ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ, ರೆಡ್ ಅರ್ಲಟ್‌

By Suvarna NewsFirst Published Aug 4, 2022, 6:13 PM IST
Highlights

ಕರ್ನಾಟಕದಲ್ಲಿ ಅಬ್ಬರ ಮಳೆಯಾಗುತ್ತಿದ್ದು, ಜನರು ತತ್ತರಿಸಿಹೋಗಿದ್ದಾರೆ. ಇದೀಗ ಇನ್ನೂ ಐದು ದಿನ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಬೆಂಗಳೂರು, (ಆಗಸ್ಟ್. 04): ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ಪ್ರವಾಹ ಭೀತಿ ಶುರುವಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ.

ಇನ್ನು ಈ ಮಳೆ ಸಧ್ಯಕ್ಕೆ ನಿಲ್ಲಲ್ಲ. ಮುಂದಿನ 5 ದಿನಗಳ ವರೆಗೂ ಕರ್ನಾಟಕದಲ್ಲಿ ಭಾರೀ ಮಳೆ ಇದೆ. ಈ ಬಗ್ಗೆ ಹವಾಮಾನ ಇಲಾಖೆಯಿಂದ  ಮಾಹಿತಿ ನೀಡಿದೆ. ಅದರಲ್ಲೂ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ  ನೀಡಿದೆ. ಈ ಹಿನ್ನೆಲೆಯಲ್ಲಿ ಇಂದು(ಆ.04) ಆರೆಂಜ್ ಅಲರ್ಟ್, ನಾಳೆ(ಆ,05) ರೆಡ್ ಅಲರ್ಟ್, ಆ.6 ರಂದು ಆರೆಂಜ್ ಅಲರ್ಟ್, ಅ.7 ಮತ್ತು 8 ರಂದು ಯಲ್ಲೋ ಅಲರ್ಟ್ ಜಾರಿಯಾಗಿದೆ.

ಉತ್ತರದ 8 ಜಿಲ್ಲೆಯಲ್ಲಿ ಭಾರಿ ಮಳೆ: ಜನಜೀವನ ಅಸ್ತವ್ಯಸ್ತ

ಇನ್ನು ಇಂದು(ಗುರುವಾರ) ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಗದಗ, ಕಲಬುರಗಿ ವಿಜಯಪುರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಣೆ ಮಾಡಿಲಾಗಿದೆ. ನಾಳೆಯೂ (ಶುಕ್ರವಾರ) ಬೆಳಗಾವಿ, ಧಾರವಾಡ, ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಇಂದು ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಜಾರಿಯಾಗಿದ್ದರೆ, ಗುರುವಾರ ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ರೆಡ್ ಅಲರ್ಟ್ ಜಾರಿಯಾಗಿದೆ.

ಎಲ್ಲಿ ನೋಡಿದ್ರು ನೀರು-ನೀರು
ಹೌದು...ಜುಲೈ ಮೊದಲ ವಾರದಲ್ಲಿ ಕರ್ನಾಟಕದ ಹಲವು ಕಡೆ ಭಾರೀ ಮಳೆಯಾಗಿತ್ತು. ಇದರಿಂದ ಜನರು ತತ್ತರಿಸಿದ್ದರು. ಬಳಿಕ ಕೊಂಚ ಕಡಿಮೆಯಾಗಿದ್ದ ಮಳೆಯಾರ ಇದೀಗ ಮತ್ತೆ ಶುರುಮಾಡಿಕೊಂಡಿದ್ದಾನೆ. 

ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಭಾರೀ ಮಳೆಯಾಗುತ್ತಿದೆ. ಅದರಲ್ಲೂ ಕರವಾಳಿ ಜಿಲ್ಲೆಗಳಲ್ಲಿ ಅಬ್ಬರಿಸುತ್ತಿದ್ದು, ಮನೆಗಳಿಗೆ ನೀಡು ನುಗ್ಗಿದೆ. ಅಲ್ಲದೇ ಪ್ರಾಣಹಾನಿಗಳು ಸಹ ಆಗಿವೆ.ಹಳ್ಳ-ಕೊಳ್ಳಗಳು, ಕೆರೆ, ಕಟ್ಟೆಗಳು ತುಂಬಿಹರಿಯುತ್ತಿವೆ.

ಇದೀಗ ಇನ್ನೂ ಐದು ದಿನಗಳ ಭಾರೀ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಹೇಳಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
 

click me!