ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮಳೆ ಇಳಿಮುಖ

By Kannadaprabha NewsFirst Published Jul 20, 2021, 8:07 AM IST
Highlights
  • ಭಾನುವಾರ ಭರ್ಜರಿಯಾಗಿ ಅಬ್ಬರಿಸಿದ್ದ ಮಳೆ 
  • ಸೋಮವಾರ ರಾಜ್ಯದಲ್ಲಿ ಕೊಂಚ ಪ್ರಮಾಣದಲ್ಲಿ ಇಳಿಕೆಯಾದ ಮಳೆ
  • ಹಲವೆಡೆ ಮಳೆಯಿಂದ ಭಾರಿ ಅನಾಹುತ 

ಬೆಂಗಳೂರು (ಜು.20): ಭಾನುವಾರ ಭರ್ಜರಿಯಾಗಿ ಅಬ್ಬರಿಸಿದ್ದ ಮಳೆ  ಕಲ್ಯಾಣ ಕರ್ನಾಟ ಭಾಗದಲ್ಲಿ ಮುಂದುವರಿದಿದ್ದುಕರಾವಳಿ ಹಾಗು ಮಲೆನಾಡು ಹಾಗು ಹಳೆ ಮೈಸೂರು ಭಾಗದಲ್ಲಿ ಸ್ವಲ್ಪ ಮಟ್ಟಿಗೆ ಇಳಿಮುಖವಾಗಿದೆ. 

ಕಲಬುರಗಿ ಚಿಂಚೋಳಿ ತಾಲೂಕಿನಲ್ಲಿ ಬಿರುಸಿನ ಮಳೆ ಆಗುತ್ತಿರುವುದರಿಂದ ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಹರಿದು ಬಿಟ್ಟ ನೀರಿನಿಂದ ಕೋಟಗಾ  ಸೇರಿದಂತೆ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ  ಸೇತುವೆಗಳು ಮುಳುಗಿ ಜಲಾವೃತಗೊಂಡಿವೆ. 

4 ದಿನ ವ್ಯಾಪಕ ಮಳೆ ಸಾಧ್ಯತೆ : ಮಲೆನಾಡಿಗೆ ಆರೆಂಜ್‌ ಅಲರ್ಟ್‌

60 ಮನೆಗಳು ಮಳೆಯಿಂದ ಕುಸಿದು ಬಿದ್ದಿವೆ. ಮತ್ತು 300 ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ. 

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬದನೂರು ಗ್ರಾಮ ಕೆರೆಯ ಒಡ್ಡು ಒಡೆದು ನೀರೆಲ್ಲಾ ಹಳ್ಳದ ಪಾಲಾಗಿದೆ. ನೂರಾರು ಎಕರೆ ಭತ್ತ ನಾಟಿ ಮಾಡಿರುವ ಪ್ರದೇಶವೆಲ್ಲಾ ಜಲಾವೃತವಾಗಿದ್ದು ರೈತರು ಕಂಗಾಲಾಗಿದ್ದಾರೆ. 

click me!