ಮುಡಾದಿಂದ ಅಕ್ರಮವಾಗಿ 14 ಸೈಟ್ ಪಡೆದ ಆರೋಪದಲ್ಲಿ ಸಿಎಂ ಸಿದ್ಧರಾಮಯ್ಯ ವಿರುದ್ಧ ದಾಖಲಾದ ಮೂರು ದೂರಿಗೆ ಸಂಬಂಧಪಟ್ಟಂತೆ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ಕೊಟ್ಟಿದ್ದಾರೆ. ಇನ್ನೊಂದೆಡೆ ಸಿಎಂ ಸಿದ್ಧರಾಮಯ್ಯ ತಮ್ಮ ಮುಂದಿನ ದಾರಿ ಹುಡುಕಾಟದಲ್ಲಿದ್ದಾರೆ.
ಬೆಂಗಳೂರು (ಆ.17): ತಮ್ಮ ಸಂಪೂರ್ಣ ರಾಜಕೀಯ ಜೀವನದಲ್ಲಿ ಕಳಂಕರಹಿತವಾಗಿಯೇ ಇದ್ದ ಸಿಎಂ ಸಿದ್ಧರಾಮಯ್ಯ ಅವರ ವಿರುದ್ಧ ಮುಡಾ ಕಪ್ಪು ಚುಕ್ಕೆ ಇನ್ನಷ್ಟು ಢಾಳಾಗಿ ಕಾಣಿಸಲು ಆರಂಭಿಸಿದೆ. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಶನಿವಾರ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ತಮ್ಮ ಅಧಿಸೂಚನೆಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿಕೊಟ್ಟಿದ್ದಾರೆ. ಅದರೊಂದಿಗೆ ಸಿದ್ದರಾಮಯ್ಯ ವಿರುದ್ಧ ಈ ಕೇಸ್‌ನಲ್ಲಿ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಂ, ಮೈಸೂರು ಮೂಲದ ಸ್ನೇಹಮಯಿ ಕೃಷ್ಣ ಹಾಗೂ ಪ್ರದೀಪ್ ಅವರಿಗೆ ರಾಜಭವನಕ್ಕೆ ಬರಲು ತಿಳಿಸಲಾಗಿದೆ. ಸಂಜೆಯ ವೇಳೆಗೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ದಾಖಲೆಯನ್ನು ಇವರಿಗೆ ಹಸ್ತಾಂತರ ಮಾಡಲಿದ್ದಾರೆ. ಇನ್ನೊಂದೆಡೆ ಸಿಎಂಗೆ ಕೂಡ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಸೂಚನೆ ಗುರುವಾರ ದೊರೆತಿತ್ತು. ಆಗಸ್ಟ್ 15 ರಂದು ರಾಜಭವನಕ್ಕೆ ಚಹಾಕೂಟಕ್ಕೆ ತೆರಳಿದ್ದ ಸಿಎಂಗೆ ಈ ಸೂಚನೆ ಸಿಕ್ಕಿತ್ತು. ಅದರಂತೆಯೇ ಅವರು, ಶುಕ್ರವಾರ ರಾತ್ರಿಯೇ ತಮ್ಮ ಕಾನೂನು ಸಲಹೆಗಾರ ಪೊನ್ನಣ್ಣ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು.
ಸಿಎಂ ವಿರುದ್ಧ ಮೂಡಾ ಸೈಟ್ ಹಂಚಿಕೆ ಹಗರಣದಲ್ಲಿ ಪ್ರಾಸಿಕ್ಯೂಷನ್ ಅನುಮತಿ ಸಿಕ್ಕ ನಂತರ ಮುಂದೇನು ಅನ್ನೋ ಪ್ರಶ್ನೆ ಎದುರಾಗಿದೆ. ಪೂರ್ವಾನುಮತಿ ದಾಖಲೆಯನ್ನು ಮೊದಲಿಗೆ ದೂರುದಾರರು ಪಡೆದುಕೊಳ್ಳಲಿದ್ದಾರೆ. ಆ ಬಳಿಕ ಕೋರ್ಟ್ ಗೆ ಪೂರ್ವಾನುಮತಿ ದಾಖಲೆಯನ್ನು ದೂರುದಾರರು ಪೊಲೀಸರಿಗೆ ನೀಡಲಿದ್ದಾಋಏ. ಪೂರ್ವಾನುಮತಿ ಕೋರ್ಟ್ ಸಲ್ಲಿಕೆಯಾದಲ್ಲಿ ತನಿಖೆಗೆ ಆದೇಶ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಕೋರ್ಟ್‌ನಲ್ಲಿ ಆ.20ಕ್ಕೆ ಸ್ನೇಹಮಯಿ ಕೃಷ್ಣ ಅರ್ಜಿಯ ಆದೇಶ ಕಾಯ್ದಿರಿಸಲಾಗಿದೆ. ಸೋಮವಾರವೇ ಪೂರ್ವಾನುಮತಿ ಕೋರ್ಟ್ ಗೆ ಸಲ್ಲಿಸಿದರೆ ಮಂಗಳವಾರ ಆದೇಶ ಹೊರಬೀಳಲಿದೆ.. ಟಿ.ಜೆ.ಅಬ್ರಹಾಂ ಅರ್ಜಿ ವಿಚಾರಣೆ ಆ.21 ಕ್ಕೆ ಮುಂದೂಡಿಕೆ ಆಗಿದೆ. ದೂರಿನ ಅಂಶಗಳನ್ನ ಕೋರ್ಟ್‌ಗೆ ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಪ್ರಾಸಿಕ್ಯೂಷನ್ ಅನುಮತಿ ಇಲ್ಲದೆ ಆದೇಶ ನೀಡುವುದು ಹೇಗೆ ಎನ್ನುವ ಜಿಜ್ಞಾಸೆ ಕೂಡ ಕೋರ್ಟ್‌ನ ಮುಂದಿತ್ತು. ಪೂರ್ವಾನುಮತಿ ಸಿಕ್ಕಲ್ಲಿ ತನಿಖೆಗೆ ಆದೇಶ ಸಿಗುವ ಸಾಧ್ಯತೆಯೇ ಹೆಚ್ಚಿದ್ದವು. ತನಿಖೆಗೆ ಆದೇಶ ಸಿಕ್ಕಲ್ಲಿ ತಕ್ಷಣ ಸಿದ್ದರಾಮಯ್ಯ ವಿರುದ್ದ ಎಫ್‌ಐಆರ್ ದಾಖಲಾಗಿದೆ.
Breaking: ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಅನುಮತಿ
ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿಎಂ ಹೈಕೋರ್ಟ್ ಮೆಟ್ಟಿಲನ್ನೂ ಏರಬಹುದು. ಪ್ರಾಸಿಕ್ಯೂಷನ್ ನೀಡಿರುವುದನ್ನ ಪ್ರಶ್ನಿಸಲು ಸಿಎಂ ಕೂಡ ಸಿದ್ಧತೆ ನಡೆಸಿದ್ದಾರೆ. ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಕುರಿತಾಗಿ ಈಗಾಗಲೇ ಸಿಎಂ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಸೋಮವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಇಂದು ಗೌವರ್ನರ್ ರಾಜ್ಯಕ್ಕೆ: ಸಿಎಂ ಪ್ರಾಸಿಕ್ಯೂಷನ್ ಬಗ್ಗೆ ಹೆಚ್ಚಿದ ಕುತೂಹಲ