
ಬೆಂಗಳೂರು (ಆ.11): ಸಹಕಾರ ಸಚಿವ ಕೆ.ಎನ್. ರಾಜಣ್ಣ ರಾಜೀನಾಮೆ ನೀಡಿದ ಬೆನ್ನಲ್ಲಿಯೇ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಹೈಕಮಾಂಡ್ ವಿರುದ್ಧವಾಗಿ ಯಾರೂ ಮಾತನಾಡಬಾರದು ಎಂಬ ಸಂದೇಶವನ್ನು ತಮ್ಮ ಮಾತಿನ ಮೂಲಕ ಹೊರ ಹಾಕಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ರಾಜಣ್ಣ ರಾಜೀನಾಮೆ ವಿಚಾರ ನನಗೆ ಗೊತ್ತಿಲ್ಲ. ಹೈಕಮಾಂಡ್ ವಿರುದ್ಧ ಯಾರೂ ಮಾತನಾಡಬಾರದು. ಯಾರು ಮಾಹಿತಿ ಕೊಟ್ಟಿದ್ದಾರೆ? ಸಿಎಂ ಹೇಳಿದ್ದಾರಾ? ಮಾಧ್ಯಮದಲ್ಲಿ ಚರ್ಚೆ ಆಗ್ತಿದೆ ಅಷ್ಟೆ. ಸದ್ಯಕ್ಕೆ ಯಾವುದೇ ಖಚಿತ ಮಾಹಿತಿ ಇಲ್ಲ. ಮಹದೇವಪುರ ಅಂತಲ್ಲ, ಚುನಾವಣಾ ಆಯೋಗದ ವಿರುದ್ಧ ಆಗಿದೆ. ಎಲ್ಲೆಡೆ ಬೆಂಬಲ ಸಿಗ್ತಿದೆ. ಆ ಹೋರಾಟವೇ ಬೇರೆ, ಇವರ ಹೇಳಿಗೆ ಹೇಗೆ ಕೊಟ್ಟಿದ್ದಾರೊ ಗೊತ್ತಿಲ್ಲ. ಇನ್ನು ಜಿಲ್ಲಾ ಉಸ್ತುವಾರಿ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ, ಅದು ಸಿಎಂ ನಿರ್ಧಾರ. ಅವರೇ ಬದಲಿಸಬೇಕು ಅಂತ ಕೇಳಿಕೊಂಡಿದ್ದರು. ಯಾರನ್ನ ಬದಲಿಸಬೇಕು ಅನ್ನೋದು ಸಿಎಂ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದೇನು? ಈ ಕುರಿತು ಮಾಯನಾಡಿದ ಬಿ.ವೈ. ವಿಜಯೇಂದ್ರ, 'ರಾಹುಲ್ ಗಾಂಧಿ ಚುನಾವಣೆ ಆಯೋಗದ ಮೇಲೆ ಗಂಭೀರ ಆರೋಪ ಮಾಡಿದ್ದರು. ಚುನಾವಣೆ ಆಯೋಗ ದುರುಪಯೋಗ ಮಾಡಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದೆ, ಪ್ರಧಾನಿ ಮೋದಿ ಆಗಿದ್ದಾರೆ ಎಂದಿದ್ದರು. ನಾವು ಅದನ್ನ ಅಲ್ಲಗೆಳೆದಿದ್ದೆವು. ಸ್ವತಃ ರಾಜಣ್ಣ, ಸಿಎಂ ಸಿದ್ದರಾಮಯ್ಯ ಆಪ್ತರು. ಅವರು ರಾಹುಲ್‌ಗಾಂಧಿ ಮಾಡಿದ್ದ ಆರೋಪ ಸರಿಯಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಇದಾಗಿದೆ ಎಂದಿದ್ದರು. ಸತ್ಯವನ್ನ ಕೇಳಲಾಗದ ರಾಹುಲ್ ಗಾಂಧಿ, ಎಸ್ಟಿ ಸಮುದಾಯದವರು ಆಗಿರುವ ರಾಜಣ್ಣನವರ ರಾಜೀನಾಮೆ ಪಡದಿದ್ದಾರೆ ಎಂದು ಆರೋಪ ಮಾಡಿದರು.
ಮುಂದುವರೆದು, ರಾಹುಲ್ ಗಾಂಧಿ ಸಂವಿಧಾನ ಹಿಡಿದು ದಲಿತರ ಪರ ಎಂದು ಮಾತನಾಡುತ್ತಿದ್ದರು. ಆದರೆ ಈಗ ಕಾಂಗ್ರೆಸ್‌ನ ನಿಜ ಬಣ್ಣ ಬಯಲಾಗಿದೆ. ಕಾಂಗ್ರೆಸ್ ದಲಿತರನ್ನ ಕೇವಲ ವೋಟ್ ಬ್ಯಾಂಕ್‌ಗೆ ಮಾತ್ರ ಬಳಸಿ ಕೊಂಡಿದೆ. ಈ ಸಮುದಾಯದ ಪರ ಕಾಳಜಿ ಕಾಂಗ್ರೆಸ್‌ಗೆ ಇಲ್ಲ ಎನ್ನುವುದನ್ನ ರಾಹುಲ್ ಗಾಂಧಿ ಸಾಭೀತು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ