ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಖಾಸಗಿ ಶಾಲಾ ವಾಹನ ದುರಂತ ಪ್ರಕರಣ ಇಂದು ರಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ರಾಯಚೂರು (ಸೆ.6): ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಖಾಸಗಿ ಶಾಲಾ ವಾಹನ ದುರಂತ ಪ್ರಕರಣ ಇಂದು ರಿಮ್ಸ್ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ್ ಪಾಟೀಲ್ ಭೇಟಿ ನೀಡಿ ಗಾಯಾಳು ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಶಾಲಾ ಮಕ್ಕಳ ವಾಹನ ಅಪಘಾತ ನೋವುಂಟು ಮಾಡಿದೆ. ಅಪಘಾತದಲ್ಲಿ ಮೃತಪಟ್ಟ ಇಬ್ಬರು ಬಾಲಕರ ಕುಟುಂಬಕ್ಕೆ ಸರ್ಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಇನ್ನು ಗಂಭೀರ ಗಾಯಗೊಂಡಿರುವ ಬಾಲಕರಿಗೂ 3 ಲಕ್ಷ ರೂ. ಪರಿಹಾರ ಘೋಷಣೆಯಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ನಾಟಕ ನೋಡಲು ಹೊರಟವರ ಮೇಲೆ ಹರಿದ ಪಲ್ಸರ್ 200cc ಬೈಕ್; ನಾಲ್ವರು ದುರ್ಮರಣ!
ವಿದ್ಯಾರ್ಥಿನಿ ಮಧುಶ್ರೀ ಹಾಗೂ ಮಂಜುನಾಥ ಸ್ಥಿತಿ ಗಂಭೀರವಾಗಿದೆ. ಓರ್ವ ಬಾಲಕಿಗೆ ತಲೆಗೆ ಬಲವಾಗಿ ಪೆಟ್ಟು ಬಿದ್ದಿದೆ. ಬಾಲಕಿಗೆ ಬೆಂಗಳೂರಿನ ನ್ಯೂರೋ ಸರ್ಜನ್ ಕಲ್ಸಲ್ಟ್ ಮಾಡಿದ್ದೇವೆ. ವಿದ್ಯಾರ್ಥಿ ನಂದೀಶ್ ನ ಎರಡು ಕೈ ಫ್ರಾಕ್ಚರ್ ಆಗಿದೆ. ಘಟನೆಗೆ ಕಾರಣವೇನು ಎಂಬ ತಿಳಿಯಲು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪೊಲೀಸ್ ಇಲಾಖೆ ಎಫ್‌ಐಆರ್ ಮಾಡಿದೆ, ವರದಿ ಸಲ್ಲಿಸಲು ಹೇಳಿದ್ದೇನೆ. ಎಲ್ಲ ಶಾಲೆಗಳ ಬಸ್‌ನ ಫಿಟ್ನೆಸ್ ಹಾಗೂ ಚಾಲಕ ಫಿಸಿಕಲ್ ಫಿಟ್‌ನೆಸ್, ಲೈಸೆನ್ಸ್ ಬಗ್ಗೆ ಆರ್‌ಟಿಒ ದಿಂದ ವರದಿ ಪಡೆಯಲು ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ ಎಂದರು ಎಂದರು.
ಅಪಘಾತಕ್ಕೆ ರಸ್ತೆಯಲ್ಲಿನ ತಗ್ಗು ಗುಂಡಿಗಳೇ ಕಾರಣ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ರಸ್ತೆಯನ್ನು ಈಗಾಗಲೇ ಕೆಆರ್‌ಡಿಸಿಎಲ್‌ಗೆ ಹಸ್ತಾಂತರಿಸಲಾಗಿದೆ. ಅದರ ನಿರ್ವಹಣೆ ಅವರ ಕರ್ತವ್ಯವಾಗಿದೆ ಇದರ ಬಗ್ಗೆ ವರದಿ ಕೊಡಲು ಕೇಳಿದ್ದೇನೆ. ಜಿಲ್ಲಾಧಿಕಾರಿ ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ವೇಳೆ ಶಾಸಕ ಬಸನಗೌಡ ದದ್ದಲ್, ಹಂಪನಗೌಡ ಬಾದರ್ಲಿ, ಎಂಎಲ್‌ಸಿ ವಸಂತ ಕುಮಾರ ಇದ್ದರು.
ರಾಯಚೂರಲ್ಲಿ ಭೀಕರ ಅಪಘಾತ: ಶಿಕ್ಷಕರ ದಿನಾಚರಣೆಯಂದೇ ಕಾಲು ಕಳೆದುಕೊಂಡ ನಾಲ್ವರು ಮಕ್ಕಳು!
ನಿನ್ನೆ ಶಿಕ್ಷಕರ ದಿನಾಚರಣೆ ಹಿನ್ನೆಲೆ ಶಾಲಾ ಮಕ್ಕಳನ್ನು ಕರೆತರಲು ಕಪ್‌ಗಲ್ ಹೋಗಿದ್ದ ಶಾಲಾವಾಹನ. ವಾಹನದಲ್ಲಿ ಮಕ್ಕಳನ್ನು ಕೂರಿಸಿಕೊಂಡು ಮಾನ್ವಿ ಕಡೆಗೆ ಹೊರಟಿದ್ದ ಬಸ್. ಇದೇ ವೇಳೆ ಸಿಂಧನೂರಿನಿಂದ ರಾಯಚೂರು ಕಡೆಗೆ ಹೊರಟಿದ್ದ ಸಾರಿಗೆ ಬಸ್ ಎರಡೂ ಮುಖಾ ಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳ ಕಾಲು ಕತ್ತರಿಸಿ ಹಲವು ಮಕ್ಕಳು ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು. ಆಸ್ಪತ್ರೆಗೆ ಸಾಗಿಸಿದ ಬಳಿಕ ಚಿಕಿತ್ಸೆ ಫಲಿಸದೇ ಇಬ್ಬರು ಮಕ್ಕಳು ಮೃತರಾಗಿದ್ದಾರೆ.