ಇಸ್ರೋ ರಾಕೆಟ್‌ ಪೂಜೆ ಖಂಡಿಸಿದ ಪ್ರಗತಿಪರರಿಗೆ ಚಂದ್ರಯಾನವೇ ಗೊತ್ತಿಲ್ಲ! ಮಂಗಳಯಾನವೆಂದು ಖಂಡನೆ

By Sathish Kumar KH  |  First Published Jul 14, 2023, 8:16 PM IST

ಇಸ್ರೋ ಸಂಸ್ಥೆಯ ಚಂದ್ರಯಾನ-3 ಉಡ್ಡಯನ ರಾಕೆಟ್‌ ಪೂಜೆಯನ್ನು ಖಂಡಿಸಿದ ಕನ್ನಡದ ಪ್ರಗತಿಪರರಿಗೆ ಚಂದ್ರಯಾನ ಅಥವಾ ಮಂಗಳಯಾನ ಎಂಬುದೇ ಗೊತ್ತಿಲ್ಲ. 


ಬೆಂಗಳೂರು (ಜು.14): ಇಡೀ ಜಗತ್ತಿನಲ್ಲಿ ಇಸ್ರೋ ಸಂಸ್ಥೆಯ ಚಂದ್ರಯಾನದ ಬಗ್ಗೆ ಭಾರಿ ಕುತೂಹಲ ಉಂಟಾಗಿದೆ. ಆದರೆ, ಇಸ್ರೋ ಸಂಸ್ಥೆಯು ಚಂದ್ರಯಾನ-3 ನೌಕೆ ಉಡ್ಡಯನಕ್ಕೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿತ್ತು. ತಾಂತ್ರಿಕ ನೈಪುಣ್ಯದ ಇಸ್ರೋ ನೌಕೆಗೆ ಪೂಜೆ ಮಾಡಿಸಿದ್ದನ್ನು ಖಂಡಿಸುವ ಭರದಲ್ಲಿ ಪ್ರಗತಿಪರರು ಮಂಗಳಯಾನ ಎಂದು ಬರೆದುಕೊಂಡು ಖಂಡನೆ ಮಾಡಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೋ ಬಗ್ಗೆ ಖಂಡನೆ ಮಾಡಿದ ಪತ್ರ ವೈರಲ್‌ ಆಗಿದ್ದು, ಪ್ರಗತಿಪರರಿಗೆ ಇಸ್ರೋ ಉಡಾವಣೆ ಮಾಡಿದ್ದು ಚಂದ್ರಯಾನವೋ ಅಥವಾ ಮಂಗಳಯಾನ ಎಂಬುದೇ ಗೊತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಗತಿಪರರ ಪತ್ರದ ವಿವರ ಇಲ್ಲಿದೆ ನೋಡಿ..

Tap to resize

Latest Videos

ಇಸ್ರೋ ಸಂಸ್ಥೆಯ ನಡೆ ಖಂಡನೀಯ
ಮಂಗಳಯಾನ'ಕ್ಕೆ ಇಸ್ರೋ ಸಂಸ್ಥೆ ಸಜ್ಜಾಗಿರುವುದು ಅಭಿನಂದನೀಯ. ಇದೇ ಸಂದರ್ಭದಲ್ಲಿ ಮಂಗಳಯಾನದ ಯಶಸ್ವಿಗಾಗಿ ಇಸ್ರೋದ ಕೆಲವು ವಿಜ್ಞಾನಿಗಳು ಮಂಗಳಯಾನದ ಮಾದರಿಯನ್ನು ತಿರುಪತಿಗೆ ಕೊಂಡೊಯ್ದು ಪೂಜೆ ನೆರವೇರಿಸಿರುವುದು ತಿಳಿದುಬಂದಿದೆ. ಪ್ರಪಂಚದಲ್ಲೇ ಖ್ಯಾತಿ ಹೊಂದಿರುವ ಇಸ್ರೋದಂತಹ ಸರ್ಕಾರಿ ಸ್ವಾಮ್ಯದ ಸಂಸ್ಥೆಯ ಈ ರೀತಿಯ ನಡೆ ಸಾಮಾನ್ಯ ಜನರನ್ನು ದಿಕ್ಕುತಪ್ಪಿಸುವಂತಿದೆ.

ಭಾರತದ ಭರವಸೆ-ಕನಸುಗಳನ್ನು ಹೊತ್ತ ಚಂದ್ರಯಾನ-3 ನೌಕೆ ಯಶಸ್ವಿ ಉಡಾವಣೆ!

ಭಾರತದ ಸಂವಿಧಾನ 51ಎ(ಹೆಚ್) ಪ್ರಕಾರ ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ, ಜಿಜ್ಞಾಸೆ ಮತ್ತು ಸುಧಾರಣಾ ಮನೋಭಾವವನ್ನು ಬೆಳೆಸುವುದು ದೇಶದ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ. ಆದರೆ ಇಸ್ರೋದ ವಿಜ್ಞಾನಿಗಳು ತಾವು ಸತತವಾಗಿ ಹಲವಾರು ವರ್ಷಗಳಿಂದ ಎಲ್ಲ ಎಡರು ತೊಡರುಗಳ ನಡುವೆ ಸಂಶೋಧಿಸಿ, ಪರೀಕ್ಷಿಸಿ, ರೂಪಿಸಿರುವ ಯಾನದ ಬಗೆಗೆ ತಮಗೆ ನಂಬಿಕೆ ಇಲ್ಲವೆಂಬುದನ್ನು ಈ ಮೂಲಕ ಸಾಬೀತುಗೊಳಿಸಿದ್ದಾರೆ. ಇದರಿಂದ ಆತ್ಮಸ್ಥೆರ್ಯ ಮತ್ತು ಸಂಶೋಧನೆಗಳ ಬಗೆಗೆ ಇರುವ ಅನುಮಾನಗಳು ವ್ಯಕ್ತವಾಗುತ್ತವೆ. ವೈಜ್ಞಾನಿಕ ನಡೆಯ ಬಗೆಗೆ ಈ ರೀತಿಯಾದ ಅನುಮಾನ ಮತ್ತು ಸಂಶಯ ದೃಷ್ಟಿಗೆ ಎಡೆಯಿಲ್ಲದಂತೆ ನಡೆದುಕೊಳ್ಳಬೇಕಾಗಿರುವುದು ವೈಜ್ಞಾನಿಕ ಸಂಸ್ಥೆಗಳ ಆಶಯವಾಗಿರುತ್ತದೆ. ಈ ನಿಟ್ಟಿನಲ್ಲಿ ಮೇಲೆ ಎಸಗಿರುವ ಕೃತ್ಯವು  ಖಂಡನಾರ್ಹವಾಗಿದೆ ಮತ್ತು ಜನರನ್ನು ಮಾನಸಿಕವಾಗಿ ದುರ್ಬಲಗೊಳಿಸುತ್ತದೆ. 

ಈ ಹಿಂದೆಯೂ ಇದೇ ರೀತಿಯ ಅತಾಚುರ್ಯವನ್ನು ಆಗಿರುವುದನ್ನು ಅನೇಕ ಪ್ರಾಜ್ಞರು ಖಂಡಿಸಿದ್ದರೂ ಸಹ ಮತ್ತೊಮ್ಮೆ ಮನರಾವರ್ತನೆಯಾಗಿರುವುದು ಒಪ್ಪತಕ್ಕ ವಿಚಾರವಲ್ಲ. ಈ ನಡೆಯು ಸಂಸ್ಥೆಯ ಸಂವಿದಾನ ವಿರೋಧಿ ಮನಸ್ಥಿತಿಯನ್ನು ಪ್ರದರ್ಶಿಸಿದೆ. ಇದಕ್ಕೆ ಕಾರಣೀಭೂತರಾದ ವ್ಯಕ್ತಿಗಳಿಗೆ ಸೂಕ್ತ ಸಲಹೆ ನೀಡುವುದು ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹೆಗಾರರ ಕರ್ತವ್ಯವಾಗಿದೆ.

ಇಸ್ರೋ ಸಂಸ್ಥೆ ಪೂಜೆ ಖಂಡಿಸಿದ ಪ್ರಗತಿಪರರು..
ಡಾ. ಮೂಡ್ಯಾಕೂಡು ಚಿನ್ನಸ್ವಾಮಿ
ಪ್ರೊ. ಅಲ್ಲಮಪ್ರಭು ಬೆಟ್ಟದೂರು 
ಡಾ. ವೆಂಕಟಯ್ಯ ಅಪ್ಪಗೆರೆ
ಸನತ್ ಕುಮಾರ್ ಬೆಳಗಲಿ
ಎಲ್. ಎನ್. ಮುಕುಂದರಾಜ್‌ 
ಕೆ.ಬಿ. ಮಹದೇವಪ್ಪ
ನಾಗೇಶ್ ಅರಳಕುಪ್ಪೆ
ಡಾ. ಹುಲಿಕುಂಟೆಮೂರ್ತಿ 
ಹೆಚ್‌.ಕೆ. ವಿವೇಕಾನಂದ
ಪ್ರಭಾ ಬೆಳವಂಗಲ 

ಚಂದ್ರಯಾನ-3 ಯಶಸ್ವಿಗೆ ತಿರುಪತಿ ತಿಮ್ಮಪ್ಪನ ದರ್ಶನ; ಇಸ್ರೋ ವಿಜ್ಞಾನಿಗಳ ನಡೆಗೆ ಪ್ರಗತಿಪರ ಸಾಹಿತಿಗಳು ಖಂಡನೆ

ಪ್ರಗತಿಪರರ ನಡೆಯನ್ನು ಖಂಡಿಸಿದ ಬಿ.ಎಲ್. ಸಂತೋಷ್‌: ಇನ್ನು ಈ ಬಗ್ಗೆ ಸ್ವತಃ ಬಿಜೆಪಿ ಹಿರಿಯ ನಾಯಕ ಬಿ.ಎಲ್. ಸಂತೋಷ್‌ ಅವರು, ಇಸ್ರೋ ಸಂಸ್ಥೆಯ ಸಿಬ್ಬಂದಿ ರಾಕೆಟ್‌ ಉಡಾವಣೆಗೂ ಮುನ್ನ ತಿರುಪತಿ ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿದ್ದನ್ನು ವಿರೋಧಿಸಿದ ಪ್ರಗತಿಪರರ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಿಡಿಕಾರಿದ್ದಾರೆ. ಚಂದ್ರಯಾನ , ಮಂಗಳಯಾನದ ನಡುವಿನ ಅಂತರ ಗೊತ್ತಿಲ್ಲದ , ಎಲ್ಲದರ ಬಗ್ಗೆಯೂ ಅಭಿಪ್ರಾಯ ಹೊಂದಿರುವ , ಎಲ್ಲದರಲ್ಲೂ ಕಹಿ ಹರಡುವ ದೊಡ್ಡವರು..! ಎಂದು ಹೇಳಿದ್ದಾರೆ.

 

click me!