ಸಿಲಿಕಾನ್ ಸಿಟಿಯಲ್ಲಿ ತಂಪೆರೆದ ವರುಣ, ಕೊರೋನಾ ಹೆಚ್ಚುವ ಭೀತಿ..?

By Suvarna NewsFirst Published Mar 20, 2020, 6:37 PM IST
Highlights

ಬೆಂಗಳೂರಿನ ಹಲವೆಡೆ ಗುಡುಗು-ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಇದರಿಂದ ಕೊರೋನಾ ಆತಂಕ ಹೆಚ್ಚಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ

ಬೆಂಗಳೂರು(ಮಾ.20): ಬಿಸಿಲಿನಿಂದ ಬಳಲಿ ಬೆಂಡಾಗಿದ್ದ ಸಿಲಿಕಾನ್ ಸಿಟಿ ಬೆಂಗಳೂರಿಗೆ ವರುಣ ತಂಪೆರೆದಿದ್ದಾನೆ. ಮಳೆ ಬೆಂಗಳೂರಿನ ಮಂದಿಯ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುವುದರ ಜತೆ ಜತೆಗೆ ಆತಂಕವನ್ನೂ ಮೂಡುವಂತೆ ಮಾಡಿದೆ.

ರಾಜ್ಯದಲ್ಲಿ 40 ಡಿಗ್ರಿ ದಾಟಲಿದೆ ತಾಪಮಾನ..! ಇನ್ನೆರಡು ದಿನ ಕೆಲವೆಡೆ ಮಳೆ

ಬಿಸಿಲಿನಿಂದ ಬೇಯುತ್ತಿದ್ದ ನಗರಕ್ಕೆ ಮಳೆರಾಯ ತಂಪೆರೆದಿದ್ದಾನೆ. ನಗರದ ಕೆ.ಆರ್. ಮಾರ್ಕೆಟ್, ಚಾಮರಾಜ ಪೇಟೆ, ಮಾಗಡಿ ರೋಡ್ ಸೇರಿದಂತೆ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಕೆಲವೆಡೆ ಧಾರಾಕಾರ ಮಳೆಯಾದರೆ, ಮತ್ತೆ ಕೆಲವೆಡೆ ತುಂತುರು ಮಳೆಯಾಗಿದೆ. ಇದರಿಂದಾಗಿ ಕಚೇರಿಗೆ ತೆರಳಿದ್ದ ಉದ್ಯೋಗಿಗಳು ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಯಿತು.

ವಾಹನ ಸವಾರರಿಗೆ ಕೊರೋನಾ ಜಾಗೃತಿ, ಬೆಂಗಳೂರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ!

ವಾತಾವರಣದಲ್ಲಿ ಉಷ್ಣತೆ ಹೆಚ್ಚಾದರೆ ಕೊರೋನಾ ವೈರಸ್ ಸೋಂಕು ಹಬ್ಬವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಆದರೆ ನಗರದಲ್ಲಿ ಮಳೆಯಾಗಿರುವುದು ಬೆಂಗಳೂರಿನ ಮಂದಿಗೆ ಆತಂಕಕ್ಕೊಳಗಾಗುವಂತೆ ಮಾಡಿದೆ. ಮಲೆನಾಡಿನಲ್ಲಿ ಮಳೆಯಾದರೆ ಮಂಗನ ಕಾಯಿಲೆ ಹತೋಟಿಗೆ ಬರುವ ಸಾಧ್ಯತೆಯಿದೆ. 
 

click me!