ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿರುವ ಚಂದ್ರಯಾನ-3 ಯಶಸ್ವಿಯಾಗಲೆಂದು ರಾಯಚೂರಿನಲ್ಲಿ ಪುಟಾಣಿ ಮಕ್ಕಳು ವಿಶೇಷ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಮಕ್ಕಳು ಪ್ರಾರ್ಥಿಸಿದ್ದಾರೆ.
ರಾಯಚೂರು (ಆ.23): ಇಡೀ ವಿಶ್ವವೇ ಕಾತುರದಿಂದ ಎದುರು ನೋಡುತ್ತಿರುವ ಚಂದ್ರಯಾನ-3 ಯಶಸ್ವಿಯಾಗಲೆಂದು ರಾಯಚೂರಿನಲ್ಲಿ ಪುಟಾಣಿ ಮಕ್ಕಳು ವಿಶೇಷ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಶಿವಲಿಂಗಕ್ಕೆ ಕ್ಷೀರಾಭಿಷೇಕ ಮಾಡುವ ಮೂಲಕ ಮಕ್ಕಳು ಪ್ರಾರ್ಥಿಸಿದ್ದಾರೆ. ನಗರದ NIG ಕಾಲೋನಿಯ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಸನ್ನಿಧಿ ಹಿರೇಮಠ ನೇತೃತ್ವದಲ್ಲಿ ಪುಟಾಣಿ ಮಕ್ಕಳೇ ಪೂಜೆ ನೆರವೇರಿಸಿದ್ದಾರೆ.
ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ ಶ್ಲೋಕಗಳನ್ನ ಹೇಳುತ್ತಾ ಇಸ್ರೋದ ಪ್ರಯತ್ನಕ್ಕೆ ಜಯ ಸಿಗಲಿ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಕ್ಕಳ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆಯ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸುವ ಈ ಮಹತ್ವದ ಕ್ಷಣವನ್ನ ಕಣ್ತುಂಬಿಕೊಳ್ಳಲು ಜನ ಕಾತುರವಾಗಿದ್ದಾರೆ.
ಚಂದ್ರಯಾನ-3 ಇಸ್ರೋ ತಂಡದಲ್ಲಿ ಬಾಳೆಹೊನ್ನೂರಿನ ಯುವತಿ: ರಂಭಾಪುರಿ ಶ್ರೀ ಶುಭಹಾರೈಕೆ
ಚಂದ್ರಯಾನ-3’ ಯಶಸ್ಸಿಗೆ ಪ್ರಾರ್ಥಿಸಿ ರಾಜ್ಯಾದ್ಯಂತ ಪೂಜೆ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ‘ಚಂದ್ರಯಾನ-3’ ಯಶಸ್ಸಿಗೆ ಪ್ರಾರ್ಥಿಸಿ ರಾಜ್ಯದ ಹಲವೆಡೆ ದೇವಾಲಯಗಳಲ್ಲಿ ಮಂಗಳವಾರ ಪೂಜೆ, ಯಾಗಗಳನ್ನು ನೆರವೇರಿಸಲಾಯಿತು. ಕೋಲಾರದಲ್ಲಿ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಕೋಲಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಚಂದ್ರಯಾನ ಯಶಸ್ವಿಯಾಗಲಿ ಎಂದು ಹಾರೈಸಿದರು. ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸಿ ‘ಸರ್ವಸಿದ್ಧಿ’ ಯಾಗ ನಡೆಸಲಾಯಿತು.
ವಿಜಯಪುರದ ಸರ್ವಜ್ಞ ವಿದ್ಯಾವಿಹಾರ ಪೀಠದ ಆವರಣದಲ್ಲಿ ಯುವ ಭಾರತ ಸಮಿತಿ ಹಾಗೂ ಸರ್ವಜ್ಞ ವಿಹಾರ ವಿದ್ಯಾಪೀಠದ ಸಂಯುಕ್ತಾಶ್ರಯದಲ್ಲಿ ‘ಸರ್ವಾರ್ಥ ಸಿದ್ದಿ’ ಯಾಗ ನೆರವೇರಿಸಿ, ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸಲಾಯಿತು. ಮಂಡ್ಯದ ವಿದ್ಯಾನಗರದಲ್ಲಿರುವ ವಿದ್ಯಾ ಗಣಪತಿ ದೇವಸ್ಥಾನದಲ್ಲಿ ಭಜರಂಗದಳದ ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿ, ಬುಧವಾರ ಚಂದ್ರನ ಮೇಲೆ ಕಾಲಿಡಲಿರುವ ವಿಕ್ರಂ ಲ್ಯಾಂಡರ್ ಯಾವುದೇ ತೊಂದರೆ ಇಲ್ಲದೆ ಇಳಿಯಲಿ. ಚಂದ್ರಯಾನ ಯಶಸ್ವಿಯಾಗಿ ದೇಶದ ಸಾಧನೆ ಮತ್ತಷ್ಟುಮುಗಿಲೆತ್ತರಕ್ಕೆರಲಿ ಎಂದು ಬೇಡಿಕೊಂಡರು.
ಪಕ್ಷದಲ್ಲಿನ ಪರಿಸ್ಥಿತಿ ಸ್ವಚ್ಛ ಮಾಡಿದರೆ ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ: ಎಸ್.ಟಿ.ಸೋಮಶೇಖರ್
ಇದೇ ವೇಳೆ, ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರು ಪೀಠದ ಸೋಮೇಶ್ವರ ಮಹಾಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ, ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸಿದರು. ಈ ಮಧ್ಯೆ, ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ನೇತೃತ್ವದಲ್ಲಿ ನಗರ ಬಿಜೆಪಿ ಘಟಕದ ಪದಾಧಿಕಾರಿಗಳು ಮಂಗಳವಾರ ಮಂತ್ರಾಲಯಕ್ಕೆ ತೆರಳಿದ್ದು, ಬುಧವಾರ ರಾಯರಿಗೆ ವಿಶೇಷ ಪೂಜೆ ಸಲ್ಲಿಸಿ, ಚಂದ್ರಯಾನದ ಯಶಸ್ಸಿಗೆ ಪ್ರಾರ್ಥಿಸಲಿದ್ದಾರೆ.