ನಗರದ ಭಗತ್ ಸಿಂಗ್ ವೃತ್ತದಲ್ಲಿರುವ ಐತಿಹಾಸಿಕ ಕೋರ್ಟ್ ಜಾಗದಲ್ಲಿ ಮುಸ್ಲಿಂ ಸಮುದಾಯದಿಂದ ನಿರ್ಮಾಣಗೊಳ್ಳುತ್ತಿರುವ ಕಮಾನ್ ಕಾಮಗಾರಿಯನ್ನು ಬಿಜೆಪಿ ನಿಯೋಗ ವಿರೋಧ ವ್ಯಕ್ತಪಡಿಸಿದೆ. ಈ ವೇಳೆ ಎರಡು ತಂಡಗಳ ಮಧ್ಯೆ ಜಯ ಘೋಷಣೆ ಕೂಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ರಾಯಚೂರು (ನ.30): ನಗರದ ಭಗತ್ ಸಿಂಗ್ ವೃತ್ತದಲ್ಲಿರುವ ಐತಿಹಾಸಿಕ ಕೋರ್ಟ್ ಜಾಗದಲ್ಲಿ ಮುಸ್ಲಿಂ ಸಮುದಾಯದಿಂದ ನಿರ್ಮಾಣಗೊಳ್ಳುತ್ತಿರುವ ಕಮಾನ್ ಕಾಮಗಾರಿಯನ್ನು ಬಿಜೆಪಿ ನಿಯೋಗ ವಿರೋಧ ವ್ಯಕ್ತಪಡಿಸಿದೆ. ಈ ವೇಳೆ ಎರಡು ತಂಡಗಳ ಮಧ್ಯೆ ಜಯ ಘೋಷಣೆ ಕೂಗಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.
ಐತಿಹಾಸಿಕ ಪುರಾತತ್ವ ಜಾಗದಲ್ಲಿ ಹಜರತ್ ಸೈಯದ್ ಶಾಹ ಅಲ್ಲಾವುದ್ದೀನ್ ದರ್ಗಾದ ಕಮಾನ್ ನಿರ್ಮಾಣ ಕಾರ್ಯ ಕೈಗೊಂಡಿರುವ ಮುಸ್ಲಿಂ ಸಮುದಾಯ. ಸರ್ಕಾರದ ನಿಯಮ ಮೀರಿ ಐತಿಹಾಸಿಕ ಕೋರ್ಟ್ಜಾ ಗದಲ್ಲಿ ಕಮಾನ್ ನಿರ್ಮಾಣ ಮಾಡಿದ್ದಾರೆಂದು ಬಿಜೆಪಿ ವಿರೋಧಿಸಿದೆ. ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ನಿಯೋಗ ಈ ವೇಳೆ ಎರಡೂ ತಂಡಗಳ ಮಧ್ಯೆ ಜಯ ಘೋಷಣೆ. ಸ್ಥಳದಲ್ಲೇ ಜೈಶ್ರೀರಾಮ ಘೊಷಣೆ ಕೂಗಿದ ಬಿಜೆಪಿ ಕಾರ್ಯಕರ್ತರು. ಎರಡು ತಂಡಗಳ ಪರಸ್ಪರ ಘೋಷಣೆ, ಮಾತಿನಚಕಮಕಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
undefined
ರಾಯಚೂರು: ಪರೀಕ್ಷೆಯಲ್ಲಿ ನಕಲು ಮಾಡಿ ಡಿಬಾರ್ ಆದ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ
ಮಸೀದಿ ಕಮಾನ್ ನಿರ್ಮಾಣಕ್ಕೆ ನಗರಸಭೆ ಟೆಂಡರ್ ಕರೆದು ಕಾಮಗಾರಿಗೆ ಅನುಮತಿ ನೀಡಲಾಗಿದೆ. ಆದರೆ ಪುರಾತತ್ವ ಸ್ಥಳದಲ್ಲಿ ಕಾಮಗಾರಿ ಬಗ್ಗೆ ಪ್ರಶ್ನಿಸಿರೋ ಬಿಜೆಪಿ ನಾಯಕರು. ಕಾಮಗಾರಿ ತಡೆಹಿಡಿಯುವಂತೆ ಬಿಜೆಪಿ ನಾಯಕರು ಒತ್ತಾಯ. ಆ ಬಳಿಕ ನಗರಸಭೆ ಪೌರಾಯುಕ್ತರೊಂದಿಗೆ ಶಾಸಕರ ನಿಯೋಗ ಸಭೆ ನಡೆಸಿತು. ಸಭೆಯಲ್ಲಿ ಕಮಾನ್ ತೆರವು ಮಾಡುವಂತೆ ಸೂಚನೆ ನೀಡಿದ ನಿಯೋಗ.
ರಾಯಚೂರು: ಅನಾರೋಗ್ಯದ ನಡುವೆಯೂ ಕರ್ತವ್ಯ ನಿರ್ವಹಿಸಿದ ಡಿಸಿ ನಾಯಕ, ಎಲ್ಲೆಡೆ ಮೆಚ್ಚುಗೆ
ನಗರ ಸಭೆ ಕಮಿಷನರ್ ಭೇಟಿ ಮಾಡಿದ ನಿಯೋಗ:
ನಗರದ ಪುರಾತತ್ವ ಜಾಗದಲ್ಲಿ ಸರ್ಕಾರದ ನಿಯಮ ಮೀರಿ ಮಸೀದಿ ಕಮಾನ್ ನಿರ್ಮಾಣ ಕಾಮಗಾರಿ ಮಾಡುತ್ತಿರುವುದನ್ನು ತಡೆಹಿಡಿಯುವಂತೆ ನಗರಸಭೆ ಕಮಿಷನರ್ ಸಿದ್ದಯ್ಯಸ್ವಾಮಿಗೆ ದೂರು ನೀಡಿ ಕೂಡಲೇ ಕಾಮಗಾರಿ ನಿಲ್ಲಿಸುವಂತೆ ಬಿಜೆಪಿ ನಿಯೋಗ ಪಟ್ಟು ಹಿಡಿದರು.
ಬಿಜೆಪಿ ನಿಯೋಗ ಬೆನ್ನಲ್ಲೆ ಮುಸ್ಲಿಂ ಸಮುದಾಯದ ಮುಖಂಡರ ನಗರಸಭೆಗೆ ದೌಡಾಯಿಸಿದ್ದಾರೆ. ಕಮಾನ್ ವಿವಾದ ಭುಗಿಲೆದ್ದ ಹಿನ್ನೆಲೆ ವಿವಾದಿತ ಸ್ಥಳದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ರಾಯಚೂರು ಬಿಜೆಪಿ ಶಾಸಕ ಡಾ. ಶಿವರಾಜ ಪಾಟೀಲ್ ಹೇಳೋದೇನು?
ಟೆಂಡರ್ ಕರೆಯುವ ಮುಂಚೆ ನಗರಸಭೆ & ವಕ್ಫ್ ಮಂಡಳಿಗೆ ಪ್ರಾಚ್ಯವಸ್ತು ಇಲಾಖೆ ಪತ್ರ ಬರೆದಿದೆ. ಪತ್ರ ಬರೆದ ನಂತರವೂ ಟೆಂಡರ್ ಕರೆಯಲಾಗಿದೆ. ಹೀಗಾಗಿ ತಕ್ಷಣವೇ ಕರೆದ ಟೆಂಡರ್ ರದ್ದುಗೊಳಿಸಬೇಕು. ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳ ಹೇಗಿತ್ತು ಹಾಗೆ ಮಾಡಿಕೊಡಬೇಕು. ರಾಯಚೂರು ಶಾಂತ ರೀತಿಯಿಂದ ಇದೆ. ನಗರದಲ್ಲಿ ಇಂತಹ ಕಮಾನ್ ಗಳ ಅವಶ್ಯಕತೆ ಏನಿದೆ? ಕಳೆದ 70ವರ್ಷದಿಂದ ಸಮುದಾಯಗಳ ಮಧ್ಯೆ ಜಗಳ ಆಗದಂತೆ ಕಾಪಾಡುತ್ತಿದ್ದೇವೆ. ಇದೀಗ ಇಂಥ ಅನಗತ್ಯ ಕಮಾನುಗಳ ನಿರ್ಮಾಣ ಮಾಡುವ ಅಗತ್ಯ ಏನಿದೆ ಎಂದು ರಾಯಚೂರು ಬಿಜೆಪಿ ಶಾಸಕ ಡಾ.ಶಿವರಾಜ ಪಾಟೀಲ್ ಪ್ರಶ್ನಿಸಿದ್ದಾರೆ.