ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ! ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಗ್ರೀನ್ ಸಿಗ್ನಲ್!

Published : Aug 16, 2024, 10:36 PM ISTUpdated : Aug 16, 2024, 10:51 PM IST
ಸಿಲಿಕಾನ್ ಸಿಟಿ ಜನರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ ಸರ್ಕಾರ! ನಮ್ಮ ಮೆಟ್ರೋ 3ನೇ ಹಂತದ ಕಾಮಗಾರಿಗೆ ಗ್ರೀನ್ ಸಿಗ್ನಲ್!

ಸಾರಾಂಶ

ನಮ್ಮ ಮೆಟ್ರೋ ಮೂರನೇ ಹಂತದ ರೈಲು ಯೋಜನೆಯ 2 ಎಲಿವೇಟೆಡ್ ಕಾರಿಡಾರ್‌ಗಳಿಗೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ 

ಬೆಂಗಳೂರು (ಆ.16): ನಮ್ಮ ಮೆಟ್ರೋ ಮೂರನೇ ಹಂತದ ರೈಲು ಯೋಜನೆಯ 2 ಎಲಿವೇಟೆಡ್ ಕಾರಿಡಾರ್‌ಗಳಿಗೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ 

ಪ್ರಧಾನಿ ಮೋದಿ ನೇತೃತ್ವದಲ್ಲಿಂದು ನಡೆದ ಸಭೆಯಲ್ಲಿ ಬೆಂಗಳೂರು ನಮ್ಮ ಮೆಟ್ರೋ ಮೂರನೇ ಹಂತದ ಕಾರಿಡಾರ್‌ಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.  ಯೋಜನೆಯ ಹಂತು-3 ಹಾಗೂ  ಒಟ್ಟು 44.65 ಕಿಮೀ ಉದ್ದದ ಎರಡು ಕಾರಿಡಾರ್ ಗಳ ನಿರ್ಮಾಣವಾಗಲಿದೆ ಈ ಯೋಜನೆಗೆ ಅಂದಾಜು 15,611 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಹೇಳಲಾಗಿದೆ.

ನಮ್ಮ ಮೆಟ್ರೋದಲ್ಲಿ ದಾಖಲೆಯ ಪ್ರಯಾಣಿಕರ ಸಂಚಾರ; ಒಂದೇ ದಿನ 9.17 ಲಕ್ಷ ಜನ ಪ್ರಯಾಣ!

ಈ ಹಿಂದೆ ಮೂರನೇ ಹಂತದ ಕಾಮಗಾರಿ ಆರಂಭಕ್ಕೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಬಿಎಂಆರ್‌ಸಿಎಲ್. ಇದೀಗ ಕ್ಯಾಬಿನೆಟ್ ಚರ್ಚೆ ಬಳಿಕ ಗ್ರೀನ್ ಸಿಗ್ನಲ್ ಸಿಕ್ಕಿದ್ದು. ಒಂದು ವೇಳೆ ಈ ಕಾಮಗಾರಿ ಪೂರ್ಣಗೊಂಡರೆ ಬೆಂಗಳೂರಲ್ಲಿ 220.20ಕಿಮೀ ಆಕ್ಟಿವ್ ಮೆಟ್ರೋ ಮಾರ್ಗ ಇರಲಿದೆ. ಈ ಕಾಮಗಾರಿ 2029ರಿಂದ ಆರಂಭವಾಗಲಿದೆ.  ಕಾರಿಡಾರ್-1: ಜೆಪಿನಗರ ನಾಲ್ಕನೆ ಹಂತದಿಂದ ಔಟರ್‌ ರಿಂಗ್ ರೋಡ್ ವರೆಗಿನ ಕಾರಿಡಾರ್ ಆಗಿದ್ದು, 21 ಸ್ಟೇಷನ್ ಒಳಗೊಂಡ 32.15 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಕಾರಿಡಾರ್- 2: ಹೊಸಹಳ್ಳಿ ಟು ಕಡಬಗೆರೆವರೆಗೆ 9 ಸ್ಟೇಷನ್ ಒಳಗೊಂಡ 12.50 ಕಿ.ಮೀ ಮಾರ್ಗಕ್ಕೆ ಒಪ್ಪಿಗೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೀಪಾವಳಿ ಸಂಭ್ರಮದ ನಡುವೆ ಎರಡೆರಡು ದುರಂತ! ಬೆಂಗಳೂರಲ್ಲಿ ಅಗ್ನಿ ಅವಘಡ, ಧಾರವಾಡದಲ್ಲಿ ಹಬ್ಬದ ಸಾಮಾನು ತರಲು ಹೋದ ಇಬ್ಬರು ಸಹೋದರರು ದುರ್ಮರಣ!
Karnataka News Live: ಟನಲ್ ಮಾಡಿದ್ರೂ ಆಗಲ್ಲ, ಎಲಿವೇಟೆಡ್‌ ಮಾಡಿದರೂ ಅಪಾದನೆ - ಡಿಕೆ ಶಿವಕುಮಾರ್ ಆಕ್ರೋಶ!