
ಬೆಂಗಳೂರು[ಜ.20]: ರಾಹುಲ್ ಗಾಂಧಿ ವ್ಯಕ್ತಿಯಲ್ಲ ಕಾಂಗ್ರೆಸ್‌ನ ಶಕ್ತಿಯಾಗಿದ್ದು, ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ಇತಿಹಾಸಕಾರ ರಾಮಚಂದ್ರ ಗುಹಾ ಅವರ ವಿರುದ್ಧ ಮಾಜಿ ಸಂಸದ ವಿ.ಎಸ್. ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸರಿಸಾಟಿಯಲ್ಲ ಎನ್ನುವ ರಾಮಚಂದ್ರ ಗುಹಾ ಅವರ ಹೇಳಿಕೆಯನ್ನು ಒಂದು ರೀತಿಯಲ್ಲಿ ಒಪ್ಪಬೇಕು. ನರೇಂದ್ರ ಮೋದಿಯ ರೀತಿಯಲ್ಲಿ ರಾಹುಲ್ ಗಾಂಧಿ ಲಕ್ಷಾಂತರ ರು. ಮೊತ್ತದ ಬಟ್ಟೆಧರಿಸುವುದಿಲ್ಲ. ನರೇಂದ್ರ ಮೋದಿ ಅವರ ರೀತಿ ಸುಳ್ಳನ್ನು ನುಡಿಯುವುದಿಲ್ಲ. ರಾಹುಲ್ ಗಾಂಧಿ ವ್ಯಕ್ತಿಯಲ್ಲ ಕಾಂಗ್ರೆಸ್‌ನ ಶಕ್ತಿ. ರಾಹುಲ್ ಗಾಂಧಿ ಕುಟುಂಬ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದೆ. ಅಂತಹ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದರು.
ಕೇರಳದಲ್ಲಿ ಮೋದಿ ಹೊಗಳಿದ ರಾಮಚಂದ್ರ ಗುಹಾ!
ಚರ್ಚೆಗೆ ಬರಲು ಅಮಿತ್ ಶಾಗೆ ಸವಾಲು:
ನರೇಂದ್ರ ಮೋದಿ ಅವರ ಬಳಿಕ ಪ್ರಧಾನಿಯಾಗಲು ಅಮಿತ್ ಶಾ ಕನಸು ಕಾಣುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ನೆರೆ ಪರಿಹಾರ, ಮಹದಾಯಿ ವಿಚಾರದ ಬಗ್ಗೆ ಭರವಸೆ ನೀಡದೆ ಪೌರತ್ವ ತಿದ್ದುಪಡಿ ಬಗ್ಗೆ ಮಾತನಾಡಿ ಹೋಗಿದ್ದಾರೆ. ರಾಜ್ಯಕ್ಕೆ ಬರಬೇಕಿರುವ ಅನುದಾನದ ಪಾಲುಗಳ ಬಗ್ಗೆಯೂ ಮಾತನಾಡಿಲ್ಲ. ಈ ಬಗ್ಗೆ ನೀವಾಗಲಿ, ನಿಮ್ಮ ಪ್ರಧಾನ ಮಂತ್ರಿಯಾಗಲಿ, ಪ್ರಹ್ಲಾದ್ ಜೋಶಿಯಾಗಲಿ ಚರ್ಚೆಗೆ ಬನ್ನಿ ಎಂದು ಉಗ್ರಪ್ಪ ಸವಾಲು ಹಾಕಿದರು.
ರಾಜ್ಯಕ್ಕೆ ಜಿಎಸ್‌ಟಿ ಪಾಲು 5,600 ಕೋಟಿ ರು., ಗ್ರಾಮೀಣಾಭಿವೃದ್ಧಿ ಇಲಾಖೆಗೆ ನರೇಗಾ ಯೋಜನೆಯಡಿ 2,850 ಕೋಟಿ ರು. ಸೇರಿ 70 ಸಾವಿರ ಕೋಟಿ ರು.ಗಳಷ್ಟುಬಾಕಿ ಹಣ ಬರಬೇಕು. ಆದರೆ, ಈ ಬಗ್ಗೆ ಯಾವುದೇ ಮಾತೂ ಆಡಿಲ್ಲ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ