ಮುಡಾ ಕೇಸ್: ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ಕೊಟ್ಟವರಿಗೆ ದಂಡ ವಿಧಿಸಿ; ವಕೀಲ ಅಭಿಷೇಕ್ ಮನು ಸಿಂಘ್ವಿ ಮನವಿ!

By Sathish Kumar KH  |  First Published Aug 29, 2024, 3:12 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಮುಡಾ ನಿವೇಶನ ಹಂಚಿಕೆ ಹಗರಣದ ದೂರು ಕಾಲ್ಪನಿಕ ಎಂದು ಅವರ ವಕೀಲರು ವಾದಿಸಿದ್ದಾರೆ. ನ್ಯಾಯಾಲಯವು ಪ್ರಾಸಿಕ್ಯೂಷನ್ ರದ್ದುಗೊಳಿಸುವಂತೆ ಮತ್ತು ದೂರುದಾರರಿಗೆ ದಂಡ ವಿಧಿಸುವಂತೆ ಮನವಿ ಮಾಡಿದ್ದಾರೆ.


ಬೆಂಗಳೂರು (ಆ.29): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂದು ರಾಜ್ಯಪಾಲರಿಗೆ ದೂರು ದಾಖಲಿಸಿರುವುದು ಕೇವಲ ಕಾಲ್ಪನಿಕವಾಗಿದೆ. ಇದನ್ನು ಆಧರಿಸಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ನ್ಯಾಯಾಲಯವು ಪ್ರಾಸಿಕ್ಯೂಷನ್‌ ರದ್ದತಿಗೊಳಿಸುವ ಜೊತೆಗೆ, ರಾಜ್ಯಪಾಲರಿಗೆ ದೂರು ಕೊಟ್ಟವರ ದೂರು ವಜಾಗೊಳಿಸುವ ಮೂಲಕ, ದೂರುದಾರರಿಗೂ ದಂಡ ವಿಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ.

ಗುರುವಾರ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದಲ್ಲಿ ವಿಚಾರಣೆ ಆರಂಭಿಸಿದ ನಂತರ, ನ್ಯಾಯಮೂರ್ತಿಗಳು ಎಲ್ಲರೂ ಆಕ್ಷೇಪಣೆ ಸಲ್ಲಿಸಿದ್ದೀರಾ ಎಂದು ಕೇಳಿದರು. ಆಗ ರಾಜ್ಯಪಾಲರ ಪರವಾಗಿ ವಾದ ಮಾಡಲು ಆಗಮಿಸಿದ್ದ ಹಿರಿಯ ವಕೀಲ ತುಷಾರ್ ಮೆಹ್ತಾ ಅವರು, ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಜಾರಿ ಹಾಗೂ ಅದನ್ನು ಮುಂದುವರೆಸಲು ನೀಡಿದ ನೋಟೀಸಿನ ಬಗ್ಗೆ ಲಿಖಿತ ವಿವರಣೆಯನ್ನು ಕೊಡುತ್ತೇವೆ ಎಂದು ಹೇಳಿದರು.

Tap to resize

Latest Videos

undefined

ಮುಡಾ ಕಂಟಕದಿಂದ ಪಾರಾಗಲು ಸ್ವಾಮೀಜಿಗಳ ಮೊರೆ ಹೋದ ಸಿಎಂ ಸಿದ್ದರಾಮಯ್ಯ!

ಸಿಎಂ ಸಿದ್ದರಾಮಯ್ಯ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು, ಕೆಲ ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಆಕ್ಷೇಪಣೆ ಗೆ ನಮ್ಮ ಪ್ರತಿಕ್ರಿಯೆ ನೀಡಬೇಕಿದೆ. ರಾಜ್ಯಪಾಲರು ಈಗಲೂ ಆಕ್ಷೇಪಣೆ ಸಲ್ಲಿಸಿಲ್ಲ . ರಾಜ್ಯಪಾಲರು ಯಾವುದೇ ಆಕ್ಷೇಪಣೆ ಸಲ್ಲಿಸುವುದಿಲ್ಲ. ಅವಶ್ಯವಿದ್ದರೆ ರಾಜ್ಯಪಾಲರು ತಮ್ಮ ಕಡತ ಸಲ್ಲಿಸಲು ಸಿದ್ದರಿದ್ದಾರೆ. ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸುವುದಿಲ್ಲ ಎಂದು ದಾಖಲಿಸಿ. ಕಾನೂನಿನ ಪ್ರಶ್ನೆ ಇರುವುದರಿಂದ ರಾಜ್ಯಪಾಲರು ಆಕ್ಷೇಪಣೆ ಸಲ್ಲಿಸುವುದಿಲ್ಲ. ಹೀಗಾಗಿ, ರಾಜ್ಯಪಾಲರ ಆಕ್ಷೇಪಣೆ ಗೆ ಕಾಯದೇ ವಿಚಾರಣೆಗೆ ಮನವಿ ಮಾಡಿದ್ದಾರೆ.

ಭ್ರಷ್ಟಾಚಾರ ಕಾಯಿದೆ 17A ಕುರಿತು ವಾದ ಮಂಡಿಸಿದ್ದೆನು. ಇದೊಂದೆ ಪಾಯಿಂಟ್ ಅಧರಿಸಿ ರಾಜ್ಯಪಾಲರ ಆದೇಶ ರದ್ದುಪಡಿಸಬೇಕು. ಪಿ.ಸಿ.ಆ್ಯಕ್ಟ್ 17A ಅಡಿ ಪೂರ್ವಾನುಮತಿ ಬೇಕು. ಆದರೆ, 17A ಮಾನದಂಡ ಪಾಲನೆಯಾಗದೇ ಇದ್ದರೂ ಅನುಮತಿ ನೀಡಲಾಗಿದೆ. ಪೊಲೀಸ್ ಅಧಿಕಾರಿ ಅನುಮತಿ ಪಡೆಯದೇ ತನಿಖೆ ಮಾಡುವಂತಿಲ್ಲ. ಸಾರ್ವಜನಿಕ ಸೇವಕನ ಶಿಫಾರಸ್ಸು , ನಿರ್ಧಾರಗಳ ಕುರಿತು ತನಿಖೆ ಇರಬೇಕು. ಈ ಎರಡನ್ನೂ ರಾಜ್ಯಪಾಲರು ಪಾಲನೆ ಮಾಡಿಲ್ಲ ಎಂದು ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯದ ಮುಂದೆ ವಾದ ಮಂಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಒಬ್ಬ ರೌಡಿಶೀಟರ್: ಎಂ ಲಕ್ಷ್ಮಣ್

ಇನ್ನು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಕೊಟ್ಟವರಿಗೆ ಸ್ವತಃ ರಾಜ್ಯಪಾಲರೇ ದಂಡ ವಿಧಿಸಬೇಕು. ಜೊತೆಗೆ, ನ್ಯಾಯಾಲಯದಿಂದಲೂ ಕೂಡ ದೂರುದಾರರ ವಿರುದ್ಧ ದಂಡ ವಿಧಿಸಿ ಪಾಠ ಕಲಿಸಬೇಕು. ಸಿಎಂ ವಿರುದ್ಧ ಕೇವಲ ಕಾಲ್ಪನಿಕ ದೂರು ನೀಡಿ ರಾಜ್ಯಪಾಲರು ಮತ್ತು ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಾರೆ. ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ನ ಆದೇಶಗಳಿವೆ. ಈ ಬಗ್ಗೆ ನಾನು ವಾದ ಮಂಡಿಸಲಿದ್ದೇನೆ. ಟಿ.ಜೆ ಅಬ್ರಾಹಂ ಸಲ್ಲಿಸಿರುವ ಆಕ್ಷೇಪಣೆ ಗಮನಿಸಬೇಕು. 17A ಅಡಿ ಪೂರ್ವಾನುಮತಿ ಬೇಕಿಲ್ಲವೆಂದು ಹೇಳಿದ್ದಾರೆ. ಇವೆಲ್ಲ ಕೇವಲ ಪ್ರಕ್ರಿಯೆಗಳಷ್ಟೆ ಎಂದು ಹೇಳಿದ್ದಾರೆ. ಹೀಗಿದ್ದಾಗ ರಾಜ್ಯಪಾಲರು ಅಬ್ರಹಾಂ ಗೆ ದಂಡ ವಿಧಿಸಿ ದೂರು ವಜಾಗೊಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮನವಿ ಮಾಡಿದರು.

click me!