ಕರ್ನಾಟಕದ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರೀ ಮಳೆ

By Kannadaprabha News  |  First Published Jun 13, 2024, 6:36 AM IST

ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಮಾಂಜ್ರಾ ನದಿ ತುಂಬಿ ಹರಿಯುತ್ತಿದೆ. ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಆಳಂದ, ಯಡ್ರಾಮಿ ತಾಲೂಕಿನ ಕೆಲವು ಗ್ರಾಮಗಳು ಜಲಾವೃತಗೊಂಡಿವೆ. ಕಲಬುರಗಿ-ಬಸವಕಲ್ಯಾಣಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಂದ್ ಆಗಿದೆ. 


ಬೆಂಗಳೂರು(ಜೂ.13):  ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಕಲಬುರಗಿ, ಕೊಪ್ಪಳ, ಬಳ್ಳಾರಿ, ಚಿಕ್ಕಮಗಳೂರು ಸೇರಿ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬುಧವಾರ ಮಳೆಯಾಗಿದೆ.

ಕೊಪ್ಪಳದ ಸಿದ್ದೇಶ್ವರ ಕಾಲನಿ, ಗಣೇಶ ನಗರ, ಪದಕಿ ಲೇ ಔಟ್, ರಾಯರ ಮಠ, ರೈಲ್ವೆ ನಿಲ್ದಾಣ ಪ್ರದೇಶದ ಬಹುತೇಕ ಭಾಗ ಅಕ್ಷರತಃ ಮುಳುಗಿದೆ. ನಗರದ ರೈಲ್ವೆ ಸ್ಟೇಷನ್ ಮುಳುಗಿದ್ದು, ಟಿಕೆಟ್ ಕೌಂಟರನ್ನು ಸ್ಥಳಾಂತರ ಮಾಡಲಾಗಿದೆ. ಕಿನ್ನಾಳ ರಸ್ತೆಯ ಕೆಳಸೇತುವೆ ಮುಳುಗಿದೆ. ಗವಿಶ್ರೀ ನಗರದಲ್ಲಿರುವ ನ್ಯಾಪ್ ಕಿನ್ ಘಟಕಕ್ಕೆ ನೀರು ನುಗ್ಗಿದ್ದು, ಲಕ್ಷಾಂತರ ರು. ಹಾನಿಯಾಗಿದೆ. ಕರಾವಳಿಯಲ್ಲಿ ಮಳೆ ಆರ್ಭಟ ಹೆಚ್ಚಾಗಿದ್ದು, ಉಡುಪಿ ಜಿಲ್ಲೆಯ ಪ್ರಸಿದ್ದ ಪ್ರವಾಸಿ ತಾಣಗಳಾದ ಮಲ್ಪೆ ಕಾಪು ಬೀಚು ಗಳಲ್ಲಿ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿಲಾಗಿದೆ. ಮಲ್ಪೆ ಬೀಚ್‌ನಲ್ಲಿ ಸುಮಾರು ಒಂದು ಕಿಲೋಮೀಟರ್‌ಉದ್ದಕ್ಕೆ ಏಳು ಅಡಿ ಎತ್ತರದ ಬಲೆ ಅಳವಡಿಸಿ ತಡೆ ಬೇಲಿ ನಿರ್ಮಿಸಲಾಗಿದೆ. 

Tap to resize

Latest Videos

ಕರ್ನಾಟಕದಲ್ಲಿ ಹತ್ತೇ ದಿನದಲ್ಲಿ ವಾಡಿಕೆಗಿಂತ 78% ಅಧಿಕ ಮಳೆ..!

ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಾಗುತ್ತಿರುವ ಪರಿಣಾಮ ಮಾಂಜ್ರಾ ನದಿ ತುಂಬಿ ಹರಿಯುತ್ತಿದೆ. ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಆಳಂದ, ಯಡ್ರಾಮಿ ತಾಲೂಕಿನ ಕೆಲವು ಗ್ರಾಮಗಳು ಜಲಾವೃತಗೊಂಡಿವೆ. ಕಲಬುರಗಿ-ಬಸವಕಲ್ಯಾಣಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಬಂದ್ ಆಗಿದೆ. ಚಿಕ್ಕಮಗಳೂರು ಜಿಲ್ಲೆನರಸಿಂಹರಾಜಪುರ ತಾಲೂಕಿನ ಸಾರ್ಯ ಗ್ರಾಮದಲ್ಲಿ ಮರ ಬಿದ್ದು, ಎರಡು ಹಸುಗಳು ಮೃತಪಟ್ಟಿವೆ. ಬಳ್ಳಾರಿ ಜಿಲ್ಲೆಯಲ್ಲಿ ಮಳೆಗೆ 5 ಮನೆಗಳು ಕುಸಿದು ಬಿದ್ದಿವೆ.

click me!