಬಿದ್ದ ಕಸ, ಇದಕ್ಕೆ ಹೊಣೆ ಯಾರು?
ವಿವಾದಿತ Bengaluru Tunnel Road ಟೆಂಡರ್ ಅದಾನಿ ಗ್ರೂಪ್ ಪಾಲು? ಕಾಂಗ್ರೆಸ್ ಸರ್ಕಾರಕ್ಕೆ ಧರ್ಮಸಂಕಟ!