ಮಾನಸಿಕ ಅಸ್ವಸ್ಥ ಯುವತಿ ರಕ್ಷಣೆ :ಶ್ರೀಸಾಯಿ ಸೇವಾಶ್ರಮಕ್ಕೆ ದಾಖಲಿಸಿದ ವಿಶು ಶೆಟ್ಟಿ

By Ravi JanekalFirst Published Sep 3, 2023, 8:46 PM IST
Highlights

ಬ್ರಹ್ಮಾವರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಬಡ ಕುಟುಂಬವೊಂದರ ಮಾನಸಿಕ ಅಸ್ವಸ್ಥ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ಮಂಜೇಶ್ವರದ ದೈಗೋಳಿ ಶ್ರೀಸಾಯಿ ಸೇವಾಶ್ರಮಕ್ಕೆ ಶನಿವಾರ ದಾಖಲಿಸಿದ್ದಾರೆ.

ಉಡುಪಿ (ಸೆ.3): ಬ್ರಹ್ಮಾವರ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಬಡ ಕುಟುಂಬವೊಂದರ ಮಾನಸಿಕ ಅಸ್ವಸ್ಥ ಯುವತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ರಕ್ಷಿಸಿ, ಮಂಜೇಶ್ವರದ ದೈಗೋಳಿ ಶ್ರೀಸಾಯಿ ಸೇವಾಶ್ರಮಕ್ಕೆ ಶನಿವಾರ ದಾಖಲಿಸಿದ್ದಾರೆ.

ಯುವತಿ ಶಾರದಾ ಹೊಳ್ಳ (26, ಹೆಸರು ಬದಲಾಯಿಸಲಾಗಿದೆ) ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿ ಪರಿಸರದ ಕಾಡು ಪ್ರದೇಶಗಳು, ಸಾರ್ವಜನಿಕ ಸ್ಥಳದಲ್ಲಿ ಸುತ್ತಾಡುವುದು, ಕಿರಚಾಡುವುದು ಮಾಡುತ್ತಿದ್ದರು. ಈಕೆಯ ಪರಿಸ್ಥಿತಿ ಕಂಡು ತಂದೆ ಮೌನಕ್ಕೆ ಶರಣಾದರೆ, ತಾಯಿ ಅನಾರೋಗ್ಯಕ್ಕೀಡಾಗಿದ್ದರು. ಹೀಗಾಗಿ ಕಳೆದ 8 ವರ್ಷಗಳಿಂದ ಸೂಕ್ತಚಿಕಿತ್ಸೆಯಿಲ್ಲದೆ ಯುವತಿಯ ಮಾನಸಿಕ ಸ್ಥಿತಿ ತೀರಾ ಹದೆಗೆಟ್ಟಿತ್ತು. .

 

Udupi : ಮಾನಸಿಕ ಅಸ್ವಸ್ಥತೆಗೆ ಗುರಿಯಾಗಿ 2 ವರ್ಷಗಳ ಬಳಿಕ ಮರಳಿ ಗೂಡು ಸೇರಿದ ವ್ಯಕ್ತಿ

ಈ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದ ವಿಶು ಶೆಟ್ಟಿ ಅವರು ಉಡುಪಿಯ ಸಖಿ ಸೆಂಟರಿನ ಸಿಬ್ಬಂದಿಗಳ ಜೊತೆಗೆ ಯುವತಿಯ ಮನೆಗೆ ತೆರಳಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಯುವತಿ ಸಾಕಷ್ಟು ಪ್ರತಿರೋಧ ತೋರಿದ ಘಟನೆ ನಡೆಯಿತು. 

ರಕ್ಷಣಾ ಕಾರ್ಯದಲ್ಲಿ ಶುಶ್ರೂಶಕಿ ತನುಜಾ ಮಲ್ಪೆ, ಬ್ರಹ್ಮಾವರ ಪೊಲೀಸರು, ಪಂಚಾಯಿತಿ ಸಿಬ್ಬಂದಿ ಆಶಾ, ಸಾಮಾಜಿಕ ಕಾರ್ಯಕರ್ತ ರಾಮದಾಸ್ ಪಾಲನ್ ಉದ್ಯಾವರ ಸಹಕರಿಸಿದರು.ವಿಶು ಶೆಟ್ಟಿ ಅವರ ವಿನಂತಿ ಮೇರೆಗೆ ಮಂಜೇಶ್ವರದ ದೈಗೋಳಿ ಶ್ರೀ ಸಾಯಿ ಸೇವಾಶ್ರಮದ ಮುಖ್ಯಸ್ಥರಾದ ಡಾ.ಉದಯ ಕುಮಾರ್ ದಂಪತಿ ಯುವತಿಗೆ ಚಿಕಿತ್ಸೆ, ಕೌನ್ಸಿಲಿಂಗ್ ಹಾಗೂ ಆಶ್ರಯ ನೀಡಲು ಒಪ್ಪಿದ ಹಿನ್ನಲೆಯಲ್ಲಿ ವಿಶು ಶೆಟ್ಟಿ ಅವರು ಇಲಾಖೆಯ ಸಹಕಾರದಿಂದ ಯುವತಿಯನ್ನು ಶನಿವಾರ ಆಶ್ರಮಕ್ಕೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

2 ತಿಂಗಳ ಬಳಿಕ ಕುಟುಂಬ ಸೇರಿದ ಮಾನಸಿಕ ಅಸ್ವಸ್ಥ ಯುವಕ: ವಿಶು ಶೆಟ್ಟಿ ಮಾನವೀಯ ಸ್ಪಂದನೆಗೆ ಪ್ರಶಂಸೆ

ಮಾನಸಿಕ ಅಸ್ವಸ್ಥ ಯುವತಿಯರು ಸಾರ್ವಜನಿಕ ಸ್ಥಳದಲ್ಲಿ ಓಡಾಡುವುದನ್ನು ಕಂಡರೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಕೂಡಲೇ ಈ ಬಗ್ಗೆ ಮಾಹಿತಿಯನ್ನು ಇಲಾಖೆಗಳಿಗೆ ಅಥವಾ ಸಮಾಜ ಸೇವಕರಿಗೆ ನೀಡಿ, ಸಂಭಾವ್ಯ ಅಪಾಯದಿಂದ ಯುವತಿಯನ್ನು ಪಾರು ಮಾಡುವ ಕಾರ್ಯಮಾಡಬೇಕು.  ಇಂತಹ ಮಾನಸಿಕ ರೋಗಕ್ಕೆ ತುತ್ತಾಗಿ ಬೀದಿ ಪಾಲಾದ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆದ ಘಟನೆಗಳು ನಡೆದಿವೆ. ಹೀಗಾಗಿ ಇಂತಹ ಪ್ರಕರಣಗಳು ಕಂಡು ಬಂದಾಗ ಕೇವಲ ಸರಕಾರಿ ಇಲಾಖೆಗಳನ್ನೇ ಜವಾಬ್ದಾರಿಯನ್ನಾಗಿಸದೆ ಮಹಿಳಾ ಸಂಘಟನೆಗಳು, ಸಾರ್ವಜನಿಕರು ರಕ್ಷಣೆಗೆ ಮುಂದಾಗಬೇಕು ಎಂದು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.

click me!