ರಕ್ಷಣಾ ಕಾರ್ಯಾಚರಣೆ ವೇಳೆ ಮೀನಿನ ವಿಷಾನಿಲದಿಂದ ಆಪತ್ಪಾಂದವ ಈಶ್ವರ್ ಮಲ್ಪೆ ಅಸ್ವಸ್ಥ!

By Ravi JanekalFirst Published Sep 3, 2023, 8:04 PM IST
Highlights

ಕಳೆದೆರಡು ದಿನಗಳಿಂದ ಮಲ್ಪೆ ಬಂದರಿನಲ್ಲಿ ಬೋಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು, ಬೋಟ್ ನ ಸ್ಟೋರೇಜ್ ನಲ್ಲಿರುವ ಮೀನು ಖಾಲಿ ಮಾಡುತ್ತಿರುವಾಗ ಮೀನಿನ ವಿಷಾನಿಲದಿಂದಾಗಿ ಉಸಿರಾಟದ ಸಮಸ್ಯೆಯಾಗಿ ಪ್ರಜ್ಞೆ ತಪ್ಪುವ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿವೆ.

ಉಡುಪಿ (ಸೆ.3) :  ಕಳೆದೆರಡು ದಿನಗಳಿಂದ ಮಲ್ಪೆ ಬಂದರಿನಲ್ಲಿ ಬೋಟ್ ನಲ್ಲಿ ಕೆಲಸ ಮಾಡುವ ಕಾರ್ಮಿಕರು, ಬೋಟ್ ನ ಸ್ಟೋರೇಜ್ ನಲ್ಲಿರುವ ಮೀನು ಖಾಲಿ ಮಾಡುತ್ತಿರುವಾಗ ಮೀನಿನ ವಿಷಾನಿಲದಿಂದಾಗಿ ಉಸಿರಾಟದ ಸಮಸ್ಯೆಯಾಗಿ ಪ್ರಜ್ಞೆ ತಪ್ಪುವ ಘಟನೆಗಳು ಮತ್ತೆ ಮತ್ತೆ ಸಂಭವಿಸುತ್ತಿವೆ.

ಇಂತಹ ಘಟನೆಯಿಂದಾಗಿ ಎರಡು ದಿನದ ಅಂತರದಲ್ಲಿ ನಾಲ್ಕು ಜನರು ಸಂಕಷ್ಟಕ್ಕೆಡಗಿದ್ದರು . ಅವರ ಜೀವವನ್ನು ಉಳಿಸುವಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆ(eshwar malpe) ಯವರು ಯಶಸ್ವಿಯಾದರು. ಸಕಾಲದಲ್ಲಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದರು.

ಇವತ್ತು ಕೂಡ ಇಂತಹದೇ ಘಟನೆ  ಮಲ್ಪೆ ಬಂದರಿನಲ್ಲಿ ನಡೆದಿದೆ. ಪ್ರಜ್ಞೆಹೀನನಾಗಿ ಬಿದ್ದಿದ್ದ ಯುವಕನನ್ನು ಮೇಲಕೆತ್ತಲು ಈಶ್ವರ್ ಮಲ್ಪೆ ಬೋಟ್ ನ ಸ್ಟೋರೇಜ್ ಗೆ ಇಳಿದಿದ್ದು ,ವಿಷಾನಿಲದಿಂದಾಗಿ ಈಶ್ವರ್ ಮಲ್ಪೆಯವರೇ ಉಸಿರಾಟದ ಸಮಸ್ಯೆಯಾಗಿ ಅಸ್ವಸ್ಥಗೊಂಡು ಪ್ರಜ್ನೆತಪ್ಪಿ ಬಿದ್ದು ಕೆಲಕಾಲ ಬೋಟ್ ನಲ್ಲಿ ಸಾವರಿಸಿಕೊಂಡು ಕಾರ್ಯಾಚರಣೆಯನ್ನು ಮುಂದುವರಿಸಬೇಕಾಯ್ತು.

ಮಲ್ಪೆ ಬಂದರು: ನೀರಿನ ಮಧ್ಯೆ ವರ್ಷದಿಂದ ಸಿಲುಕಿಕೊಂಡಿದ್ದ ನಾಯಿಗಳ ರಕ್ಷಣೆ!

ಒಬ್ಬರ ಜೀವವನ್ನು ರಕ್ಷಿಸಲು ಹೋಗಿ , ತನ್ನ ಜೀವಕ್ಕೆ ತೊಂದರೆಯಾದರೂ ಕೂಡ ಹಿಂದೇಟು ಹಾಕದೆ ಆ ಯುವಕನನ್ನು ಮೇಲಕ್ಕೆತ್ತಿ ತನ್ನ ಆಂಬುಲೆನ್ಸ್ ಮೂಲಕ ಮಣಿಪಾಲ ಆಸ್ಪತ್ರೆಗೆ ಸಾಗಿಸುವಲ್ಲಿ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಯಶಸ್ವಿಯಾದರು. 

ಈಶ್ವರ್ ಮಲ್ಪೆಯವರು ಕೂಡ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಈಗ ಚೇತರಿಸಿಕೊಂಡಿದ್ದಾರೆ. ಮಲ್ಪೆ ಬಂದರಿನಲ್ಲಿ ಮತ್ತೆ ಇಂತಹ ಅನಾಹುತಗಳು ಸಂಭವಿಸುವುದಕ್ಕಿಂತ ಮುನ್ನ , ದಯವಿಟ್ಟು ಕಾರ್ಮಿಕರ ಸುರಕ್ಷತೆಗಾಗಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವುದರ ಮೂಲಕ ಜನರ ಜೀವಕ್ಕೆ ಅಪಾಯವಾಗದಂತೆ ಸಂಬಂಧಪಟ್ಟವರು ಗಮನಹರಿಸಿ  ಎಂದು ಈಶ್ವರ ಮಲ್ಪೆ ಕೋರಿದ್ದಾರೆ.

ಸರ್ಕಾರದ ಸೌಲಭ್ಯ ಪಡೆಯಲು ಕಾರ್ಮಿಕರು ಇ-ಶ್ರಮ್‌ನಲ್ಲಿ ಹೆಸರು ನೋಂದಾಯಿಸಿ: ಉಡುಪಿ ಡಿಸಿ ವಿದ್ಯಾಕುಮಾರಿ

ಒಮ್ಮೆ ಜೀವವನ್ನು ಕಳೆದುಕೊಂಡರೆ ಆ ಜೀವವನ್ನು ಯಾರಿಂದಲೂ ಹಿಂದಿರುಗಿಸಲು ಸಾಧ್ಯವಿಲ್ಲ. ಹಾಗಾಗಿ ಸೂಕ್ತ ಭದ್ರತಾ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದ್ದಾರೆ.

click me!