
ಬೆಂಗಳೂರು(ಫೆ.24): ಇತ್ತೀಚೆಗಷ್ಟೇ ದೈಹಿಕವಾಗಿ ಫಿಟ್‌ನೆಸ್ ಇರಬೇಕು ಎಂದು ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್‌ಆರ್‌ಪಿ) ಪೊಲೀಸರಿಗೆ ಚುರುಕು ಮುಟ್ಟಿಸಿದ್ದ ಬೆನ್ನಲ್ಲೇ ಕೇವಲ ಮೂರು ವರ್ಷ ನಾಲ್ಕು ತಿಂಗಳು ಸೇವಾವಧಿ ಪೂರ್ಣಗೊಳಿಸಿದವರಿಗೆ ಬಡ್ತಿ ನೀಡಲಾಗಿದೆ.
ಈ ಮೂಲಕ ಪೊಲೀಸ್ ಇಲಾಖೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕಾನ್‌ಸ್ಟೆಬಲ್ ಆಗಿ ಕೇವಲ ಮೂರು ವರ್ಷ ನಾಲ್ಕು ತಿಂಗಳು ಸೇವಾವಧಿ ಪೂರ್ಣಗೊಳಿಸಿದ ಮಂಜುಳಾ ಹುನಗುಂಡಿ ಸೇರಿದಂತೆ ಕೆಎಸ್‌ಆರ್‌ಪಿ 72 ಮಹಿಳಾ ಕಾನ್ ಸ್ಟೇಬಲ್‌ಗಳಿಗೆ, ಹೆಡ್ ಕಾನ್‌ಸ್ಟೆಬಲ್ ಆಗಿ ಪದೋನ್ನತಿ ಭಾಗ್ಯ ದೊರೆತಿದೆ.
ಕೊರೋನಾ ಗೆದ್ದ ಬಳಿಕವೂ ಮಾನವೀಯತೆ ಮೆರೆದ KSRP ಪೊಲೀಸ್ರು
ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಎಸ್‌ಆರ್‌ಪಿ ಎಡಿಜಿಪಿ ಅಲೋಕ್ ಕುಮಾರ್, ಮೊದಲು ಬಡ್ತಿ ನೀಡಲು ಐದಾರು ವರ್ಷ ಆಗುತ್ತಿತ್ತು. 2020ರ ಜೂನ್ನಲ್ಲಿ ಆದ ಬಡ್ತಿ ಕುರಿತ ತಿದ್ದುಪಡಿ ಅನ್ವಯ ಮುಂಬಡ್ತಿ ನೀಡಲಾಗಿದೆ. ಕಾನ್ ಸ್ಟೇಬಲ್ ಮಂಜುಳಾ ಹುನಗುಂಡಿ ಅವರು ಕೇವಲ ಮೂರು ವರ್ಷ ನಾಲ್ಕು ತಿಂಗಳು ಸಲ್ಲಿಸಿದ್ದ ಸೇವೆಯನ್ನು ಪರಿಗಣಿಸಿ ಬಡ್ತಿ ನೀಡಲಾಗಿದೆ. ಈ ಮೂಲಕ 23 ವರ್ಷ ವಯಸ್ಸಿಗೆ ಹೆಡ್ ಕಾನ್‌ಸ್ಟೇಬಲ್‌ಗಳಾಗಿದ್ದಾರೆ. ಅತೀ ಕಡಿಮೆ ಸೇವಾವಧಿಯಲ್ಲಿ ಬಡ್ತಿ ನೀಡಿರುವುದು ಪೊಲೀಸ್ ಇಲಾಖೆ ಇತಿಹಾಸದಲ್ಲೇ ಮೊದಲು ಎಂದರು.
72 ಮಂದಿ ಮಹಿಳಾ ಸಿಬ್ಬಂದಿಗೆ ಮುಂಬಡ್ತಿ ನೀಡಲಾಗಿದೆ. ಈ ಪೈಕಿ ಮೂರು ವರ್ಷ ಸೇವೆ ಪೂರೈಸಿದ 11, ನಾಲ್ಕು ವರ್ಷ ಸೇವೆ ಪೂರೈಸಿದ 27 ಮಂದಿ ಹಾಗೂ ಐದು ವರ್ಷ ಸೇವೆ ಪೂರೈಸಿದ 34 ಮಂದಿಗೆ ಮುಂಬಡ್ತಿ ನೀಡಲಾಗಿದೆ. ಇನ್ನು ಆರು ವರ್ಷ ಪೂರೈಸಿದ ಸಿಬ್ಬಂದಿಗೆ 2014ರ ಬ್ಯಾಚ್‌ನ 125 ಪುರುಷ ಸಿಬ್ಬಂದಿಗೂ ಕಾನ್ ಸ್ಟೇಬಲ್ ಹುದ್ದೆಯಿಂದ ಹೆಡ್ ಕಾನ್‌ಸ್ಟೇಬಲ್ ಹುದ್ದೆಗೆ ಬಡ್ತಿ ನೀಡಲಾಗಿದೆ. ನಿಷ್ಠೆಯಿಂದ ಉತ್ತಮ ಕೆಲಸ ಮಾಡುವವರಿಗೆ ಬಡ್ತಿ ನೀಡುವ ಮೂಲಕ ಇನ್ನಷ್ಟುಕೆಲಸ ಮಾಡಲು ಉತ್ತೇಜಿಸಲಾಗುತ್ತಿದೆ. ಒಂದು ವೇಳೆ ಅನುಭವ ಇದ್ದು, ಉತ್ತಮವಾಗಿ ಕೆಲಸ ಮಾಡದಿದ್ದವರಿಗೆ ಬಡ್ತಿ ನೀಡಲಾಗುವುದಿಲ್ಲ. ಈ ಬಗ್ಗೆಯೂ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಡಿಐಜಿಪಿ ವಿಕಾಸ್ ಕುಮಾರ್ ವಿಕಾಸ್, ಕೆಎಸ್‌ಆರ್‌ಪಿ 3ನೇ ಕಮಾಂಡೆಂಟ್ ರಾಮಕೃಷ್ಣಪ್ರಸಾದ್ ಹಾಗೂ ಇತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ